ಕರೋನಾ ವೈರಸ್ :ಅಧಿವೇಷನದ ಅವಧಿ ಮೊಟಕು ಗೊಳಿಸಿದ ವಿಶ್ವ ಸಂಸ್ತೆ

ವಾಷಿಂಗ್ಟನ್

      ಸದ್ಯ ವಿಶ್ವದಲ್ಲಿ  ಭೀತಿಯುಂಟು ಮಾಡುತ್ತಿರುವ ಕೊರೊನಾ ವೈರಸ್ ನ ಭೀತಿ ವಿಶ್ವಸಂಸ್ಥೆಯ 64ನೇ ವಾರ್ಷಿಕ ಮಹಾ ಅಧಿವೇಶನಕ್ಕೂ ತಟ್ಟಿದೆ. ಮಾರ್ಚ್‌ 9 ರಿಂದ ನಡೆಯಬೇಕಾಗಿದ್ದ ಅಧಿವೇಶನವನ್ನು ವೈರಸ್‌ ಸೋಂಕಿನ ಭಯದಿಂದಾಗಿ ಕೇವಲ ಒಂದು ದಿನಕ್ಕೆ ಸೀಮಿತಗೊಳಿಸಲು ನಿರ್ಧರಿಸಲಾಗಿದೆ.

     ಈ ಅಧಿವೇಶನದಲ್ಲಿ ಲಿಂಗ ಸಮಾನತೆ ಮತ್ತು ಮಹಿಳಾ ಸಬಲೀಕರಣ ವಿಷಯಗಳ ಕುರಿತು ಚರ್ಚೆ ನಡೆಸಲು ಉದ್ದೇಶಿಸಲಾಗಿದೆ. 193 ಸದಸ್ಯ ರಾಷ್ಟ್ರಗಳು ಈ ಅಧಿವೇಶನದಲ್ಲಿ ಪಾಲ್ಗೊಳ್ಳಲಿವೆ. ಆದರೆ, ವೈರಸ್‌ ಭೀತಿಯಿಂದ ಅಧಿವೇಶನದ ಅವಧಿಯನ್ನು ಮೊಟಕುಗೊಳಿಸಲು ನಿರ್ಧರಿಸಲಾಗಿದೆ ಎಂದು ವಿಶ್ವಸಂಸ್ಥೆ ತಿಳಿಸಿದೆ.

     ಅಧಿವೇಶನವನ್ನು ವಿಶ್ವಸಂಸ್ಥೆಯ ಮುಖ್ಯ ಕಚೇರಿಯನ್ನು ನ್ಯೂಯಾರ್ಕ್‌ ನಲ್ಲಿ ಆಯೋಜಿಸಲಾಗಿದೆ. ನ್ಯೂಯಾರ್ಕ್‌ನಲ್ಲಿಯೇ ಒಬ್ಬರು ವೈರಸ್‌ ಸೋಂಕಿಗೆ ಒಳಗಾಗಿದ್ದಾರೆ ಎನ್ನಲಾಗಿದೆ . ಆದರೆ, ಕೊರನಾ ಬಗ್ಗೆ ವಿಶ್ವಸಂಸ್ಥೆ ಭದ್ರತಾ ಮಂಡಳಿಯಲ್ಲಿ ಚರ್ಚಿಸುವ ಉದ್ದೇಶ ಇಲ್ಲ. ವೈರಸ್‌ ಸೋಂಕು ಹರಡುತ್ತಿರುವುದನ್ನು ನಿಯಂತ್ರಿಸಲು ಚೀನಾ ಹಲವು ರೀತಿಯ ಕ್ರಮಗಳನ್ನು ಕೈಗೊಂಡಿದ್ದು, ಈಗಾಗಲೇ ಉತ್ತಮ ಫಲಿತಾಂಶ ದೊರೆತಿದೆ. ಪರಿಸ್ಥಿತಿ ಈಗ ಸುಧಾರಿಸುತ್ತಿದೆ ಎಂದು ವಿಶ್ವಸಂಸ್ಥೆಯ ಚೀನಾದ ರಾಯಭಾರಿ ಝಾಂಗ್ ತಿಳಿಸಿದ್ದಾರೆ.

   ಇನ್ನು ವೈರಸ್ ಜನಕ ದೇಶವಾಗಿರುವ ಚಿನಾ ಬಿಟ್ಟರೆ ಎರಡನೆಯ ಸ್ಥಾನ ದಕ್ಷಿಣ ಕೊರಿಯಾಗೆ ಸೇರುತ್ತದೆ ಸೋಂಕಿಗೆ ಒಳಗಾದವರ ಸಂಖ್ಯೆ 5,000ಕ್ಕೆ ತಲುಪಿದೆ. ಚೀನಾ ಹೊರತುಪಡಿಸಿದರೆ ದಕ್ಷಿಣ ಕೊರಿಯಾದಲ್ಲೇ ಅತಿ ಹೆಚ್ಚು ಮಂದಿ ವೈರಸ್‌ ಸೋಂಕಿಗೆ ಒಳಗಾಗಿದ್ದಾರೆ. ದಕ್ಷಿಣ ಕೊರಿಯಾದಲ್ಲಿ ಮತ್ತೆ ಇಬ್ಬರು ಸಾವಿಗೀಡಾಗಿದ್ದು, ಮೃತಪಟ್ಟವರ ಸಂಖ್ಯೆ 28ಕ್ಕೇರಿದೆ ಎಂದು ಕೊರಿಯಾ ತಿಳಿಸಿದೆ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ  

Recent Articles

spot_img

Related Stories

Share via
Copy link