ರಾಜ್ಯ ಸರ್ಕಾರಿ ನೌಕರರಿಗೆ ಭರ್ಜರಿ ಸಿಹಿಸುದ್ದಿ

ಶಿವಮೊಗ್ಗ :
Good News : ರಾಜ್ಯ ಸರ್ಕಾರಿ ನೌಕರರಿಗೆ ಭರ್ಜರಿ ಸಿಹಿಸುದ್ದಿ : 2022 ರ ಜುಲೈನಲ್ಲಿ ಕೇಂದ್ರ ವೇತನ ಆಯೋಗ ಜಾರಿ!
                     ರಾಜ್ಯ ಸರ್ಕಾರಿ ನೌಕರರಿಗೆ ಭರ್ಜರಿ ಸಿಹಿಸುದ್ದಿ ಸಿಕ್ಕಿದ್ದು, ರಾಜ್ಯ ಸರ್ಕಾರಿ ನೌಕರರಿಗೆ 2022 ರ ಜುಲೈ ವೇಳೆಗೆ ಕೇಂದ್ರ ವೇತನ ಆಯೋಗ ಜಾರಿಗೊಳ್ಳಲಿದ್ದು, ಡಿ ದರ್ಜೆಯಿಂದ ಎ ದರ್ಜೆವರೆಗಿನ ನೌಕರರ ವೇತನ ಕನಿಷ್ಠ 10 ಸಾವಿರ ರೂ.ನಿಂದ 45 ಸಾವಿರ ರೂ.ವರೆಗೂ ಹೆಚ್ಚಾಗಲಿದೆ ಎಂದು ರಾಜ್ಯ ಸರ್ಕಾರಿ ನೌಕರರಸಂಘದ ಅಧ್ಯಕ್ಷ ಸಿ.ಎಸ್.

ಫೆಬ್ರವರಿಯಲ್ಲಿ ಬಜೆಟ್ ಇದ್ದು, ಸರ್ಕಾರಿ ನೌಕರರಿಗೆ ಕೇಂದ್ರ ವೇತನ ಆಯೋಗ ಜಾರಿ ಕುರಿತು ಸ್ಪಷ್ಟವಾಗಲಿದೆ. ಜೊತೆಗೆ ರಾಜ್ಯದಲ್ಲಿ ಖಾಲಿ ಇರುವ 2.60 ಲಕ್ಷ ಹುದ್ದೆಗಳ ಭರ್ತಿ, ಶಿಕ್ಷಕರ ಸಮಸ್ಯೆ ಬಗೆಹರಿಸುವುದು ಸೇರಿದಂತೆ ಕೆಲ ಬೇಡಿಕೆಗಳನ್ನು ಈಡೇರಿಸುವಂತೆ ಎಲ್ಲ ಲೋಕಸಭಾ ಸದಸ್ಯರು, ಶಾಸಕರು, ಎಂಎಲ್ ಸಿ ಗಳಿಗೆ ಮನವಿ ಮಾಡಲಾಗುವುದು ಎಂದು ತಿಳಿಸಿದ್ದಾರೆ.

ರಾಜ್ಯ ಸರ್ಕಾರಿ ನೌಕರರು ಮತ್ತು ಅವರ ಅವಲಂಬಿತ 25 ಲಕ್ಷ ಜನರಿಗೆ ಕ್ಯಾಶ್ ಲೆಸ್ ಚಿಕಿತ್ಸೆ ಸಿಗಲಿದೆ. 1,500 ಕೋಟಿ ರೂ. ಅನುದಾನ ಮೀಸಲಿಟ್ಟಿದ್ದು, ತುರ್ತುಗಳಲ್ಲಿ ನೌಕರರಿಗೆ ನೆರವಾಗಲಿದೆ ಎಂದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link