8ನೇ ವೇತನ ಆಯೋಗ ಜಾರಿಗೆ ನಿವೃತ್ತರ ಆಗ್ರಹ…!

ಗುಬ್ಬಿ:

    ವಿವಿದ ಇಲಾಖೆಗಳಲ್ಲಿ 36 ಕ್ಕೂ ಹೆಚ್ಚು ವರ್ಷ ಸೇವೆ ಸಲ್ಲಿಸಿ ನಿವೃತ್ತರಾಗಿ ಬರುವ ಪಿಂಚಣಿಯಿಂದ ಅವರ ಆರೋಗ್ಯ ಹಾಗೂ ಕುಟುಂಬದ ಜವಾಬ್ದಾರಿ ಹೊತ್ತು ಜೀವನ ಸಾಗಿಸುತ್ತಿರುವ ನಿವೃತ್ತ ಸರ್ಕಾರಿ ನೌಕರರಿಗೆ ಸರ್ಕಾರ 8 ನೇ ವೇತನ ಆಯೋಗದ ವರದಿ ಪ್ರಕಾರ ಪಿಂಚಣಿ ಪರಿಷ್ಕರಣೆ ಮಾಡೋಲ್ಲ ಎಂದಿರುವುದು ನಾವೆಲ್ಲಾ ಬೀದಿಗೆ ಬರುವಂತಾಗಿದೆ ಎಂದು ಗುಬ್ಬಿ ತಾಲೂಕು ನಿವೃತ್ತ ನೌಕರರ ಸಂಘದ ಅಧ್ಯಕ್ಷ ಆರ್ ಬಿ ಜಯಣ್ಣ ಕಳವಳ ವ್ಯಕ್ತಪಡಿಸಿದರು,ಇಂದು ಗುಬ್ಬಿಯ ತಾಲೂಕು ಕಚೇರಿಯ ಮುಂದೆ ಸುಮಾರು ನೂರಕ್ಕೂ ಹೆಚ್ಚು ನಿವೃತ್ತ ನೌಕರರು ಸಭೆ ಸೇರಿ ತಾಲೂಕು ದಂಡಾಡಿಕಾರಿಗಳಿಗೆ ಮನವಿ ಸಲ್ಲಿಸಿದ ಸಂದರ್ಭದಲ್ಲಿ ಮಾತನಾಡಿದರು,

   ಕೇಂದ್ರ ಸರ್ಕಾರ 8 ನೇ ವೇತನ ಆಯೋಗ ರಚನೆ ಮಾಡಿದ್ದು ಅದು ಕಾರ್ಯೋನ್ಮಕವಾಗಿ ವರದಿ ಸಲ್ಲಿಸಿದ್ದು ಈ ಪ್ರಕಾರ ಕಳೆದ ಮಾರ್ಚ ನ ಅಧಿವೇಶನದಲ್ಲಿ ಕೇಂದ್ರ ಹಣಕಾಸು ಸಚಿವೆ ನಿರ್ಮಲ ಸೀತಾರಾಮನ್ ಆರ್ಥಿಕ ಬಿಲ್ಲನ್ನು ಮಂಡಿಸುವಾಗ ಮುಂದಿವರ್ಷ ಏಪ್ರಿಲ್ ನಲ್ಲಿ ನಿವೃತ್ತಿ ಹೊಂದುವ ಸರ್ಕಾರಿ ನೌಕರರಿಗೆ ಮುಂದೆ ಯಾವುದೇ ರೀತಿಯ ಪಿಂಚಣಿ ಪರಿಷ್ಕರಣೆ ಇರುವುದಿಲ್ಲ ಎಂದು ಮಂಡಿಸಿರುತ್ತಾರೆ ಇದರಿಂದ ಎಲ್ಲಾ ನಿವೃತ್ತಿ ಸರ್ಕಾರಿ ನೌಕಕರಿಗೆ ಅನ್ಯಾಯವಾಗುತ್ತಿದ್ದು ಈ ಆದೇಶವನ್ನು ರದ್ದು ಪಡಿಸಬೇಕೆಂದು ಕೇಂದ್ರ ಸರ್ಕಾರಕ್ಕೆ ಗುಬ್ಬಿ ತಹಶೀಲ್ದಾರ್ ಮೂಲಕ ಮನವಿ ಸಲ್ಲಿಸಲಾಯಿತು

   ಈ ಸಂದರ್ಭದಲ್ಲಿ ತಹಶೀಲ್ದಾರ್ ರ ಅನುಪಸ್ಥಿತಿಯಲ್ಲಿ ಗ್ರೇಡ್-2 ತಹಶೀಲ್ದಾರ್ ಶಶಿಕಲಾ ಮನವಿ ಸ್ವೀಕರಿಸಿ ಜಿಲ್ಲಾಧಿಕಾರಿ ಗಳಿಗೆ ಕಳಿಸುವುದಾಗಿ ತಿಳಿಸಿದರು ಈ ಸಂದರ್ಭದಲ್ಲಿ ಸಂಘದ ಪ್ರಧಾನ ಕಾರ್ಯದರ್ಶಿ ರೇಣುಕಾ ಪ್ರಸಾದ್ ಖಜಾಂಚಿ ಅಪ್ಪಾಜಿ ಸಂಘಟನಾ ಕಾರ್ಯದರ್ಶಿ ಬಿ.ಬಸವರಾಜ್ ಸಹಕಾರ್ಯದರ್ಶಿ ಬಿ.ರಾಮಯ್ಯ ಸಹ ಕಾರ್ಯದರ್ಶಿ ಸಂಘಟನಾ ಕಾರ್ಯದರ್ಶಿ ಮಹಾಲಿಂಗಯ್ಯ ಉಪಾಧ್ಯಕ್ಷ ಜಿ ಗೋವಿಂದಯ್ಯ ಮತ್ತು ದೊಡ್ಡಗೌಡ್ರು ಲೆಕ್ಕ ಪರಿಶೋಧಕರಾದ ಕರಿಗಿರಿಯಪ್ಪನವರು ಜಿ. ರಾಜಣ್ಣ ಮತ್ತು ಸಿಎನ್ ಬಸವರಾಜು ಉಪಸ್ಥಿತರಿದ್ದರು

Recent Articles

spot_img

Related Stories

Share via
Copy link