ನವದೆಹಲಿ:
ರಾಜಸ್ಥಾನದ ಪ್ರತಾಪ್ಗಢದಲ್ಲಿ ನಡೆದ ರ್ಯಾಲಿಯಲ್ಲಿ ಮಾತನಾಡಿದ ಗಡ್ಕರಿ, ದೇಶಾದ್ಯಂತದ ರೈತರನ್ನು ಇಂಧನ ಪೂರೈಕೆದಾರರು ಆಗಲು ಸಬಲೀಕರಣಗೊಳಿಸುವ ತಮ್ಮ ದೃಷ್ಟಿಕೋನವನ್ನು ಹಂಚಿಕೊಂಡರು.
ನಾವು ಶೇಕಡಾ 60 ರಷ್ಟು ಎಥೆನಾಲ್ ಮತ್ತು ಶೇಕಡಾ 40 ರಷ್ಟು ವಿದ್ಯುತ್ ಮಿಶ್ರಣವನ್ನು ತೆಗೆದುಕೊಂಡರೆ ಪೆಟ್ರೋಲ್ ಬೆಲೆ ಕಡಿಮೆಯಾಗುತ್ತದೆ ಎಂದು ಅವರು ಹೇಳಿದರು. ತಮ್ಮ ಭಾಷಣದಲ್ಲಿ, ಸಚಿವರು ಎಥೆನಾಲ್ ಮತ್ತು ವಿದ್ಯುತ್ ಮಿಶ್ರಣವನ್ನು ಬಳಸುವ ಪ್ರಯೋಜನಗಳನ್ನು ಒತ್ತಿ ಹೇಳಿದರು.
“ರೈತರು ಕೇವಲ ಅನ್ನದಾತರಾಗದೆ ಊರ್ಜದಾತರಾಗುತ್ತಾರೆ ಎಂಬ ಮನಸ್ಥಿತಿಯನ್ನು ನಮ್ಮ ಸರ್ಕಾರ ಹೊಂದಿದೆ. ಎಲ್ಲಾ ವಾಹನಗಳು ಈಗ ರೈತರು ಉತ್ಪಾದಿಸುವ ಎಥೆನಾಲ್ ನಿಂದ ಚಲಿಸುತ್ತವೆ. ಸರಾಸರಿ 60% ಎಥೆನಾಲ್ ಮತ್ತು 40% ವಿದ್ಯುತ್ ತೆಗೆದುಕೊಂಡರೆ ಪೆಟ್ರೋಲ್ ಪ್ರತಿ ಲೀಟರ್ಗೆ 15 ರೂ.ದರದಲ್ಲಿ ಲಭ್ಯವಾಗುತ್ತದೆ ಮತ್ತು ಜನರಿಗೆ ಪ್ರಯೋಜನವಾಗಲಿದೆ ಎಂದು ಗಡ್ಕರಿ ಹೇಳಿದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ