ಅತ್ಯಂತ ವಿಪರ್ಯಾಸದ ಸಂಗತಿ ಎಂದರೆ ಅರ್ಹ ಕೆಲವೆ ಮಕ್ಕಳು ಈ ಸರ್ಕಾರಿ ವಸತಿಯುತ ಶಾಲೆಗಳಿಗೆ ಓದಲು ಅರ್ಹತೆ ಪಡೆದಿದ್ದು ಉಳಿದ ಮಕ್ಕಳಿಗೆ ಆಯಾ ನಗರ, ಗ್ರಾಮೀಣ ಪ್ರದೇಶದ ಮಕ್ಕಳಿಗೆ ಸ್ಥಳೀಯ ಸರ್ಕಾರಿ ಶಾಲೆಗಳು ಅನಿವಾರ್ಯವೂ ಹೌದು.
ನಂಬಿದರೆ ನಂಬಿ ಬಿಟ್ಟರೆ ಬಿಡಿ ತಾಲೂಕಿನ ಬಹುಪಾಲು ಸರ್ಕಾರಿ ಶಾಲೆಗಳಿಗೆ ಕಿಟಕಿ ಬಾಗಿಲುಗಳೇ ಇಲ್ಲ. ಮಳೆ ಬಂದಾಗ ಒಡೆದ ಹೆಂಚುಗಳ ಮೂಲಕ ಮಳೆಯ ನೀರು ಶಾಲೆಯಲ್ಲಿ ಕೂತ ಮಕ್ಕಳ ಮೇಲೆಯೇ ಸುರಿಯುವಂತಹ ಸ್ಥಿತಿ ಇದೆ. ಕೆಲವು ಶಾಲೆಗಳ ಕೊಠಡಿಗಳ ಗೋಡೆಗಳು ಬಿರುಕುಬಿಟ್ಟು ಅಗಲೋ ಈಗಲೂ ಬೀಳುವ ಸ್ಥಿತಿಯಲ್ಲಿಯೂ ಇವೆ.
ಇನ್ನೂ ಕೆಲ ಸರ್ಕಾರಿ ಶಾಲೆಯ ಹಳೆಯ ಕೊಠಡಿಗಳು, ಶಾಲಾ ಮೈದಾನಗಳು ಕುಡುಕರ ತಾಣಗಳಾಗಿವೆ. ಬೆಳಗಾಯಿತೆಂದರೆ ತಾಲೂಕಿನ ಬಹುತೇಕ ಸರ್ಕಾರಿ ಶಾಲೆಗಳ ಆವರಣಗಳು ಮದ್ಯದ ಖಾಲಿ ಬಾಟಲ್‌ಗಳಿಂದಲೂ ರಾರಾಜಿಸುತ್ತಿವೆ.
ತಾಲೂಕಿನ ಚಿಕ್ಕಸಂದ್ರ ಕಾವಲ್, ಬುಕ್ಕಾಪಟ್ಟಣ, ಹೊನ್ನಗೊಂಡನಹಳ್ಳಿ, ಹೊಸೂರು ಸೇರಿದಂತೆ ಹಲವು ಸರ್ಕಾರಿ ಪ್ರೌಢಶಾಲೆಗಳ ಕೊಠಡಿಗಳು ವ್ಯಾಪಕ ದುರಸ್ಥಿ ಕಾರ್ಯವನ್ನು ಕಾಣಬೇಕಿದೆ. ತಾಲೂಕಿನ ಪಟ್ಟನಾಯಕನಹಳ್ಳಿಯ ಸರ್ಕಾರಿ ಹಿ.ಪ್ರಾ. ಪಾಠಶಾಲೆಯ ೬ ಕೊಠಡಿಗಳ ದುರಸ್ತಿ ಆಗಬೇಕಿದ್ದು ಚಂಗಾವರ, ವಾಜರಹಳ್ಳಿ, ಯಂಜಲಗೆರೆ, ಹೊನ್ನೇನಹಳ್ಳಿಕುಂಬಾರಹಳ್ಳಿ, ಶಿರಾ ನಗರದ ಜಿ.ಕೆ.ಎಂ.ಹೆಚ್.ಪಿ.ಬಿ.ಎಸ್, ಸಂತೆಪೇಟೆ ಶಾಲೆ, ಶಿರಾದ ಮಟನ್ ಮಾರ್ಕೆಟ್ ರಸ್ತೆಯ ಪ್ರಾ.ಶಾಲೆ ಸೇರಿದಂತೆ ಬಹುತೇಕ ಶಾಲೆಗಳು ಬೃಹತ್ ಪ್ರಮಾಣದಲ್ಲಿ ದುರಸ್ಥಿ ಕಾಣಬೇಕಿದೆ.
ಶೈಕ್ಷಣಿಕವಾಗಿ ಶಿರಾ ಭಾಗದ ಸರ್ಕಾರಿ ಶಾಲೆಗಳ ದುಸ್ಥಿತಿಯನ್ನು ಕಂಡರೆ ನಿಜಕ್ಕೂ ಬೆಚ್ಚಿ ಬೀಳಲೇಬೇಕು. ತಾಲೂಕಿನಲ್ಲಿರುವ ಒಟ್ಟು ಶಾಲೆಗಳ ಪೈಕಿ ಸುಮಾರು ೭೬ ಶಾಲೆಗಳ ಕಟ್ಟಡಗಳು ಸಂಪೂರ್ಣವಾಗಿ ದುಸ್ಥಿತಿಯತ್ತ ಸಾಗಿವೆ. ನೊಂದು ನಲುಗುತ್ತಿರುವ ಈ ೭೬ ಶಾಲೆಗಳಿಗೆ ಸುಮಾರು ೧೦೧ಕ್ಕೂ ಹೆಚ್ಚು ನೂತನ ಕೊಠಡಿಗಳ ಅಗತ್ಯವಿದೆ.
ತಾಲೂಕಿನಲ್ಲಿ 30ಕ್ಕಿಂತಲೂ ಹೆಚ್ಚು ಮಕ್ಕಳಿರುವ ಸರ್ಕಾರಿ ಕಿರಿಯ ಪ್ರಾಥಮಿಕ ಪಾಠಶಾಲೆಗಳಲ್ಲಿ ಕೊಠಡಿಗಳ ತೀವ್ರತೆಯಂತೂ ಹೆಚ್ಚಾಗಿದೆ. ೪೫ ಕೊಠಡಿಗಳು ಸಣ್ಣದಾಗಿ ದುರಸ್ಥಿಗೊಳ್ಳಬೇಕಾಗಿದ್ದು ೫೯ಕ್ಕೂ ಹೆಚ್ಚು ಶಾಲೆಗಳು ಬೃಹತ್ ಪ್ರಮಾಣದಲ್ಲಿ ದುರಸ್ಥಿಗೊಳ್ಳಬೇಕಿದೆ. ಈಗಾಗಲೇ ನೊಂದು-ಬೆಂದು ಅರೆ ಜೀವವಾಗಿರುವ ಸುಮಾರು 34ಕ್ಕೂ ಹೆಚ್ಚು ಶಾಲೆಗಳನ್ನು ನೆಲಸಮಗೊಳಿಸುವ ಅಗತ್ಯವೂ ಇದೆ.
ಒಂದು ಅಚ್ಚರಿಯ ಸಂಗತಿ ಎಂದರೆ ಹಾಲಿ ಶಿರಾ ನಗರದಲ್ಲಿರುವ ಇಡೀ ತಾಲೂಕಿನ ಸರ್ಕಾರಿ ಶಾಲೆಗಳ ಉಸ್ತುವಾರಿ ಹೊತ್ತಿರುವ ಕ್ಷೇತ್ರ ಶಿಕ್ಷಣಾದಿಕಾರಿಗಳ ಕಛೇರಿಯೇ ಸುಮಾರು ೬೦-೭೦ ವರ್ಷಕ್ಕೂ ಹೆಚ್ಚು ಹಳೆಯದ್ದಾಗಿದ್ದು ಮಳೆ ಬಂದರೆ ಈಗಲೂ ಸೋರುತ್ತಿದೆ. ಶಾಲೆಗಳ ಕಡತಗಳ, ಶಿಕ್ಷಕರ ಉಸ್ತುವಾರಿ ಹೊತ್ತ ಈ ಇಲಾಖೆಗೆ ಹೊಸದೊಂದು ಕಟ್ಟಡಡವಿಲ್ಲದೆ ನಲುಗುತ್ತಿದೆ. ಮಳೆ ಬಂದರೆ ಇಲಾಖೆಯ ಕಡಗಳೂ ನೆನೆದು ಹೋಗುತ್ತಿವೆ. ಸಂಪೂರ್ಣವಾಗಿ ವಿಫಲರಾಗಿದ್ದು ಇನ್ನಾದರೂ ಸರ್ಕಾರ ಹಾಗೂ ಜನಪ್ರತಿನಿಧಿಗಳು ಕಣ್ಣು ತೆರೆಯುವರೇನೋ ಕಾದು ನೋಡಬೇಕಿದೆ.
ನಂಬಿದರೆ ನಂಬಿ ಬಿಟ್ಟರೆ ಬಿಡಿ ತಾಲೂಕಿನ ಬಹುಪಾಲು ಸರ್ಕಾರಿ ಶಾಲೆಗಳಿಗೆ ಕಿಟಕಿ ಬಾಗಿಲುಗಳೇ ಇಲ್ಲ. ಮಳೆ ಬಂದಾಗ ಒಡೆದ ಹೆಂಚುಗಳ ಮೂಲಕ ಮಳೆಯ ನೀರು ಶಾಲೆಯಲ್ಲಿ ಕೂತ ಮಕ್ಕಳ ಮೇಲೆಯೇ ಸುರಿಯುವಂತಹ ಸ್ಥಿತಿ ಇದೆ. ಕೆಲವು ಶಾಲೆಗಳ ಕೊಠಡಿಗಳ ಗೋಡೆಗಳು ಬಿರುಕುಬಿಟ್ಟು ಅಗಲೋ ಈಗಲೂ ಬೀಳುವ ಸ್ಥಿತಿಯಲ್ಲಿಯೂ ಇವೆ.
ಇನ್ನೂ ಕೆಲ ಸರ್ಕಾರಿ ಶಾಲೆಯ ಹಳೆಯ ಕೊಠಡಿಗಳು, ಶಾಲಾ ಮೈದಾನಗಳು ಕುಡುಕರ ತಾಣಗಳಾಗಿವೆ. ಬೆಳಗಾಯಿತೆಂದರೆ ತಾಲೂಕಿನ ಬಹುತೇಕ ಸರ್ಕಾರಿ ಶಾಲೆಗಳ ಆವರಣಗಳು ಮದ್ಯದ ಖಾಲಿ ಬಾಟಲ್‌ಗಳಿಂದಲೂ ರಾರಾಜಿಸುತ್ತಿವೆ.
ಶೈಕ್ಷಣಿಕವಾಗಿ ಶಿರಾ ಭಾಗದ ಸರ್ಕಾರಿ ಶಾಲೆಗಳ ದುಸ್ಥಿಯನ್ನು ಕಂಡರೆ ನಿಜಕ್ಕೂ ಬೆಚ್ಚಿ ಬೀಳಲೇಬೇಕು. ತಾಲೂಕಿನಲ್ಲಿರುವ ಒಟ್ಟು ಶಾಲೆಗಳ ಪೈಕಿ ಸುಮಾರು 76 ಶಾಲೆಗಳ ಕಟ್ಟಡಗಳು ಸಂಪೂರ್ಣವಾಗಿ ದುಸ್ಥಿತಿಯತ್ತ ಸಾಗಿವೆ. ನೊಂದು ನಲುಗುತ್ತಿರುವ ಈ 76 ಶಾಲೆಗಳಿಗೆ ಸುಮಾರು 101ಕ್ಕೂ ಹೆಚ್ಚು ನೂತನ ಕೊಠಡಿಗಳ ಅಗತ್ಯವಿದೆ.