ಎಸ್ಪಿ ಕಾರು ಕಂಡ ಪೊಲೀಸ್ ಠಾಣೆ ಎಸ್‌ಐ, ಸಿಬ್ಬಂದಿ ಕಕ್ಕಾಬಿಕ್ಕಿ

ತುಮಕೂರು:

 ಅಷ್ಟಕ್ಕು ಕಾರಲ್ಲಿ ಇದ್ದಿದ್ದು ಯಾರು ಗೊತ್ತಾ.?

ಪೊಲೀಸರ ಬಗ್ಗೆ ಅನೇಕು ಹಲವು ಬಗೆಯಲ್ಲಿ ಮಾತನಾಡುತ್ತಾರೆ. ಆದ್ರೇ ಅವರು ಮಾನವೀಯತೆಗೂ, ಕೆಲಸಕ್ಕಾಗಿ ಏನೆಲ್ಲಾ ಮಾಡೋದಕ್ಕೂ ಸಿದ್ಧ. ಜನಸೇವೆಯೇ, ಜನಾರ್ಧನ ಸೇವೆ ಅಂತ ಭಾವಿಸಿದ ಅಧಿಕಾರಿಗಳು ಇದ್ದಾರೆ ಎನ್ನುವುದಕ್ಕೆ, ಈ ಘಟನೆಯೇ ಸಾಕ್ಷಿ.

           ಅಂದಹಾಗೇ ಪೊಲೀಸ್ ಠಾಣೆಗೆ ಬಂದಂತ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳ ಕಾರು ಕಂಡಂತ ಠಾಣೆಯ ಎಸ್‌ಐ, ಸಿಬ್ಬಂದಿಗಳೇ ಕೆಲ ಕಾಲ ಕಕ್ಕಾಬಿಕ್ಕಿಯಾಗಿದ್ದಾರೆ. ಆದ್ರೇ.. ಅದರಲ್ಲಿ ಇದ್ದದ್ದು ಮಾತ್ರ ಬೇರೆಯೇ ಆಗಿತ್ತು. ಅದೇನ್ ಘಟನೆ ಅಂತ ಮುಂದೆ ಓದಿ..

ತುಮಕೂರು ಜಿಲ್ಲೆ ಪೊಲೀಸ್ ವರಿಷ್ಠಾಧಿಕಾರಿಗಳು ಕೆಲಸಕ್ಕೆ ಈಗ ಎಲ್ಲೆಡೆ ಮೆಚ್ಚುಗೆ, ಪ್ರಶಂಸೆಗಳು ವ್ಯಕ್ತವಾಗುತ್ತಿದೆ. ಅವರು ಮಾಡಿದ್ದಿಷ್ಟೇ.. ದೂರುದಾರರನ್ನು ಕರೆದುಕೊಂಡು ಬರೋಕೆ ಬಾಡಿಗೆ ಕಾರು ತಗೊಂಡು ಬಾ ಅಂತ ವ್ಯಕ್ತಿಗೆ, ತಮ್ಮ ಕಾರಿನಲ್ಲಿಯೇ ದೂರುದಾರರನ್ನು ಠಾಣೆಗೆ ಕರೆದುಕೊಂಡು ಹೋಗುವಂತೆ ಕಳುಹಿಸಿಕೊಟ್ಟಿರೋದಾಗಿದೆ.

ಹೌದು.. ತುಮಕೂರು ಜಿಲ್ಲೆಯ ದಂಡಿನಶಿವರ ಪೊಲೀಸ್ ಠಾಣೆಯಲ್ಲಿ ನಾಗೇಂದ್ರಪ್ಪ ಎಂಬುವರ ಮೇಲೆ ಹಲ್ಲೆಯಾದ ಕಾರಣ, ದೂರು ನೀಡಿದ್ದರು.

ದೂರು ದಾಖಲಿಸಿಕೊಂಡ ಪೊಲೀಸರು ಆರೋಪಿಗಳನ್ನು ಕರೆಸಿ, ವಿಚಾರಣೆ ನಡೆಸಿ, ಇಲ್ಲವೇ ಘಟನೆಯಲ್ಲಿ ಬಂಧಿಸಬೇಕಿತ್ತು. ಆದ್ರೇ ಇದ್ಯಾವುದನ್ನು ಮಾಡದ ದಂಡಿನಶಿವರ ಪೊಲೀಸ್ ಸಬ್ ಇನ್ಸ್ ಪೆಕ್ಟರ್ ಶಿವಲಿಂಗಪ್ಪ, ಆರೋಪಿಗಳನ್ನು ಬಂಧಿಸಲು ಬಾಡಿಗೆ ಕಾರು ತೆಗೆದುಕೊಂಡು ಬಾ ಅಂತ ದೂರುದಾನ ನಾಗೇಂದ್ರಪ್ಪಗೆ ತಿಳಿಸಿದ್ದಾರೆ.

ಅಲ್ಲಾ ಸಾರ್.. ದೂರು ಕೊಟ್ಟಿರೋ ನಾನೇ ನಿಮಗೆ ಕಾರು ಬಾಡಿಗೆ ಮಾಡಿಕೊಟ್ಟು ಆರೋಪಿಗಳನ್ನು ಬಂಧಿಸೋದಕ್ಕೆ ವ್ಯವಸ್ಥೆ ಮಾಡಬೇಕಾ ಅಂತ ಪ್ರಶ್ನಿಸಿದರೂ, ಆರೋಪಿಗಳನ್ನು ಬಂಧಿಸುವಂತೆ ಪದೇ ಪದೇ ಮನವಿ ಮಾಡಿದ್ರೂ ದಂಡಿನಶಿವರ ಠಾಣೆ ಪೊಲೀಸರು ಜುಮ್ ಅಂದಿಲ್ಲ.

ಇದರಿಂದಾಗಿ ಬೇಸತ್ತ ದೂರುದಾನ ನಾಗೇಂದ್ರಪ್ಪ ತುಮಕೂರು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಿಗೆ ದೂರು ನೀಡಿದ್ದಾರೆ. ಈ ವಿಷಯ ತಿಳಿದಂತ ಎಸ್ಪಿ ರಾಹುಲ್ ಕುಮಾರ್, ತಮ್ಮ ಕಾರನ್ನೇ ದೂರುದಾರನಿಗೆ ಕೊಡ್ಡು, ಈ ಕಾರಿನ್ನು ತೆಗೆದುಕೊಂಡು ಹೋಗು, ಪೊಲೀಸರಿಗೆ ಆರೋಪಿಗಳನ್ನು ಬಂಧಿಸೋದಕ್ಕೆ ಕೊಡು ಅಂತ ಕೊಟ್ಟು ಕಳುಹಿಸಿದ್ದಾರೆ.

ಎಸ್ಪಿ ಕಾರಿನ್ನೇರಿದಂತ ದೂರುದಾರ ನಾಗೇಂದ್ರಪ್ಪ, ದಂಡಿನಶಿವರ ಪೊಲೀಸ್ ಠಾಣೆಗೆ ತೆರಳಿದ್ದಾರೆ. ಯಾವಾಗ ಎಸ್ಪಿ ಕಾರು ಠಾಣೆಗೆ ಬಂತೋ ಅಲ್ಲಿದ್ದಂತ ಪೊಲೀಸರು ಕಕ್ಕಾಬಿಕ್ಕಿಯಾಗಿದ್ದಾರೆ.

ಎಸ್ಪಿ ಸಾರ್ ಬಂದ್ರು ಅಂತ ಶಾಕ್ ಆಗಿದ್ದಾರೆ. ಆದ್ರೇ.. ಅದರಿಂದ ಇಳಿದಂತ ದೂರುದಾರ ನಾಗೇಂದ್ರಪ್ಪ, ಸಾರ್ ಆರೋಪಿಗಳನ್ನು ಬಂಧಿಸೋದಕ್ಕೆ ಎಸ್ಪಿಯವರೇ ಅವರ ಕಾರು ಕೊಟ್ಟು ಕಳುಹಿಸಿದ್ದಾರೆ ಅಂತ ಸಬ್ ಇನ್ಸ್ ಪೆಕ್ಟರ್ ಶಿವಲಿಂಗಪ್ಪಗೆ ಹೇಳಿದ್ದೇ ತಡ ಮತ್ತಷ್ಟು ಶಾಕ್ ಆಗಿದೆ.

ಈಗ ಎಸ್ಪಿ ರಾಹುಲ್ ಕುಮಾರ್ ಅವರ ಕಾರ್ಯಕ್ಕೆ ಜನರಿಂದ ಮೆಚ್ಚುಗೆಗಳ ಮಹಾಪೂರವೇ ಹರಿದು ಬಂದಿದೆ. ಅಲ್ಲದೇ ಪೊಲೀಸರ ಬಗ್ಗೆ ಸಾರ್ವಜನಿಕರಲ್ಲಿ ಮತ್ತಷ್ಟು ಗೌರವ ಹೆಚ್ಚುವಂತೆ ಮಾಡಿದೆ.

          ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link