ತುಮಕೂರು:
ತುಮಕೂರು ಜಿಲ್ಲೆಯ ಕೊರಟಗೆರೆ ತಾಲ್ಲೋಕ್ ಸಿ.ಎನ್. ದುರ್ಗ ಹೋಬಳಿಯ ಗೌಜಗಲ್ಲು ಗ್ರಾಮದ ಚಿಕ್ಕಬಸಯ್ಯ ಮನೆಯಲ್ಲಿ ದಿನಾಂಕ: 10- 11-2021ರಂದು ಬೆಳ್ಳಿಗೆ ಒಂದು ಕೆ. ಜಿ. 50 ಗ್ರಾಂ ಕರಡಿಯ ಮಾಂಸವನ್ನು ವಶಪಡಿಸಿಕೊಂಡು ನಂತರ ಸದರಿ ಕಾಡುಪ್ರಾಣಿಯ (ಕರಡಿ) ಮಾಂಸವೆಂದು ದೃಢೀಕರಿಸಲು ಸುತ್ತ ಮುತ್ತ ಸ್ಥಳವನ್ನು ಪರಿಶೀಲಿಸಿ ಹುಡುಕಾಡಿ ನಿರಂತರ ಪ್ರಯತ್ನದಿಂದ
ದಿನಾಂಕ 11- 12- 2021 ರಂದು 11.00 ಗಂಟೆಗೆ ಗೌಜಗಲ್ಲು ಗ್ರಾಮದ ಸ.ನಂ. ಗೋವಿಂದಪ್ಪನವರ ಜಮೀನಿನ ಬಂಡೆಯ ಮೇಲೆ ಕಾಡು ಪ್ರಾಣಿಯಾದ ಕರಡಿಯ ದೇಹವನ್ನು ಕತ್ತರಿಸಿ ಮಾಂಸವನ್ನಾಗಿ ಪರಿವರ್ತಿಸಿರುವ ಸ್ಥಳವನ್ನು ಪತ್ತೆಮಾಡಿ ಸ್ಥಳಪರಿಶೀಲಿಸಿದಾಗ ಕರಡಿಯ ಮಾಂಸವನ್ನು ಕತ್ತರಿಸಿರುವ ದೇಹದ ಕೆಲವು ಭಾಗಗಳು ಕೃತ್ಯಕ್ಕೆ ಬಳಸಿರುವ ಒಂದು ಮುಚ್ಚು ಸ್ಥಳದಲ್ಲಿ ದೊರೆತಿದ್ದು.ಐವರು ಆರೋಪಿಗಳನ್ನು ಬಂಧಿಸಿದ ಅರಣ್ಯ ಇಲಾಖೆ ಅಧಿಕಾರಿಗಳು ಗೌಜಗಲ್ಲು ಗ್ರಾಮದ ಜಿ.ಎನ್. ಸತೀಶ್, ನಾಗರಾಜ್,ಶ್ರೀಧರ, ರಾಮಯ್ಯ,ರಾಜಣ್ಣ ಬಂಧಿತರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ