ಮಾಲ್ಡೀವ್ಸ್ : ಅಧ್ಯಕ್ಷರ ಮೇಲೆ ಹೆಚ್ಚಿದ ಒತ್ತಡ…!

ಮಾಲೆ:

    ಭಾರತಕ್ಕೆ ಅವಮಾನ ಮಾಡಿದ್ದಕ್ಕಾಗಿ ಭಾರತದ ಪ್ರಧಾನಿ ಮೋದಿ, ಭಾರತೀಯರಲ್ಲಿ ಕ್ಷಮೆ ಕೇಳುವಂತೆ ಮಾಲ್ಡೀವ್ಸ್ ಅಧ್ಯಕ್ಷರಿಗೆ ವಿಪಕ್ಷಗಳಿಂದ ಒತ್ತಡ ಹೆಚ್ಚಾಗತೊಡಗಿದೆ.

    ಮಾಲ್ಡೀವ್ಸ್ ಜುಮ್ಹೂರಿ ಪಾರ್ಟಿಯ ನಾಯಕ ಕಾಸಿಮ್ ಇಬ್ರಾಹಿಮ್  ಮಾಲ್ಡೀವ್ಸ್ ಅಧ್ಯಕ್ಷ ಮೊಹಮ್ಮದ್ ಮುಯಿಝುಗೆ ಪ್ರಧಾನಿ ಬಳಿ ಕ್ಷಮೆ ಕೋರುವಂತೆ ಸಲಹೆ ನೀಡಿದ್ದಾರೆ.

    ಮಾಲ್ಡೀವಿಯನ್ ಸಂಸತ್ತಿನಲ್ಲಿ ಬಹುಮತವನ್ನು ಹೊಂದಿರುವ ದೇಶದ ಪ್ರಮುಖ ಪ್ರತಿಪಕ್ಷ MDP, ತಮ್ಮ ಅಧ್ಯಕ್ಷರನ್ನು ಪದಚ್ಯುತಗೊಳಿಸುವ ಪ್ರಸ್ತಾವನೆಯನ್ನು ಸಲ್ಲಿಸಲು ಯೋಜಿಸಿದೆ ಎಂಬ ವರದಿಗಳು ಪ್ರಕಟವಾಗುತ್ತಿದ್ದಂತೆಯೇ ವಿಪಕ್ಷದ ನಾಯಕರು ಅಧ್ಯಕ್ಷರನ್ನು ಕ್ಷಮೆ ಕೇಳುವಂತೆ ಒತ್ತಾಯಿಸಿದ್ದಾರೆ.  

   “ಯಾವುದೇ ದೇಶಕ್ಕೆ ಸಂಬಂಧಿಸಿದಂತೆ, ವಿಶೇಷವಾಗಿ ನೆರೆಹೊರೆಯ ದೇಶಕ್ಕೆ ಸಂಬಂಧಿಸಿದಂತೆ, ನಾವು ಸಂಬಂಧದ ಮೇಲೆ ಪರಿಣಾಮ ಬೀರುವ ರೀತಿಯಲ್ಲಿ ಮಾತನಾಡಬಾರದು. ನಮ್ಮ ರಾಜ್ಯಕ್ಕೆ ನಾವು ಬಾಧ್ಯತೆಯನ್ನು ಹೊಂದಿದ್ದೇವೆ ಅದನ್ನು ಪರಿಗಣಿಸಬೇಕು. ಈ ಹಿಂದಿನ ಅಧ್ಯಕ್ಷ ಸೋಲಿಹ್ ಅವರು ಈ ಬಾಧ್ಯತೆಯನ್ನು ಪರಿಗಣಿಸಿದ್ದಾರೆ ಮತ್ತು “ಇಂಡಿಯಾ ಔಟ್” ಎಂಬ ಅಭಿಯಾನವನ್ನು ನಿಷೇಧಿಸುವ ಆದೇಶವನ್ನು ಹೊರಡಿಸಿದ್ದರು.

     ಈಗ, ಮಾಲ್ಡೀವ್ಸ್ ನ ಮಾಜಿ ಅಧ್ಯಕ್ಷ ಅಬ್ದುಲ್ಲಾ ಯಮೀನ್ ಇಂಡಿಯಾ ಔಟ್ ಅಭಿಯಾನದಲ್ಲಿ ತಮ್ಮೊಂದಿಗೆ ಭಾಗವಹಿಸಿದ ಮುಯಿಝು ಅವರು ಈ ಹಿಂದಿನ ಅಧ್ಯಕ್ಷರ ಆದೇಶವನ್ನು ಏಕೆ ರದ್ದುಗೊಳಿಸಲಿಲ್ಲ ಎಂದು ಪ್ರಶ್ನಿಸುತ್ತಿದ್ದಾರೆ,” ಎಂದು ಪ್ರತಿಪಕ್ಷದ ನಾಯಕರು ಪ್ರಶ್ನಿಸಿದ್ದಾರೆ.

    ಈ ಹಿಂದಿನ ಅಧ್ಯಕ್ಷರ ನಿರ್ಧಾರವನ್ನು ತೆಗೆದುಹಾಕಿದರೆ ಅದು ರಾಷ್ಟ್ರಕ್ಕೆ ನಷ್ಟವಾಗುತ್ತದೆ. ಅದು ಮಾಡಲು ಸಾಧ್ಯವಿಲ್ಲ. ಮುಯಿಝು ಈ ಹಿಂದಿನ ಆದೇಶವನ್ನು ರದ್ದುಗೊಳಿಸಬಾರದು ಹಾಗೂ ಚೀನಾ ಪ್ರವಾಸದ ಬಳಿಕ ತಾವು ನೀಡಿದ್ದ ಹೇಳಿಕೆಗೆ ಸಂಬಂಧಿಸಿದಂತೆ ಪ್ರಧಾನಿ ಮೋದಿ ಅವರಲ್ಲಿ ಕ್ಷಮೆ ಕೇಳಬೇಕೆಂದು ಹೇಳುತ್ತೇನೆ ಎಂದು ಪ್ರತಿಪಕ್ಷದ ಮುಖಂಡ ಖಾಸಿಂ ಇಬ್ರಾಹಿಂ ಹೇಳಿದ್ದಾರೆ. 

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page SUBSCRIBE ಮಾಡಿ

Recent Articles

spot_img

Related Stories

Share via
Copy link
Powered by Social Snap