ಮದ್ವೆಯಾದ 5 ತಿಂಗಳಲ್ಲೇ ಘೋರ ದುರಂತ : ತನಗಿಂತ 20 ವರ್ಷ ಚಿಕ್ಕವಳ ಜೊತೆಗೆ ಮದ್ವೆಯಾಗಿದ್ದ ಶಂಕ್ರಣ್ಣ ನೇಣಿಗೆ ಶರಣು

ತುಮಕೂರು:

ತನಗಿಂತ 20 ವರ್ಷ ಚಿಕ್ಕವಳ ಜೊತೆಗೆ ಮದ್ವೆಯಾಗಿದ್ದ ತುಮಕೂರು ಜಿಲ್ಲೆ ಕುಣಿಗಲ್‌ ತಾಲೂಕಿನ ಚೌಡನಕುಪ್ಪೆ ಗ್ರಾಮ ರೈತ ಶಂಕರಪ್ಪ ಬೆಳಗ್ಗೆ ಆತ್ಮಹತ್ಯೆಗೆ ಶರಣಾಗಿರುವ ಘಟನೆ ನಡೆದಿದೆ. ಗ್ರಾಮದ ಹೊಲವೊಂದರಲ್ಲಿ ಮರಕ್ಕೆ ನೇಣುಬಿಗಿದುಕೊಂಡು ಶಂಕರಣ್ಣ ಆತ್ಮಹತ್ಯೆ ಮಾಡಿಕೊಂಡಿದ್ದು, ಪತಿಯ ಶವದ ಬಳಿ ಪತ್ನಿ ಮೇಘನ ರೋಧಿಸುತ್ತಿರುವ ದೃಶ್ಯ ಕಂಡು ಬಂದಿದೆ.

ಸಂತೋಷ್ ಕೆ ಪಾಟೀಲ್ ಮೇಲೆ ಮಾನನಷ್ಟ ಮೊಕದ್ದಮೆ ದಾಖಲಿಸಿದ್ದೇವೆ : ಕೆ ಎಸ್ ಈಶ್ವರಪ್ಪ

2021ರ ಅಕ್ಟೋಬರ್​ 2ನೇ ವಾರದಲ್ಲಿ ಸರಳವಾಗಿ ದಾಂಪತ್ಯ ಜೀವನಕ್ಕೆ ಇಬ್ಬರು ಕೂಡ ಕಾಲಿಟ್ಟಿದ್ದರು. ಕಳೆದ ಐದು ತಿಂಗಳ ಹಿಂದೆ 45 ವರ್ಷದ ವ್ಯಕ್ತಿಯ ಜೊತೆ 25 ವರ್ಷದ ಯುವತಿ ಮದುವೆಯಾಗಿದ್ದ ಸುದ್ದಿಯೊಂದು ಇಡೀ ದೇಶದ ತುಂಬೆಲ್ಲ ವೈರಲ್‌ ಆಗಿತ್ತು. ಇನ್ನೂ ಸಾವಿನ  ಬಗ್ಗೆ ಹೆಚ್ಚಿನ ತನಿಖೆಯನ್ನು ಕುಣಿಗಲ್‌ ಪೋಲಿಸರು ನಡೆಸುತ್ತಿದ್ದು, ಸ್ಥಳದಲ್ಲಿ ಡೆತ್‌ ನೋಟು ಕೂಡ ಸಿಕ್ಕಿದ್ದು,ಸದ್ಯ ಹಿರಿಯ ಪೋಲಿಸ್‌ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿದ್ದಾರೆ.

ನಾಲ್ಕು ಲಕ್ಷ ಹೊಸ ಬಿಪಿಎಲ್ ಕಾರ್ಡ್, ತಿಂಗಳೊಳಗೆ ವಿತರಣೆ: ಸಚಿವ ಉಮೇಶ್ ಕತ್ತಿ ಭರವಸೆ

     ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap