ಮಾರ್ಚ್‌ 2025 ರಿಂದ ಹಲವು ರೈಲುಗಳ ಸಂಖ್ಯೆ ಬದಲು : ಯಾವು ಗೊತ್ತಾ…?

ಹುಬ್ಬಳ್ಳಿ :

    ನೈಋತ್ಯ ರೈಲ್ವೆಯು ಈ ಕೆಳಗಿನ ರೈಲುಗಳಿಗೆ ರೈಲು ಸಂಖ್ಯೆಗಳಲ್ಲಿ ಬದಲಾವಣೆಗಳನ್ನು ಮಾಡಲಿದೆ. ಈ ಬದಲಾವಣೆಗಳು ಮಾರ್ಚ್ 2025 ರಿಂದ ಜಾರಿಗೆ ಬರಲಿವೆ ಎಂದು ನೈಋತ್ಯ ರೈಲ್ವೆ ತಿಳಿಸಿದೆ.

ವಿವರ ಈ ಕೆಳಗಿನಂತೆ:

  • ಡಾ.ಎಂಜಿಆರ್ ಚೆನ್ನೈ ಸೆಂಟ್ರಲ್-ಮೈಸೂರು ದೈನಂದಿನ ಎಕ್ಸ್‌ಪ್ರೆಸ್:
    ರೈಲು ಸಂಖ್ಯೆ 12609 ರಿಂದ 16551 ಕ್ಕೆ ಬದಲಾಗುತ್ತದೆ, ಇದು ಮಾರ್ಚ್ 1, 2025 ರಿಂದ ಪ್ರಾರಂಭವಾಗುವ ಪ್ರಯಾಣದಿಂದ ಜಾರಿಗೆ ಬರಲಿದೆ.
  • ಮೈಸೂರು- ಡಾ. ಎಂಜಿಆರ್ ಚೆನ್ನೈ ಸೆಂಟ್ರಲ್ ದೈನಂದಿನ ಎಕ್ಸ್‌ಪ್ರೆಸ್:
    ರೈಲು ಸಂಖ್ಯೆ 12610 ರಿಂದ 16552 ಕ್ಕೆ ಬದಲಾಗುತ್ತದೆ, ಇದು ಮಾರ್ಚ್ 2, 2025 ರಿಂದ ಪ್ರಾರಂಭವಾಗುವ ಪ್ರಯಾಣದಿಂದ ಜಾರಿಗೆ ಬರಲಿದೆ.
  • ಯಶವಂತಪುರ-ತಿರುವನಂತಪುರಂ ನಾರ್ತ್ ಸಾಪ್ತಾಹಿಕ ಎಕ್ಸ್‌ಪ್ರೆಸ್:
    ರೈಲು ಸಂಖ್ಯೆ 22677 ರಿಂದ 16561 ಕ್ಕೆ ಬದಲಾಗುತ್ತದೆ, ಇದು ಮಾರ್ಚ್ 6, 2025 ರಿಂದ ಪ್ರಾರಂಭವಾಗುವ ಪ್ರಯಾಣದಿಂದ ಜಾರಿಗೆ ಬರಲಿದೆ.

.* ತಿರುವನಂತಪುರಂ ನಾರ್ತ್-ಯಶವಂತಪುರ ಸಾಪ್ತಾಹಿಕ ಎಕ್ಸ್‌ಪ್ರೆಸ್ :
ರೈಲು ಸಂಖ್ಯೆ 22678 ರಿಂದ 16562 ಕ್ಕೆ ಬದಲಾಗುತ್ತದೆ, ಇದು ಮಾರ್ಚ್ 7, 2025 ರಿಂದ ಪ್ರಾರಂಭವಾಗುವ ಪ್ರಯಾಣದಿಂದ ಜಾರಿಗೆ ಬರಲಿದೆ. 

ರೈಲು ಸಂಖ್ಯೆ 17311 ರಿಂದ 20679 ಕ್ಕೆ ಬದಲಾಗುತ್ತದೆ, ಇದು ಮಾರ್ಚ್ 7, 2025 ರಿಂದ ಪ್ರಾರಂಭವಾಗುವ ಪ್ರಯಾಣದಿಂದ ಜಾರಿಗೆ ಬರಲಿದೆ.

  • ಎಸ್ಎಸ್ಎಸ್ ಹುಬ್ಬಳ್ಳಿ- ಡಾ. ಎಂಜಿಆರ್ ಚೆನ್ನೈ ಸೆಂಟ್ರಲ್ ಸಾಪ್ತಾಹಿಕ ಎಕ್ಸ್‌ಪ್ರೆಸ್ :
    ರೈಲು ಸಂಖ್ಯೆ 17312 ರಿಂದ 20680 ಕ್ಕೆ ಬದಲಾಗುತ್ತದೆ, ಇದು ಮಾರ್ಚ್ 6, 2025 ರಿಂದ ಪ್ರಾರಂಭವಾಗುವ ಪ್ರಯಾಣದಿಂದ ಜಾರಿಗೆ ಬರಲಿದೆ.

ಈ ರೈಲುಗಳ ಅಸ್ತಿತ್ವದಲ್ಲಿರುವ ಸಮಯ ಮತ್ತು ನಿಲುಗಡೆಗಳಲ್ಲಿ ಯಾವುದೇ ಇರುವುದಿಲ್ಲ ಎಂದು ನೈಋತ್ಯ ರೈಲ್ಚೆ ವಲಯ ಮುಖ್ಯ ಸಾರ್ವಜನಿಕ ಸಂಪರ್ಕಾಧಿಕಾರಿ ಡಾ.ಮಂಜುನಾಥ ಕನಮಡಿ ತಿಳಿಸಿದ್ದಾರೆ.

Recent Articles

spot_img

Related Stories

Share via
Copy link