ಬಿಎಸ್ ವೈ ಗೆ ಭದ್ರತೆ: ಅನುಮಾನಕಕ್ಕೆ ಕಾರಣವಾದ ಕೇಂದ್ರದ ನಡೆ

ಬೆಂಗಳೂರು;

     ಯಾವುದೇ ಒಬ್ಬ ವ್ಯಕ್ತಿ ಅಥವಾ ಸಂಘಟನೆಯಿಂದ ಬೆದರಿಕೆಗಳು ಹೆಚ್ಚಾದಾಗ ಮಾತ್ರ ನೀಡುವ ಝಡ್ ಕೆಟಗರಿ ಭದ್ರತೆ ಇದೀಗ ಮಾಜಿ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಅವರಿಗೂ ನೀಡಲಾಗಿದೆ. ಆದರೆ, ಬಿಎಸ್ ವೈ ಅವರಿಗೆ ಝಡ್ ಕೆಟಗರಿ ಭದ್ರತೆ ನೀಡಿರುವುದು ಹಲವು ಅನುಮಾನಗಳಿಗೆ ಎಡೆಮಾಡಿದೆ.

   ಈ ಸಂದೇಹದಿಂದಲೇ ಮಾಜಿ ಮುಖ್ಯಮಂತ್ರಿಗಳು ಕೇಂದ್ರ ಗೃಹ ಇಲಾಖೆ ಅವರಿಗೆ ಒದಗಿಸಿರುವ ಭದ್ರತೆಯನ್ನು ಅಷ್ಟೇ ನಯವಾಗಿ ತಿರಸ್ಕರಿಸಿದ್ದಾರೆ ಎನ್ನಲಾಗಿದೆ, ಕೇಂದ್ರ ನೀಡಿರುವ ಭದ್ರತೆಯನ್ನು ಪಡೆಯದೇ ರಾಜ್ಯ ಸರ್ಕಾರದ ಭದ್ರತೆಯನ್ನು ಮಾತ್ರ ಅವರು ಹೊಂದಿದ್ದಾರೆ.

    ಬಿ ಎಸ್ ಯಡಿಯೂರಪ್ಪ ಅವರು ಒಬ್ಬ ಹೋರಾಟಗಾರ, ಅದು ಅಲ್ಲದೆ ಬಿಜೆಪಿಯನ್ನು ರಾಜ್ಯದಲ್ಲಿ ಕಟ್ಟಿ ಬೆಳಸಿದ ಕೀರ್ತಿ ಅವರಿಗೆ ಸಲ್ಲುತ್ತದೆ, ಲಿಂಗಾಯತರ ಪ್ರಶ್ಯಾತೀತ ನಾಯಕರಾಗಿರುವ ಅವರನ್ನು ವಯಸ್ಸಿನ ಕಾರಣ ನೀಡಿ ಮುಖ್ಯಮಂತ್ರಿ ಹುದ್ದೆಯಿಂದ ಬಿಜೆಪಿ ಪಕ್ಷದ ಹೈಕಮಾಂಡ್ ಅವರನ್ನು ತೆಗೆದುಹಾಕಿತ್ತು.

    ಆದರೆ, ಇದೀಗ ಕೇಂದ್ರದ ಸಂಸದೀಯ ಮಂಡಳಿಯಲ್ಲಿ ಸ್ಥಾನ ಪಡೆದಿರುವ ಅವರು, ರಾಜ್ಯದ ಬಿಜೆಪಿ ಅಧ್ಯಕ್ಷ ಅಥವಾ ವಿರೋಧ ಪಕ್ಷದ ನಾಯಕ ಸ್ಥಾನದ ಆಕಾಂಕ್ಷಿಯಲ್ಲ. ಅದರಂತೆಯೇ ಇ ಮೇಲ್ ಅಥವಾ ಫೋನ್ ಮೂಲಕ ಅವರಿಗೆ ಯಾವುದೇ ಬೆದರಿಕೆ ಕರೆಗಳು ಬಂದಿಲ್ಲ, ಪರಿಸ್ಥಿತಿ ಹೀಗಿರುವಾಗ ಅವರಿಗೆ ಝಡ್ ಕೆಟಗರಿ ಭದ್ರತೆಯನ್ನು ಏಕೆ ನೀಡಿದೆ ಎಂಬ ಪ್ರಶ್ನೆ ಹಲವರನ್ನು ಕಾಡುತ್ತಿದೆ.

    ಇದೊಂದು ಬಿಜೆಪಿ ಪಕ್ಷದ ಹೈಕಮಾಂಡ್ ವ್ಯವಸ್ಥಿತಿ ಯೋಜನೆಯಾಗಿದೆ ಎನ್ನುವುದು ಪಕ್ಷದ ವಲಯದಲ್ಲಿ ಕೇಳಿ ಬರುತ್ತಿರುವ ಮಾತು. ಎಲ್ಲಾ ಸಮಯದಲ್ಲೂ ನಾಯಕನ ಚಲನವಲನಗಳ ಮೇಲೆ ನಿಗಾ ವಹಿಸಲು ಅವರಿಗೆ ಝಡ್ ಕೆಟಗರಿ ಭದ್ರತೆ ನೀಡಲಾಗಿದೆ ಎಂದು ಹೇಳಲಾಗುತ್ತಿದೆ. ಲಿಂಗಾಯತ ನಾಯಕರಾಗಿರುವ ಬಿಎಸ್ ವೈ ಅವರು ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಏನಾದರೂ ಎಡವಟ್ಟು ಮಾಡಿದರೆ ಪಕ್ಷಕ್ಕೆ ತೊಂದರೆ ಎಂಬ ಕಾರಣಕ್ಕಾಗಿ ಭದ್ರತೆಯನ್ನು ನೀಡಲಾಗಿದೆ ಎನ್ನಲಾಗಿದೆ.

    ಇದರಿಂದ ಅವರ ಚಲನವಲನಗಳ ಮೇಲೆ ನಿಗಾ ವಹಿಸಿ ಪಕ್ಷ ವಿರೋಧಿ ಚಟುವಟಿಕೆ ಏನಾದರೂ ಮಾಡಬಾರದು ಎಂಬ ಉದ್ದೇಶದಿಂದ ಈ ಭದ್ರತೆಯ ಮೂಲಕ ಅವರನ್ನು ಕಟ್ಟಿಹಾಕುವ ಪ್ರಯತ್ನ ನಡೆದಿದೆ ಎನ್ನಲಾಗಿದೆ.

    ರಾಜ್ಯದಲ್ಲಿ ಬಿಜೆಪಿ ಪಕ್ಷ ನೂರಕ್ಕೆ ನೂರರಷ್ಟು ಯಡಿಯೂರಪ್ಪ ಅವರನ್ನೇ ಅವಲಂಬಿತವಾಗಿದೆ. ಅವರಿಲ್ಲದಿದ್ದಲೇ ಪಕ್ಷವನ್ನು ಊಹಿಸಿಕೊಳ್ಳಲು ಸಾಧ್ಯವಿಲ್ಲ.

     ಈ ಹಿನ್ನೆಲೆಯಲ್ಲಿ ಪಕ್ಷದ ವರಿಷ್ಠರಿಗೆ ರಾಜ್ಯ ಬಿಜೆಪಿ ಅಧ್ಯಕ್ಷ ಸ್ಥಾನ ಹಾಗೆಯೇ ವಿರೋಧ ಪಕ್ಷದ ಸ್ಥಾನವನ್ನು ಆಯ್ಕೆ ಮಾಡಲು ಸಾಧ್ಯವಾಗಿಲ್ಲ, ಅವರನ್ನು ವಿಶ್ವಾಸದಲ್ಲಿಟ್ಟುಕೊಂಡೇ ವರಿಷ್ಠರು ಅಧ್ಯಕ್ಷ ಮತ್ತು ಪ್ರತಿಪಕ್ಷದ ನಾಯಕನನ್ನು ಆಯ್ಕೆ ಮಾಡಬೇಕು. ಒಂದು ಅವರ ಒಪ್ಪಿಗೆ ಇಲ್ಲದಿದ್ದಲ್ಲಿ ಪಕ್ಷದಲ್ಲಿ ಆಗುವ ಒಳಿತಿಗಿಂತ ಕೆಡುಕುಗಳೇ ಹೆಚ್ಚು ಎಂಬ ಅಂಶ ವರಿಷ್ಠರಿಗೆ ಮನವರಿಕೆಯಾಗಿರುವ ಹಿನ್ನೆಲೆಯಲ್ಲಿ ಅವರಿಗೆ ಈ ರೀತಿಯ ಭದ್ರತೆಯನ್ನು ನೀಡಿ ಕಟ್ಟಿಹಾಕಲಾಗುತ್ತಿದೆ ಎಂದು ವಿಶ್ಲೇಷಿಸಲಾಗಿದೆ.

    ಒಂಟಿಯಾಗಿ ಎಲ್ಲಿ ಬೇಕಾದರೂ ಅಲ್ಲಿ ಓಡಾಡಿಕೊಂಡು ಇರುವ ವ್ಯಕ್ತಿ ಬಿಎಸ್ ಯಡಿಯೂರಪ್ಪ ಅವರು, ಅನ್ಯ ಪಕ್ಷಗಳಲ್ಲಿ ಎಲ್ಲರಿಗೂ ಒಪ್ಪಿಗೆಯಾಗುವ ವ್ಯಕ್ತಿ. ಆದರೂ ಅವರಿಗೆ ಈ ಭದ್ರತೆ ಏಕೆ..? ಎಂಬ ಪ್ರಶ್ನೆಗಳಿಗೆ ಮಾತ್ರ ಉತ್ತರ ಸಿಗುತ್ತಿಲ್ಲ. ಆದರೂ ಅವರಿಗೇನಾದರೂ ಬೆದರಿಕೆ ಇದೆಯಾ ಈ ಹಿನ್ನೆಲೆಯಲ್ಲಿ ಅವರಿಗೆ ಭದ್ರತೆ ನೀಡಲಾಗಿದೆಯಾ ಇದನ್ನು ಕೇಂದ್ರ ಗೃಹ ಇಲಾಖೆಯೇ ಸ್ಪಷ್ಟಪಡಿಸಬೇಕಗಿದೆ.

    ಕರ್ನಾಟಕ ರಾಜ್ಯದ ರಾಜಕಾರಣ ಉತ್ತರ ಪ್ರದೇಶ, ಬಿಹಾರ ದಂತಿಲ್ಲ. ಅಲ್ಲಿನ ರಾಜಕಾರಣವೇ ಬೇರೆ, ಇಲ್ಲಿನ ರಾಜಕಾರಣವೇ ಬೇರೆ ಎಂಬುದು ಇತ್ತೀಚಿನ ಚುನಾವಣೆಗಳಲ್ಲಿ ಸಾಭೀತಾಗಿದೆ. ಕೇಂದ್ರದ ಬಿಜೆಪಿ ನಾಯಕತರಿಗೆ ಏನಾದರೂ ತಪುö್ಪ ಸಂದೇಶ ರವಾನೆಯಾಗಿದೆಯಾ ಅಥವಾ ಇನ್ನಾವುದೇ ರೀತಿಯ ಉದ್ದೇಶ ಹೊಂದಲಾಗಿದೆಯಾ ಎನ್ನುವುದು ನಿಗೂಢವಾಗಿದೆ.

    ಆದರೂ ಕೂಡ ಕೇಂದ್ರ ಸರ್ಕಾರ ಗುಪ್ತಚರ ಮಾಹಿತಿ ಪಡೆದು ಝಡ್ ಕೆಟಗರಿ ಭದ್ರತೆಯನ್ನು ಮಾಜಿ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಅವರಿಗೆ ನೀಡಿದೆ ಎನ್ನಲಾಗಿದೆ. ಆದ್ದರಿಂದ ಕೇಂದ್ರದ ಕೇಂದ್ರ ಇಲಾಖೆ ಅವರಿಗೆ ಈ ರೀತಿಯ ಭದ್ರತೆ ನೀಡಲು ಮುಂದಾಗಿದೆ ಎನ್ನುವುದು ಬಿಜೆಪಿ ಮುಖಂಡರ ಅಭಿಪ್ರಾಯ.

    ಒಟ್ಟಾರೆಯಾಗಿ ಝಡ್ ಕೆಟಗರಿ ಭದ್ರತೆಯನ್ನು ಯಡಿಯೂರಪ್ಪ ಅವರು ಇದುವರೆಗೂ ಸ್ವೀಕರಿಸಿಲ್ಲ, ಒಂದು ವೇಳೆ ಅದನ್ನು ಸ್ವೀಕರಿಸಿದರೆ ಅವರು ಯಾವುದೇ ಚಟುವಟಿಕೆಯಲ್ಲಿ ಭಾಗಿಯಾಗಬೇಕಾದರೆ, ಭದ್ರತಾ ಸಿಬ್ಬಂದಿಯ ಅನುಮತಿ ಕಡ್ಡಾಯವಾಗಿರಬೇಕು. ಇಲ್ಲದಿದ್ದಲ್ಲಿ ಮನೆಯೇ ಮಂತ್ರಾಲಯವಾಗಲಿದೆ ಎನ್ನುವುದು ಹಲವಾರ ಮಾತಾಗಿದೆ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap