ಬೆಂಗಳೂರು ಗ್ರಾಮಾಂತರ :
ನನ್ನ ಸ್ವಗ್ರಾಮ ಸಿಂಗನಾಯಕನಹಳ್ಳಿ ಕೆರೆಗೆ ಎಚ್.ಎನ್ ವ್ಯಾಲಿ ಸಂಸ್ಕರಿಸಿದ ನೀರು ಬಂದು ಕೆರೆ ತುಂಬಿದೆ. ಮೀನುಗಳು, ಪಕ್ಷಿಗಳನ್ನು ಕಾಣುವ ಜತೆ ಬಾವಿಯಲ್ಲಿಯೂ ನೀರು ಕಾಣಬಹುದು, ಅಂತರ್ಜಲ ವೃದ್ಧಿಗೆ ಸಂಸ್ಕರಿಸಿದ ವೃಷಾಭವತಿ ನೀರನ್ನು ಸ್ವಾಗತಿ ಸುತ್ತೇನೆ. ವೃಷಾಭಾವತಿ ಸಂಸ್ಕರಿಸಿದ ನೀನು ವಿರೋಧಿಸುವವರು ನನ್ನೂರಿನ ಕೆರೆಯನ್ನು ನೋಡಿ ಬನ್ನಿ ಎಂದು ಯಲಹಂಕ ಶಾಸಕ ಎಸ್.ಆರ್ ವಿಶ್ವನಾಥ್ ತಿಳಿಸಿದರು.
ಬಿಜೆಪಿ ಕಚೇರಿ ಯಲ್ಲಿ ವೃಷಭಾವತಿ ಯೋಜನೆದು ಬಗ್ಗೆ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು. ಅವರು
ನೆಲಮಂಗಲದಲ್ಲಿ ವೃಷಾಭವತಿ ಯೋಜನೆ ವಿರೋಧಿಸುವವರು ರಾಜಕೀ ಯಕ್ಕೆ ಮಾತನಾಡುತ್ತಿದ್ದಾರಾ ಅಥವಾ ಬೇರೆ ವಿಚಾರವಾ ಗೊತ್ತಿಲ್ಲ. ನಾನು ಅದರ ಬಗ್ಗೆ ಮಾತನಾಡಲ್ಲ. ಆದರೆ ದೇಶದಲ್ಲಿ ಯಾವ ಸ್ಥಳೀಯವಾದ ಕೆರೆಗೆ ಸಂಸ್ಕರಿಸಿದ ನೀರು ಸಂಗ್ರಹಣೆ ಆಗುತ್ತಿದೆ? ನೆಲಮಂಗಲದ ಕೆರೆಗಳಲ್ಲಿ ತುಂಬಿರುವ ಕಲುಷಿತ ನೀರು ನೇರವಾಗಿ ದಾಸನಪುರಕ್ಕೆ ಬರುತ್ತಿದೆ, ಈ ನೀರಿನ ಬಗ್ಗೆ ಮಾತನಾಡದವರು ಸಂಸ್ಕರಿಸಿ ಕೆರೆಗೆ ಬರುವ ನೀರಿನ ಬಗ್ಗೆ ಮಾತನಾಡಬಾರದು. ಯಾವ ಸರಕಾರಗಳು ಜನರಿಗೆ ತೊಂದರೆ ಆಗುವ ಯೋಜನೆ ತರುವುದಿಲ್ಲ, ವ್ಯವಸ್ಥೆಯಲ್ಲಿ ಸಣ್ಣ ಪುಟ್ಟ ವ್ಯತ್ಯಾಸವಾಗುತ್ತದೆ, ಅದರ ಬದಲಾವಣೆ ನಮ್ಮ ಕೈನಲ್ಲಿ ಇರಲಿದೆ ಎಂದರು.
ಜನರಿಗೆ ಮಾತ್ರ ಅನುಕೂಲ: ವೃಷಾಭವತಿಯನ್ನು ನೇರವಾಗಿ ನೋಡಿದರೆ ಆತಂಕವಾಗುತ್ತದೆ. ಆದರೆ ನಮ್ಮ ಭಾಗಕ್ಕೆ ಬರುವುದು ಸಂಸ್ಕರಣೆ ಮಾಡುವ ನೀರು, ಕ್ಷೇತ್ರದ ಶಾಸಕರು ಕೆರೆ ತುಂಬಿಸುವ ಯೋಜನೆ ತಂದು ಕೆರೆಗೆ ನೀರು ಬಂದರೆ ಶಾಸಕರಿಗೆ ಏನು ಅನುಕೂಲವಿಲ್ಲ. ಅನುಕೂಲವಾಗುವುದು ಆ ಭಾಗದ ರೈತರು ಮತ್ತು ಜನರಿಗೆ ಮಾತ್ರ, ನಾನಂತು ಅಭಿವೃದ್ಧಿ ವಿಚಾರದಲ್ಲಿ ರಾಜಕೀಯ ಮಾಡುವುದಿಲ್ಲ, ಜನರ ಒಳಿತಿನ ಯೋಜನೆಗೆ ಪಕ್ಷಾತೀತವಾಗಿ ಬೆಂಬಲಿಸುತ್ತೇನೆ
ಕಾರ್ಖಾನೆ ನೀರು ಕೆರೆಗೆ ಬರುತ್ತಿಲ್ಲವೆ:
ದೊಡ್ಡಬಳ್ಳಾಪುರ, ದಾಬಸ್ ಪೇಟೆ ಸೇರಿದಂತೆ ಕೆಲಕಡೆ ಗಳಲ್ಲಿ ಕಾರ್ಖಾನೆಯ ನೀರು ನೇರವಾಗಿ ಬೋರ್ ವೆಲ್ ಗಳ ಮೂಲಕ ಅಂತರ್ಜಲ ಸೇರುತ್ತಿದೆ ಅದು ಇನ್ನು 100 ವರ್ಷವಾದರೂ ಶುದ್ಧವಾಗಲ್ಲ ಅದೇ ರೀತಿ ಸಂಸ್ಕರಣೆ ಮಾಡದೆ ಕೆಮಿಕಲ್ ಯುಕ್ತ ನೀರನ್ನು ಕೆರೆಗಳಿಗೆ ಬಿಡುತ್ತಿದ್ದಾರೆ. ಚರಂಡಿ ಮೂಲಕ ನೀರು ಕೆರೆಗೆ ಹೋಗುತ್ತಿದೆ.
ಈ ನೀರು ಸಂಸ್ಕರಣೆ ಆಗಿದೆಯೇ ಈ ನೀರು ಅಂತರ್ಜಲಕ್ಕೆ ಹೋಗುತ್ತಿದೆ ಎಂದರೆ ಅಪಾಯವಲ್ಲವೆ? ನಮ್ಮ ಭೂಮಿಯೇ ದೊಡ್ಡಸಂಸ್ಕರಣಾ ಘಟಕ, ಅನೇಕ ಪದರ ಗಳಲ್ಲಿ ಸಂಸ್ಕರಣೆಯಾಗಿ ಅಂತರ್ಜಲಕ್ಕೆ ಹೋಗಲಿದೆ. ಸಂಸ್ಕರಣೆ ಮಾಡಿದ ನೀರು ಕೆರೆಗೆ ಬಂದರೆ ಯಾವ ಅಪಾಯವೂ ಇಲ್ಲ, ಅನಾಹುತವೂ ಇಲ್ಲ, ಯೋಜನೆ ಬರುವ ತನಕ ಅಪಸ್ವರ ಆನಂತರ ಆ ಯೋಜನೆಯ ಅನುಕೂಲ ಬಹಳಷ್ಟು ತಿಳಿಯಲಿದೆ ಎಂದು ಹೇಳಿದರು.
