ಬೆಂಗಳೂರು:
ಶ್ರೀಮಂತರು, ಪ್ರತಿ ಪಕ್ಷಗಳು ಅಕ್ಕಿಯನ್ನು ಪಡಿತರವೆಂದು ನೋಡಬಹುದು, ಆದರೆ ನನ್ನಂತಹ ಕೋಟ್ಯಂತರ ಬಡವರ ಪಾಲಿಗೆ ಅಕ್ಕಿ ಎಂದರೆ ದೇವರು. ಅನ್ನಭಾಗ್ಯ ಜಾರಿಗೊಳಿಸಿರುವ ಮುಖ್ಯಮಂತ್ರಿಯವರಿಗೆ ಅಭಿನಂದನೆ ಸಲ್ಲಿಸುತ್ತೇನೆ’ ಎಂದು ಶಾಸಕ ಪ್ರದೀಪ್ ಈಶ್ವರ್ ಹೇಳಿದ್ದಾರೆ.
ಇಂಗ್ಲಿಷ್ ಇರೋದೇ ತಪ್ಪು ಮಾತಾಡೋಕೆ, ಆದರೆ ಕನ್ನಡ ಇರೋದು ಸರಿಯಾಗಿ ಮಾತನಾಡಲು ಎಂದು ಪ್ರದೀಪ್ ಈಶ್ವರ್ ಹೇಳಿದ್ದಾರೆ. ಅನ್ನಭಾಗ್ಯ ಶ್ರೀಮಂತರ ದೃಷ್ಟಿಯಲ್ಲಿ ರೇಷನ್ ಅಷ್ಟೇ. ಆದರೆ ನನ್ನಂತವನ ದೃಷ್ಟಿಯಲ್ಲಿ ಅನ್ನ ಎನ್ನುವುದು ದೇವರು.
ಗೃಹಜ್ಯೋತಿ ಕೇವಲ ಮನೆಯನ್ನು ಬೆಳಗುತ್ತಿಲ್ಲ. ಕೋಟ್ಯಂತರ ಮಕ್ಕಳು ತಡರಾತ್ರಿಯವರೆಗೆ ಓದಲು ಸಹಾಯಕವಾಗಿದೆ. ಕನ್ನಡ ಮಾಧ್ಯಮದ ಶಾಲೆಗಳನ್ನು ಉಳಿಸಲು ಆದ್ಯತೆ ನೀಡಬೇಕಿದೆ. ಅದರ ಬಗ್ಗೆ ಸಂಬಂಧಿಸಿದ ಸಚಿವರು ಸೂಕ್ತ ಕ್ರಮ ತೆಗೆದುಕೊಳ್ಳಬೇಕು ಎಂದು ಒತ್ತಾಯಿಸಿದರು.
ಸರ್ಕಾರಿ ಆಸ್ಪತ್ರೆಯ ಚಿಕಿತ್ಸಾ ಗುಣಮಟ್ಟ ಚೆನ್ನಾಗಿರುವಂತೆ ನೋಡಿಕೊಳ್ಳಬೇಕು. ಉತ್ತಮ ಚಿಕಿತ್ಸೆ ಸಿಗದೆ ನನ್ನ ಅಪ್ಪ-ಅಮ್ಮನನ್ನು ಕಳೆದುಕೊಂಡೆ. ಅಂತಹ ಸ್ಥಿತಿ ಯಾರಿಗೂ ಬರಬಾರದು. ಅದಕ್ಕಾಗಿ ಸರ್ಕಾರಿ ಆಸ್ಪತ್ರೆ ಉಳಿಸಬೇಕು. ಸಿದ್ದರಾಮನಹುಂಡಿಯಲ್ಲಿ ಹುಟ್ಟಿದ ಸಿದ್ದರಾಮಯ್ಯನವರಿಗೆ ಹಸಿವಿನ ಅನುಭವವಿದೆ. ಅದಕ್ಕಾಗಿ ಅನ್ನಭಾಗ್ಯ ತಂದಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ