ಮಿಡಿಗೇಶಿ ಗ್ರಾಮದಲ್ಲಿ ಹೆಚ್ಚಿದ ಅನೈರ್ಮಲ್ಯ

ಮಿಡಿಗೇಶಿ:


ಮಿಡಿಗೇಶಿ ಗ್ರಾಮ ಪಂಚಾಯಿತಿ ಕೇಂದ್ರ ಮಿಡಿಗೇಶಿ ಬಸ್ ನಿಲ್ದಾಣದ ಬಳಿಯಲ್ಲಿರುವ ಸಿಸ್ಟನ್‍ನಲ್ಲಿ (ಸಿಮೆಂಟ್ ಟ್ಯಾಂಕ್) ನೀರು ಸಂಗ್ರಹ ಮಾಡಿ, ನಲ್ಲಿಗಳ ಮೂಲಕ ಮನೆಗಳಿಗೆ ನೀರು ಸರಬರಾಜು ಮಾಡಲಾಗುತ್ತದೆ. ಆದರೆ ಈ ಸಿಸ್ಟನ್ ಸುತ್ತಲೂ ಗಿಡಗೆಂಟೆಗಳು, ಕಲ್ಲುಮುಳ್ಳು, ಕೊಳಚೆ ತುಂಬಿಕೊಂಡಿದೆ. ಈ ಸಿಸ್ಟನ್‍ನ ನಲ್ಲಿಯಿಂದ ಬಸ್ ನಿಲ್ದಾಣದ ಸುತ್ತಮುತ್ತಿನ ಮನೆಗಳವರು, ವೈನ್ಸ್‍ಸ್ಟೋರ್Uಳವರು, ಹೋಟೆಲ್‍ಗಳವರು ಬಳಕೆಗೆ, ಕುಡಿಯಲು ನೀರು ಕೊಂಡೊಯ್ಯುತ್ತಾರೆ.

ಈ ಬಗ್ಗೆ ಗ್ರಾಮ ಪಂಚಾಯಿತಿಯ ಚುನಾಯಿತ ಜನ ಪ್ರತಿನಿಧಿಗಳು, ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ, ಕಾರ್ಯದರ್ಶಿ, ಬಿಲ್ ಕಲೆಕ್ಟರ್, ಕಂಪ್ಯೂಟರ್ ಆಪರೇಟರ್, ವಾಟರ್ ಮನ್‍ಗಳು ಆದಿಯಾಗಿ ಯಾರಿಗು ಸ್ವಚ್ಛತೆ ಬಗ್ಗೆ ಗಮನ ಹರಿಸಲು ಬಿಡುವಿಲ್ಲವೇ ಇಲ್ಲವೇನೋ ಎಂಬಷ್ಟು ಕರ್ತವ್ಯವು ಹೆಗಲ ಹೊರೆಯಾಗಿದೆಯೇನೋ ಪಾಪ ಎನ್ನುವಂತಾಗಿದೆ.

ಸದರಿ ನೀರಿನ ಅವ್ಯವಸ್ಥೆ ಬಗ್ಗೆ, ಶೌಚಾಲಯದ ಮುಂಭಾಗದ ಅನೈರ್ಮಲ್ಯತೆ ಬಗ್ಗೆ ಸುಮಾರು ಎರಡು ವರ್ಷಗಳಿಂದಲೂ ಗ್ರಾಮದ ಮಧ್ಯಭಾಗದಲ್ಲ್ಲಿರುವ ಅರಳಿಮರದ ಜಗಲಿ ಕಟ್ಟೆಯ ಮುಂಭಾಗದ ಶಿಕ್ಷಕ ಎಂ.ಮಹೇಶ್, ರುದ್ರ ಪ್ರಕಾಶ್, ಅಶ್ವತ್ಥ್ ನಾರಾಯಣ ಶೆಟ್ಟರು, ಶಿಕ್ಷಕ ಮೈಲಣ್ಣ, ತಿಪ್ಪೇಸ್ವಾಮಿ, ದೊಡ್ಡನಾಗಪ್ಪ, ತಿಪ್ಪೇಸ್ವಾಮಿರವರುಗಳೆಲ್ಲರ ವಾಸದ ಮನೆಗಳಿವೆ. ಈ ಮನೆಗಳ ಮಧ್ಯೆ ಇರುವ ಖಾಲಿ ನಿವೇಶನದಲ್ಲಿ ತಿಪ್ಪೆಗುಂಡಿ, ಕಸದ ರಾಶಿ ಹಾಗೂ ಚರಂಡಿಯ ಮಲಿನ ನೀರು ಮಳೆಗಾಲ, ಬೇಸಿಗೆ ಕಾಲ ಎನ್ನದೆ ನಿರಂತರ ಹರಿಯುತ್ತಿದೆ.

ಈ ಬಗ್ಗೆ ಗ್ರಾಮ ಪಂಚಾಯಿತಿಗೆ ಲಿಖಿತ ದೂರನ್ನು ನೀಡಿ ವರ್ಷಗಳೆ ಉರುಳಿದರೂ ಸಂಬಂಧಪಟ್ಟ ಗ್ರಾಮ ಪಂಚಾಯಿತಿ ಗಮನ ನೀಡಿಲ್ಲ. ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳು ಸದರಿ ಕೊಳಚೆ ಪ್ರದೇಶಕ್ಕೆ ಭೇಟಿ ನೀಡುವಂತೆ ಮಿಡಿಗೇಶಿ ಗ್ರಾಮದ ಜನಸಾಮಾನ್ಯರು ಪತ್ರಿಕೆ ಮೂಲಕ ಮನವಿ ಮಾಡಿಕೊಂಡಿದ್ದಾರೆ.


ಅಲ್ಲದೆ ಕೋಳಿ, ಕುರಿ ಮಾಂಸದ ಅಂಗಡಿಯವರು ತ್ಯಾಜ್ಯ ವಸ್ತುಗಳನ್ನು ದನ ಕರುಗಳು ನೀರು ಕುಡಿಯುವ ಹಾಗೂ ಜನಸಾಮಾನ್ಯರು ತಮ್ಮ ಬಟ್ಟೆ ಬರೆಗಳನ್ನು ಸ್ವಚ್ಛ ಮಾಡಲು ಬಳಸುವ ನೀರಿನ ಸಂಗ್ರಹ ಸನ್ಯಾಸಿ ಕಟ್ಟೆಗೆ ಹಾಕುತ್ತಿದ್ದಾರೆ. ಹಾಗಾಗಿ ಸನ್ಯಾಸಿ ಕಟ್ಟೆಯ ನೀರು ಮಲಿನಗೊಳ್ಳುತ್ತಿದೆ. ಈ ಬಗ್ಗೆ ಮತ್ತು ಗ್ರಾಮದಲ್ಲಿನ ಬಹುತೇಕ ಬೀದಿ ದೀಪಗಳು ಹಗಲಿರುಳೆನ್ನದೆ ಉರಿಯುತ್ತಿವೆ.

ಇದರಿಂದ ಗ್ರಾಮ ಪಂಚಾಯಿತಿಗೆ ಪ್ರತಿ ತಿಂಗಳು ಹೆಚ್ಚಿಗೆ ಬಿಲ್ ಬರುತ್ತಿದ್ದು, ಗ್ರಾಮ ಪಂಚಾಯಿತಿಗೆ ಆಗುತ್ತಿರುವಂತಹ ನಷ್ಟಕ್ಕೆ ಯಾರು ಹೊಣೆ ಇತ್ಯಾದಿ ಹಲವಾರು ದೂರುಗಳು ವ್ಯಾಪಕವಾಗಿ ವೈರಲ್ ಆಗಿವೆ. ಹಾಗಾಗಿ ಸದರಿ ಗ್ರಾಮ ಪಂಚಾಯಿತಿ ಅಧ್ಯಕ್ಷರು-ಉಪಾಧ್ಯಕ್ಷರು ಎಚ್ಚೆತ್ತುಕೊಳ್ಳದೆ ಇದ್ದಲ್ಲಿ ಮುಂದಾಗುವ ತೊಂದರೆ ತಾಪತ್ರಯಗಳಿಗೆ ಗ್ರಾಮ ಪಂಚಾಯಿತಿಯವರೆ ಹೊಣೆಗಾರರಾಗುತ್ತಾರೆ ಎಂದು ಜನಸಾಮಾನ್ಯರು ಆಕ್ರೋಶವನ್ನು ಪ್ರಜಾಪ್ರಗತಿಯೊಂದಿಗೆ ತೋಡಿಕೊಂಡಿದ್ದಾರೆ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap