ವಿದ್ಯಾರ್ಥಿಯ ಪೋಷಕರಿಂದ ಶಿಕ್ಷಕಿ ಹಲ್ಲೆ : ಕ್ರಮ ಕೈಗೊಳ್ಳಲು ಸಿ.ಎಂಗೆ ಮನವಿ

ಬೆಂಗಳೂರು:

     ಕೋಲಾರ ಜಿಲ್ಲೆ, ಬಂಗಾರಪೇಟೆಯ ಶಾಲಾ ಶಿಕ್ಷಕಿ ಮಂಜುಳರವರ ಮೇಲೆ ಶಾಲೆಯ ವಿದ್ಯಾರ್ಥಿಯ ಪೋಷಕರು ವಿನಾಕರಣ ಮಾರಣಂತಿಕ ಹಲ್ಲೆ, ಅವಾಚ್ಯ ಶಬ್ಧಗಳಿಂದ ನಿಂದನೆ ಮಾಡಿದ್ದಾರೆ ಈ ಘಟನೆಯನ್ನು ಖಂಡಿಸಿ ಕರ್ನಾಟಕ ಸರ್ಕಾರ ಮಹಿಳಾ ನೌಕರರ ಸಂಘದ ಅಧ್ಯಕ್ಷೆ ರೋಶನಿಗೌಡರವರು, ಸಲಹೆಗಾರರಾದ ಸುಜಾತ, ಸಂಘಟನಾ ಕಾರ್ಯದರ್ಶಿ ಮಲ್ಲಿಕಾರವರು ಸಂಘದ ಪದಾಧಿಕಾರಿಗಳು, ಸದಸ್ಯರುಗಳು ಭೇಟಿ ನೀಡಿ, ಹಲ್ಲೆಯಾದ ಮಹಿಳೆಗೆ ಧೈರ್ಯ ತುಂಬಿ, ಸ್ವಾಂತನ ಹೇಳಿದರು.

    ಇದೇ ಸಂದರ್ಭದಲ್ಲಿ ರೋಶನಿಗೌಡರವರು ಮಾತನಾಡಿ ಶಿಕ್ಷಕರು ಎಂದರೆ ದೇವರ ಸಮಾನ ಎಂದು ಭಾವಿಸುವ ನಾವೆಲ್ಲ, ಮಹಿಳೆಯರು ಮೇಲೆ ಹಲ್ಲೆ, ದೌರ್ಜನ್ಯ ನೋಡಿದರೆ ಇಡಿ ನಾಗರಿಕ ಸಮಾಜ ತಲೆ ತಗ್ಗಿಸುವಂತಾಗಿದೆ. 

   ವಿದ್ಯಾರ್ಥಿ ಪಾಠ ಹೇಳಿಕೊಡುವ ಅಮಾಯಕಿ ಶಿಕ್ಷಕಿ ಮಂಜುಳರವರು ಅವಾಚ್ಯ ಶಬ್ದ ಬಳಕೆ ಮಾಡಿ, ಹಲ್ಲೆ ಮಾಡಿರುವುದನ್ನ ನಮ್ಮ ಸಂಘ ಖಂಡನೆ ವ್ಯಕ್ತಪಡಿಸುತ್ತದೆ.ಪೊಲೀಸ್ ಇಲಾಖೆ ಕೊಡಲೆ ಅರೋಪಿಗಳನ್ನು ಬಂಧಿಸಬೇಕು ಇಲ್ಲದೇ ಹೋದರೆ ಜಿಲ್ಲಾಧಿಕಾರಿಗಳ ಕಚೇರಿ ಮುಂದೆ ಪ್ರತಿಭಟನೆ ಮಾಡಲಾಗುವುದು.

    ಸರ್ಕಾರಿ ನೌಕರರು ಆಗಿರಬಹುದು ಅಥವಾ ಬೇರೆ ಇಲಾಖೆ ಮಹಿಳಾ ನೌಕರರು ಆಗಿರಬಹುದು ಮಹಿಳೆಯರು ಮೇಲಿನ ಹಲ್ಲೆಯನ್ನು ಖಂಡಿಸುತ್ತೇವೆ. ಮುಖ್ಯಮಂತ್ರಿಗಳು ಕೊಡಲಿ ಮಧ್ಯ ಪ್ರವೇಶ ಮಾಡಿ ಕ್ರಮ ಕೈಗೊಳ್ಳಬೇಕು ಮಹಿಳಾ ನೌಕರರಿಗೆ ರಕ್ಷಣೆ ನೀಡಬೇಕು ಎಂದು ಮನವಿ ಸಲ್ಲಿಸಿದರು.

Recent Articles

spot_img

Related Stories

Share via
Copy link