ಗುಬ್ಬಿ : ಮರದ ರಥಕ್ಕೆ ಬೆಳ್ಳಿ ಕವಚ ಹೊದಿಸುವ ಕಾರ್ಯ ಚಾಲನೆ…!

ಗುಬ್ಬಿ

    ಪಟ್ಟಣದ ಇತಿಹಾಸ ಪ್ರಸಿದ್ಧ ಗೋಸಲ ಚನ್ನಬಸವೇಶ್ವರ ಸ್ವಾಮಿ ಯವರ ಉತ್ಸವಕ್ಕೆಂದು ನೂತವಾಗಿ ನಿರ್ಮಾಣ ವಾಗಿರುವ ಮರದ ರಥಕ್ಕೆ ಬೆಳ್ಳಿ ಕವಚ ಹೊದಿಸುವ ಕಾರ್ಯ ಸೋಮವಾರ ಮಧ್ಯಾಹ್ನ 1-30 ಕ್ಕೆ ಶಾಸ್ತ್ರೋಕ್ತ ವಿದಿ ವಿಧಾನಗಳೊಂದಿಗೆ ದೇವಾಲಯದ ಆವರಣದಲ್ಲಿ ಜರುಗಿತು. ಈ ಕಾರ್ಯಕ್ರಮವನ್ನು ಅರ್ಚಕರಾದ ಆರಾಧ್ಯ, ಹಾಗೂ ಆಗಮಿಕರಾದ ರುದ್ರಪ್ರಸಾದ್ ನೆಡೆಸಿಕೊಟ್ಟರು.

   ಬೆಳಿಗ್ಗೆಯಿಂದಲೇ ಮರದ ರಥ ದ ದಾನಿಗಳಾದ ಜೈ ಭಾರತ್ ಚಿತ್ರಮಂದಿರದ ಮಾಲೀಕರಾದ ಹರೀಶ್ ದಂಪತಿಗಳು ಪೂಜಾ ಕಾರ್ಯ ಕೈಗೊಂಡಿದ್ದರು ನಂತರ ಸಾಂಕೇತಿಕವಾಗಿ ಕವಚ ದಾರಣೆಯ ಕಾರ್ಯಕ್ರಮ ನೆಡೆಯಿತು. ಈ ಕಾರ್ಯಕ್ರಮದಲ್ಲಿ ಬೆಳ್ಳಿ ಕವಚ ನಿರ್ಮಾಣ ಮಾಡಲು ತಮಿಳುನಾಡಿನ ಕುಂಭಕೋಣಂ ನಿಂದ ಬಂದಿರುವ ಶಿಲ್ಪಿ ನಾಗಲಿಂಗಂ ಇದ್ದರು

   ಈ ಕಾರ್ಯಕ್ರಮದಲ್ಲಿ ಜೀರ್ಣೋದ್ಧಾರ ಸಮೀತಿಯು ಕಾರ್ಯದರ್ಶಿ ಕೆ ವಿ ಪರಮೇಶ್, ಸಹ ಕಾರ್ಯದರ್ಶಿ ಆರ್ ಪ್ರಸನ್ನಕುಮಾರ್, ಖಜಾಂಚಿ ಶರಸ್ಚಂದ್ರ ದಾಸೋಹ ಸಮೀತಿ ಅಧ್ಯಕ್ಷ ಜಿ ಆರ್ ಸುರೇಶ್, ಬಾಳೆ ಕಾಯಿ ಬಸವರಾಜು, ದಾನಿಗಳಾದ ಜಿ ಎಸ್ ಅರುಣ್ ಕುಮಾರ್ ಮುಖಂಡ ಕುಮಾರ್,ಅರ್ಚಕ ಶಿವಕುಮಾರ್ ಇದ್ದರು ಹಾಗೂ ಈ ಪ್ರಕಾರೋತ್ಸವಾದ ದಾನಿಗಳಾದ ಜೆ ಬಿ ಟಿ ಹರೀಶ್ ಕುಟುಂಬದವರು ಮತ್ತು ದೇವಾಲಯದ ಧರ್ಮದರ್ಶಿ ಮಂಡಳಿಯ ಅಧ್ಯಕ್ಷ ಉಂಡೆ ರಾಮಣ್ಣ ಮತ್ತು ಸಹಸ್ರಾರು ಭಕ್ತರು ಭಾಗವಹಿಸಿದ್ದರು.

   ಈ ಬೆಳ್ಳಿಯ ರಥಕ್ಕೆ ಸುಮಾರು 50 ಕೆಜಿಯಷ್ಟು ಬೆಳ್ಳಿ ಬೇಕಿದ್ದು ಇದಕ್ಕೆ ಸುಮಾರು 40 ಲಕ್ಷ ರೂಪಾಯಿ ವೆಚ್ಚ ತಗುಲಲಿದ್ದು ಈಗಾಗಲೇ 25 ಕೆಜಿಯಷ್ಟು ಬೆಳ್ಳಿ ಸಂಗ್ರಹವಾಗಿದ್ದು ಉಳಿದ ಬೆಳ್ಳಿಯನ್ನು ಭಕ್ತರಿಂದಲೇ ನಿರೀಕ್ಷಿಸಲಾಗಿದೆ. 2025 ನೇ ಸಂಕ್ರಾಂತಿಯ ಹಬ್ಬದ ಹೊತ್ತಿಗೆ ಈ ಬೆಳ್ಳಿ ರಥ ತಯಾರಾಗುತ್ತದೆ ಎಂದು ಜೀರ್ಣೋದ್ಧಾರ ಸಮಿತಿಯ ಮೂಲಗಳು ತಿಳಿಸಿವೆ.

Recent Articles

spot_img

Related Stories

Share via
Copy link