ಬೆಂಗಳೂರು :
ರಾಜ್ಯ ಸರ್ಕಾರವು ಜನಸಾಮಾನ್ಯರಿಗೆ ಮತ್ತೊಂದು ಶಾಕ್ ನೀಡಿದೆ. ಸರ್ಕಾರಿ ಆಸ್ಪತ್ರೆಗಳಲ್ಲಿ ವೈದ್ಯಕೀಯ ಸೇವೆಗಳ ದರ ಹೆಚ್ಚಳ ಮಾಡಿದೆ.ವೈದ್ಯಕೀಯ ಶಿಕ್ಷಣ ಇಲಾಖೆ ವ್ಯಾಪ್ತಿಯ ಸರ್ಕಾರಿ ಆಸ್ಪತ್ರೆಗಳಲ್ಲಿ ದರ ಏರಿಕೆ ಮಾಡಲಾಗಿದ್ದು, ಸರ್ಕಾರಿ ಸೇವೆಗಳ ದರ 10 ರಿಂದ 20% ದರ ಏರಿಕೆ ಆಗಿದೆ.ವಿಕ್ಟೋರಿಯಾ ಆಸ್ಪತ್ರೆಯಲ್ಲಿ ದರ ಏರಿಕೆ ಆಗಿದ್ದು, ಸಾರ್ವಜನಿಕರು ಆಕ್ರೋಶ ಹೊರಹಾಕಿದ್ದಾರೆ.
ಓಪಿಡಿ ರಿಜಿಸ್ಟ್ರೇಷನ್ ಬುಕ್ 10 ರೂ.ನಿಂದ 20 ರೂ.ಗೆ ಹೆಚ್ಚಳವಾಗಿದ್ರೆ, ಒಳರೋಗಿ ಅಡ್ಮಿಷನ್ ಚಾರ್ಜ್ 25 ರೂ. ನಿಂದ 50 ರೂ.ಗೆ ಹೆಚ್ಚಳವಾಗಿದೆ. ರಕ್ತ ಪರೀಕ್ಷೆ ಚಾರ್ಜ್ 70 ರೂ.ನಿಂದ 120 ರೂ.ಗೆ ಏರಿಕೆಯಾಗಿದೆ. ವಾರ್ಡ್ ಚಾರ್ಜಸ್ 25 ರೂ.ನಿಂದ 50 ರೂ.ಗೆ ಏರಿಕೆಯಾಗಿದ್ರೆ, ಆಸ್ಪತ್ರೆ ತ್ಯಾಜ್ಯ ನಿರ್ವಹಣೆ ದರ 10 ರೂ. ನಿಂದ 50 ರೂ.ಗೆ ಹೆಚ್ಚಳವಾಗಿದೆ.