ಬೆಳ್ಳಿ ಹಬ್ಬದ ಸಂಭ್ರಮದಲ್ಲಿ ಸ್ವಾಮಿ ವಿವೇಕಾನಂದ ಸಹಕಾರ ಸಂಘ

ತುಮಕೂರು:

ನಗರದ ಸ್ವಾಮಿ ವಿವೇಕಾನಂದ ಸಹಕಾರ ಸಂಘದ 25ನೇ ವರ್ಷದ ವಾರ್ಷಿಕ ಮಹಾ ಸಭೆಯನ್ನು ಮಂಗಳವಾರ ವಿಡಿಯೋ ಕಾನ್ಫರೆನ್ಸ್ ಮೂಲಕ ನಡೆಸಲಾಯಿತು. ಸರ್ವ ಸದಸ್ಯರ ಸಭೆಯ ಅಧ್ಯಕ್ಷತೆ ವಹಿಸಿದ್ದ ಸಂಘದ ಅಧ್ಯಕ್ಷರಾದ ಪಿ.ಮೂರ್ತಿಯವರು ಸಭೆಯನ್ನು ಉದ್ದೇಶಿಸಿ ಮಾತನಾಡುತ್ತಾ 1996 ರಲ್ಲಿ ದಿವಂಗತ ಮಾಜಿ ಸಚಿವ ಲಕ್ಷ್ಮೀನರಸಿಂಹಯ್ಯನವರ ಪ್ರೇರಣೆಯಿಂದ ಪ್ರಾರಂಭಗೊಂಡು,

ಇಂದಿಗೆ 6315 ಸದಸ್ಯರು ಮತ್ತು ರೂ.223.81 ಲಕ್ಷಗಳ ಲಾಭದೊಂದಿಗೆ ಪ್ರಗತಿ ಪಥದಲ್ಲಿದ್ದು ಕರ್ನಾಟಕ ರಾಜ್ಯ ಸಹಕಾರ ಪತ್ತಿನ ಮಹಾಮಂಡಳಿ ನಿ. ಬೆಂಗಳೂರು ರವರಿಂದ 2018 ನೇ ಸಾಲಿನಲ್ಲಿ ʼಉತ್ತಮ ಸಹಕಾರ ಸಂಘʼ ಪ್ರಶಸ್ತಿ ಮತ್ತು 2019ನೇ ಸಾಲಿನಲ್ಲಿ ʼಉತ್ತಮ ಸಹಕಾರಿʼ ಪ್ರಶಸ್ತಿ ಗೆ ಭಾಜನರಾಗಿದ್ದು ಇದಕ್ಕೆ ಎಲ್ಲಾ ಸದಸ್ಯರ ಸಹಕಾರವೇ ನಿಜಕಾರಣ ಎಂದರು.

ಬೆಳ್ಳಿ ಹಬ್ಬದ ಸಂಭ್ರಮಾಚರಣೆಯ ಈ ವರ್ಷದಲ್ಲಿ ಸಂಘವು ಅನೇಕ ಯೋಜನೆಗಳನ್ನು ರೂಪಿಸುತ್ತಿದ್ದು ಇದಕ್ಕೆ ಎಲ್ಲರ ಸಹಕಾರ ಅಗತ್ಯವಿದೆ. ಕಳೆದ ವಿಧಾನ ಪರಿಷತ್ತಿನ ಚುನಾವಣೆಯಲ್ಲಿ ಸಂಘದ ಸ್ಥಾಪಕ ಸದಸ್ಯರಾದ ಸಹಕಾರಿ ಧುರೀಣ ರಾಜೇಂದ್ರ ರಾಜಣ್ಣ ರವರು ಚುನಾಯಿತರಾಗಿದ್ದು ಅವರನ್ನು ಸಂಘದ ಪರವಾಗಿ ಅಭಿನಂದಿಸಿದರು.

ಸಂಘದ ಪ್ರಗತಿಗೆ ಹೆಚ್ಚಿನ ಸಹಕಾರ ನೀಡುತ್ತಿರುವ ಡಿಸಿಸಿ ಬ್ಯಾಂಕ್ ಅಧ್ಯಕ್ಷರೂ ಮಾಜಿ ಶಾಸಕರೂ ಆದ ಕೆ.ಎನ್.ರಾಜಣ್ಣನವರ ಸಲಹೆ ಮತ್ತು ಮಾರ್ಗÀದರ್ಶನಕ್ಕೆ ಧನ್ಯವಾದಗಳನ್ನು ಅರ್ಪಿಸಿದರು.

ಸಂಘದ ಸದಸ್ಯರಿಗೆ ನೀಡಲಾಗುವ ಮರಣೋತ್ತರ ನಿಧಿಯ ಮೊತ್ತವನ್ನು ಹೆಚ್ಚಿಸುವುದಾಗಿ ತಿಳಿಸುತ್ತಾ ಸಹಕಾರ ಇಲಾಖೆ, ಲೆಕ್ಕಪರಿಶೋಧನಾ ಇಲಾಖೆ, ಗ್ರಾಹಕರು ಮತ್ತು ಸಿಬ್ಬಂದಿ ವರ್ಗದ ಹಾಗೂ ಹೆಚ್ಚಿನ ಪೆÇ್ರೀತ್ಸಾಹ ನೀಡುತ್ತಿರುವ ಆಡಳಿತ ಮಂಡಳಿಯವರಿಗೆ ಎಲ್ಲರಿಗೂ ವಂದಿಸಿದರು.

ಸಭೆಯ ವರದಿಯನ್ನು ಸಿಇಓ ಎನ್.ಗಂಗಾಧರ್ ಓದಿದರು, ಪ್ರಸಕ್ತ ಸಾಲಿಗೆ ಶೇ.18 ಡಿವಿಡೆಂಡ್ ಘೋಷಿಸಲಾಯಿತು. ಸಂಘದ ವತಿಯಿಂದ ಪ್ರತಿ ವರ್ಷದಂತೆ ಈ ವರ್ಷವೂ ಮುದ್ರಿಸಲಾದ 2020ರ ಕ್ಯಾಲೆಂಡರ್‍ನ್ನು ಕಾರ್ಯಕ್ರಮದಲ್ಲಿ ಬಿಡುಗಡೆ ಮಾಡಲಾಯಿತು.

ಸಂಘದ ಉಪಾಧ್ಯಕ್ಷರಾದ ಬಿ.ಎಚ್.ನಂಜುಂಡಯ್ಯ, ನಿರ್ದೇಶಕರಾದ ಕೆ.ಎನ್.ಸರೋಜರಾಜು, ಬಿ..ಆರ್.ರಮೇಶ್, ಪಿ..ನಾಗರಾಜು, ಜಿ.ತಿಮ್ಮಾರೆಡ್ಡಿ, ರವಿಶಂಕರ್, ಹೆಚ್.ಎಸ್.ರಾಮಚಂದ್ರಪ್ಪ, ಎಸ್.ಶ್ರೀಹರ್ಷ, ಪಿ.ಜಿ.ರಾಮಚಂದ್ರಪ್ಪ, ಕೆ.ಹೆಚ್.ಬೇಬಿ(ಭಾರತಿ), ಟಿ.ಎಸ್.ಹನುಮಂತರಾಯಪ್ಪ, ಕಾಂತರಾಜು, ಕೆ.ಎಸ್.ಸುರೇಶ್ ಹಾಗೂ ಸಿಬ್ಬಂದಿ ಇದ್ದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap