ನವದೆಹಲಿ:
ದೇಶಾದ್ಯಂತ ಕುತೂಹಲ ಮೂಡಿಸಿದ್ದಂತ ಪಂಚ ರಾಜ್ಯಗಳ ಚುನಾವಣೆಯ ಮತದಾನ ಮುಕ್ತಾಯಗೊಂಡಿದೆ. ಇನ್ನೂ ಮಾರ್ಚ್ 10ರ ನಾಳೆ ಫಲಿತಾಂಶ ಘೋಷಣೆಯಾಗಲಿದೆ.
ಉತ್ತರ ಪ್ರದೇಶದ 403, ಪಂಜಾಬ್ ನ 177, ಉತ್ತರಾಖಂಡದ 70, ಮಣಿಪುರದ 60, ಹಾಗೂ ಗೋವಾದ 40 ಸ್ಥಾನ ಸೇರಿದಂತೆ 690 ಸ್ಥಾನಗಳಿಗೆ ನಡೆದಂತ ವಿಧಾನಸಭೆಯ ಚುನಾವಣೆಯ ಫಲಿತಾಶ ನಾಳೆ ಘೋಷಣೆಯಾಗಲಿದೆ.
ಮತದಾನದ ನಂತ್ರ ಮತಯಂತ್ರಗಳನ್ನು ಸ್ಟ್ರಾಂಗ್ ರೂಂಗಳಲ್ಲಿ ಸುರಕ್ಷಿತವಾಗಿರಿಸಲಾಗಿದೆ. ಗುರುವಾರ ಮುಂಜಾನೆ 7 ಗಂಟೆಗೆ ಮತ ಏಣಿಕೆ ಆರಂಭವಾಗಿಲಿದ್ದು, ಮಧ್ಯಾಹ್ನದ ವೇಳೆಗೆ ಫಲಿತಾಶ ಪ್ರಕಟವಾಗುವ ಸಾಧ್ಯತೆ ಇದೆ.
ಅಂದಹಾಗೇ ಗೋವಾ, ಪಂಜಾಬ್, ಉತ್ತರಾಖಂಡಗಳಲ್ಲಿ ಒಂದೇ ಹಂತದಲ್ಲಿ ಮತದಾನ ನಡೆಸಲಾಗಿತ್ತು. ಮಣಿಪುರ 2 ಹಂತದಲ್ಲಿ, ಉತ್ತರ ಪ್ರದೇಶದಲ್ಲಿ 7 ಹಂತಗಳಲ್ಲಿ ಮತದಾನ ನಡೆದಿತ್ತು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
