ಬೆಂಗಳೂರು
ನೆಚ್ಚಿನ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ಇತ್ತೀಚೆಗೆ ಮಂಡ್ಯ ಜಿಲ್ಲೆಗೆ ಭೇಟಿ ನೀಡಿ, ಬೆಂಗಳೂರು_ಮೈಸೂರು ದಶಪಥ ಹೆದ್ದಾರಿ, ಲೋಕಾರ್ಪಣೆ ಸಂಧರ್ಬದಲ್ಲಿ, ಅಲ್ಲಿನ ಜನತೆ ನೀಡಿದ ಅಭೂತಪೂರ್ವ ಸ್ವಾಗತ, ಕಾಂಗ್ರೆಸ್ ನಾಯಕರ ನಿದ್ದೆಗೆಡಿಸಿದೆ. ಹೀಗಾಗಿ ಅನಗತ್ಯವಾಗಿ ಟೀಕೆಗಳು ವ್ಯಕ್ತವಾಗುತ್ತಿದೆ ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ಹೇಳಿದ್ದಾರೆ.
ಈ ಕಾರಣದಿಂದಲೇ ಹತಾಶರದ ಕೆಪಿಸಿಸಿ ಅಧ್ಯಕ್ಷ ಶ್ರಿ ಡಿ ಕೆ ಶಿವಕುಮಾರ್, ಟಿಪುö್ಪ ಸುಲ್ತಾನ್ ಸಾವಿಗೆ ಕಾರಣರಾದರು ಎನ್ನಲಾದ ಉರಿಗೌಡ ಹಾಗೂ ನಂಜೇಗೌಡ ರನ್ನು ಬೆಂಬಲಿಸಿ ಹಾಕಿದ ಫ್ಲೆಕ್ಸ್ ಅನ್ನು, ಉಲ್ಲೇಖಿಸಿ, ರಾಜ್ಯ ಪೊಲೀಸ್ ಮುಖ್ಯಸ್ಥ ಪ್ರವೀಣ್ ಸೂದ್ ಅವರನ್ನು, ನಿಂದಿಸಿರುವುದು, ಖಂಡನೀಯ ಎಂದಿದ್ದಾರೆ.
ರಾಜ್ಯ ಪೊಲೀಸ್ ಮುಖ್ಯಸ್ಥರ ಮೇಲೆ, ವಿನಾ ಕಾರಣ, ಆಪಾದನೆ ಮಾಡಿ, ಪೊಲೀಸರ ನೈತಿಕ ಸ್ಥೆöÊರ್ಯ ಕುಂದಿಸುವ ಪ್ರಯತ್ನವನ್ನು, ಕೆಪಿಸಿಸಿ ಅಧ್ಯಕ್ಷರು ಮಾಡಿದ್ದಾರೆ. ತಮ್ಮ ಸ್ವಾರ್ಥ ರಾಜಕಾರಣ ಸಾಧಿಸಲು, ಸರಕಾರದ ಅಧಿಕಾರಿಗಳನ್ನು, ಗುರಿ ಮಾಡುವುದು, ಸರಿಯಲ್ಲ ಎಂದು ಹೇಳಿದ್ದಾರೆ.ಅಧಿಕಾರಕ್ಕೆ ಬರುವ ಯಾವುದೇ ಖಾತರಿ ಇರದ, ಕಾಂಗ್ರೆಸ್ ನಾಯಕರು , ಟಿಪುö್ಪವಿನ ಬಗ್ಗೆ ಕಾಳಜಿ ತೋರಿಸಿ, ಉರಿಗೌಡರ ಬಗ್ಗೆ ದ್ವೇಷ ಸಾರುವ, ಅವರ ಪಕ್ಷದ ನೀತಿಗೆ, ಅನುಗುಣವಾಗಿಯೇ ಇದೆ ಎಂದು ಆರಗ ಜ್ಞಾನೇಂದ್ರ ಟೀಕಿಸಿದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ