ರಸ್ತೆ ಅಗಲೀಕರಣಗೊಳಿಸಲು ಆಗ್ರಹ

ತುರುವೇಕೆರೆ:


  ವಿವಿಧ ಸಂಘ-ಸಂಸ್ಥೆಗಳಿಂದ ರಸ್ತೆ ತಡೆದು ಪ್ರತಿಭಟನೆ

      ಪಟ್ಟಣದ ದಬ್ಬೇಘಟ್ಟ ರಸ್ತೆ ಅಗಲೀಕರಣ ಕಾಮಗಾರಿಯ ಬಗ್ಗೆ ಇಚ್ಛಾ ಶಕ್ತಿ ಇಲ್ಲದ ಪಟ್ಟಣ ಪಂಚಾಯಿತಿ, ಜಿಲ್ಲಾ ಹಾಗೂ ತಾಲ್ಲೂಕು ಆಡಳಿತದ ವಿರುದ್ಧ ತುರುವೇಕೆರೆ ತಾಲ್ಲೂಕು ಅಭಿವೃದ್ಧಿ ವೇದಿಕೆ ವತಿಯಿಂದ ನೂರಾರು ಜನ ಪಟ್ಟಣದ ದಬ್ಬೇಘಟ್ಟ ವೃತ್ತದಲ್ಲಿ ರಸ್ತೆ ತಡೆದು ಪ್ರತಿಭಟನೆ ನಡೆಸಿದರು.

ತಾಲ್ಲೂಕಿನ ಹಲವಾರು ಸಂಘ ಸಂಸ್ಥೆಗಳ ನೂರಾರು ಮುಖಂಡರು ಹಾಗೂ ಸದಸ್ಯರುಗಳು ಸಂಬಂಧಿಸಿದ ಅಧಿಕಾರಿಗಳ ವಿರುದ್ಧ ದಿಕ್ಕಾರ ಕೂಗಿದರು. ದಬ್ಬೆಘಟ್ಟ ರಸ್ತೆಯಲ್ಲಿ ಯಾವುದೇ ವಾಹನ ಸಂಚರಿಸದಂತೆ ರಸ್ತೆ ತಡೆದು ಪ್ರತಿಭಟನೆ ನಡೆಸಿದರು.
ಪಟ್ಟಣ ಪಂಚಾಯಿತಿ ಮಾಜಿ ಅಧ್ಯಕ್ಷ ಹಾವಾಳ ರಾಮೇಗೌಡ ಮಾತನಾಡಿ, ದಬ್ಬೇಘಟ್ಟ ರಸ್ತೆ ಅಗಲೀಕರಣ ಕಾಮಗಾರಿ ಕುಂಠಿತಗೊಂಡಿದೆ.

ಕೆಎಸ್‍ಆರ್‍ಟಿಸಿ ಡಿಪೋ ಹಾಗೂ ಬಸ್ ನಿಲ್ದಾಣ ಇದೇ ರಸ್ತೆಯಲ್ಲಿದ್ದು ಪ್ರತಿದಿನ ನೂರಾರು ಬಸ್ಸುಗಳು ಈ ರಸ್ತೆಯಲ್ಲೇ ಸಂಚರಿಸುವುದರಿಂದ ಸಣ್ಣ ಪುಟ್ಟ ವಾಹನ ಚಲಿಸಲು ಕಷ್ಟಸಾಧÀ್ಯವಾಗಿದ್ದು, ಕೂಡಲೇ ರಸ್ತೆ ಅಗಲೀಕರಣ ಗೊಳಿಸಬೇಕೆಂದು ಒತ್ತಾಯಿಸಿದರು.

ಕಾಂಗ್ರೆಸ್ ಮುಖಂಡ ಸುಬ್ರಹ್ಮಣ್ಣಿ ಶ್ರೀಕಂಠೇಗೌಡ ಹಾಗೂ ಜಿ.ಪಂ.ಸದಸ್ಯ ಎನ್.ಆರ್ ಜಯರಾಮ್ ಮಾತನಾಡಿ, ದೆಬ್ಬೇಘಟ್ಟ ರಸ್ತೆಯಲ್ಲಿ ಸರ್ಕಾರಿ ಕಚೇರಿ ಹಾಗೂ ಖಾಸಗಿ ಇಲಾಖೆಗಳು, ಶಾಲಾ ಕಾಲೇಜುಗಳಿದ್ದು, ಈ ರಸ್ತೆಯಲ್ಲಿ ಪ್ರತಿದಿನ ಸಾವಿರಾರು ವಾಹನಗಳು, ವಿದ್ಯಾರ್ಥಿಗಳು, ಸಾರ್ವಜನಿಕರು ಸೇರಿದಂತೆ ಜನದಟ್ಟಣೆಯಿಂದ ಕೂಡಿದ ಈ ರಸ್ತೆಯಲ್ಲಿ ಸೋಮವಾರ ಬಂತೆಂದರೆ ಇಲ್ಲಿ ಜನರು ಸಂಚಾರ ಮಾಡುವುದಕ್ಕೆ ಅಡಚಣೆಯಾಗುತ್ತದೆ ಎಂದರು.

ಹಲವಾರು ಬಾರಿ ಸಂಘಟಿತ ಹೋರಾಟ ನಡೆಸಿದರೂ ಸಹಾ ಸಂಬಂಧಪಟ್ಟ ಇಲಾಖಾಧಿಕಾರಿಗಳು ಯಾವುದೇ ಕ್ರಮ ಕೈಗೊಳ್ಳುವಲ್ಲಿ ವಿಫಲವಾರಾಗಿದ್ದಾರೆ. ರಸ್ತೆ ಅಗಲೀಕರಣಗೊಳ್ಳುವವರೆಗೆ ನಮ್ಮ ಹೋರಾಟ ಮುಂದುವರಿಯಲಿದೆ ಎಂದರು.
ತಹಶೀಲ್ದಾರ್ ನಯೀಂ ಉನ್ನಿಸಾ, ಪಿಎಸ್‍ಐ ಕೇಶವ ಮೂರ್ತಿ ಪ್ರತಿಭಟನಾಕಾರರನ್ನು ಮನವೊಲಿಸಲು ಪ್ರಯತ್ನಿಸಿದರಾದರೂ ಜಿಲ್ಲಾಧಿಕಾರಿಗಳನ್ನು ಸ್ಥಳಕ್ಕೆ ಕರೆಸಬೇಕು ಇಲ್ಲವೆ ಕೆಲಸ ಪ್ರಾರಂಭಿಸುವವರೆವಿಗೂ ನಾವು ಇಲ್ಲಿಂದ ಕದಲುವುದಿಲ್ಲವೆಂದು ಧರಣಿ ನಿರತರು ಪಟ್ಟು ಹಿಡಿದರು.

ಕೊನೆ ಕ್ಷಣದಲ್ಲಿ 22ರಂದು ಸಂಬಂಧಪಟ್ಟಂತೆ ಎಲ್ಲಾ ಇಲಾಖಾಧಿಕಾರಿಗಳ ಸಭೆ ಕರೆದು ಕ್ರಮ ಕೈಗೊಳ್ಳುವುದಾಗಿ ತಹಶೀಲ್ದಾರ್ ಭರವಸೆ ನೀಡಿದರಲ್ಲದೆ, ಆ ಕೂಡಲೇ ಹಿಟಾಚಿ ಯಂತ್ರ ತರಿಸಿ ರಸ್ತೆ ಬದಿ ಕಾಮಗಾರಿ ಪ್ರಾರಂಭಿಸಿದ್ದರಿಂದ ರಸ್ತೆ ತೆರವು ಮಾಡಿ, ಧರಣಿ ಕೈಬಿಡುವಂತೆ ಮನವೊಲಿಸಲಾಯಿತು.

ಪ್ರತಿಭಟನೆಯಲ್ಲಿ ಜಿ.ಆರ್.ರಂಗೇಗೌಡ, ಪ.ಪಂ.ಸದಸ್ಯ ಯಜಮಾನ್ ಮಹೇಶ್, ಮಾಜಿ ಸದಸ್ಯ ದಿವಾಕರ್, ಜಯ ಕರ್ನಾಟಕ ಅಧ್ಯಕ್ಷ ಸುರೇಶ್, ಸಿಐಟಿಯು ಸತೀಶ್, ಪಂಚಾಯತ್ ಕಾವಲು ಸಮಿತಿ ಅಧ್ಯಕ್ಷ ವೆಂಕಟೇಶ್, ಆಟೋ ಚಾಲಕರ ಸಂಘದ ಅಧ್ಯಕ್ಷ ಗಂಗಾಧರಯ್ಯ, ವಿ.ಬಿ.ಸುರೇಶ್, ಜಾಫರ್, ಡಿಎಸ್‍ಎಸ್ ಕುಮಾರ್, ಕೃಷ್ಣಮೂರ್ತಿ, ರೇಣುಕೇಶ್, ಉಪೇಂದ್ರ, ಕೃಷ್ಣಪ್ಪ ಸೇರಿದಂತೆ ರೈತಸಂಘ ಹಾಗೂ ಹಲವು ಸಂಘಟನೆಗಳ ನೂರಾರು ಮುಖಂಡರು ಪಾಲ್ಗೊಂಡಿದ್ದರು.

12.5 ಮೀ. ರಸ್ತೆ ಅಗಲೀಕರಣ ನೆಪದಲ್ಲಿ ರಸ್ತೆ ಬದಿಯಿದ್ದ ದೊಡ್ಡ ದೊಡ್ಡ ಮರಗಳನ್ನು ಕಡಿದು ಇದೀಗ ಕೇವಲ 10.5 ಮೀ.ಮಾತ್ರ ಅಗಲೀಕರಣ ಮಾಡುತ್ತಿರುವುದಕ್ಕೆ ನಮ್ಮಗಳ ವಿರೋಧವಿದ್ದು, 12.5 ಮೀ.ರಸ್ತೆ ಅಗಲೀಕರಣವಾಗುವವರೆಗೂ ನಮ್ಮಗಳ ಹೋರಾಟ ನಿರಂತರವಾಗಿರುತ್ತದೆ.

ಶ್ರೀನಿವಾಸ್ ಗೌಡ
ರೈತ ಸಂಘದ ಅಧ್ಯಕ್ಷ

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link