ನವದೆಹಲಿ:
ದೆಹಲಿ ಬಜೆಟ್ ಅಧಿವೇಶನಕ್ಕೆ ಇನ್ನೂ 4ದಿನ ಬಾಕಿ ಇರುವಾಗಲೆ ಶಾಸಕರು ಮತ್ತು ಸಚಿವರ ಸಂಬಳ ಮತ್ತು ಭತ್ಯೆಗಳನ್ನು ಶೇ 66ಕ್ಕಿಂತ ಜಾಸ್ತಿ ಹೆಚ್ಚಿಸಲಾಗಿದೆ.ದೆಹಲಿ ಸರ್ಕಾರದ ಕಾನೂನು ಇಲಾಖೆಯ ಅಧಿಸೂಚನೆಯ ಪ್ರಕಾರ, ಶಾಸಕರು ಈಗ ಪ್ರತಿ ತಿಂಗಳು 90,000 ರೂ. ಗಳನ್ನು ಪಡೆಯುತ್ತಾರೆ. ಈ ಹಿಂದೆ 54,000 ರೂ. ಪಡೆಯುತ್ತಿದ್ದರು.
ಅಧಿಸೂಚನೆಯ ಪ್ರಕಾರ, ಮುಖ್ಯಮಂತ್ರಿ ಮತ್ತು ಸಚಿವರು, ಸ್ಪೀಕರ್, ಉಪಸಭಾಪತಿ, ಮುಖ್ಯ ಸಚೇತಕ ಮತ್ತು ವಿರೋಧ ಪಕ್ಷದ ನಾಯಕರ ವೇತನ ಮತ್ತು ಭತ್ಯೆಗಳನ್ನು ತಿಂಗಳಿಗೆ 72,000 ರೂ.ಗಳಿಂದ 1,70,000 ರೂ.ಗೆ ಹೆಚ್ಚಿಸಲಾಗಿದೆ.
![](https://prajapragathi.com/wp-content/uploads/2023/03/Untitled-7-10.jpg)