ಮಧುಗಿರಿ :
ಶಾಲೆಯ ವಿದ್ಯಾರ್ಥಿನಿಯರೊಂದಿಗೆ ಅಸಭ್ಯ ವಾಗಿ ವರ್ತಿಸುತ್ತಿರುವ ಶಿಕ್ಷಕನನ್ನು ಶಾಲೆ ಓಡಿಸುವಂತೆ ರಂಟವಾಳ ಗ್ರಾಮಸ್ಥರು ಶಾಲೆಯ ಮುಂಭಾಗ ಪ್ರತಿಭಟನೆ ನಡೆಸಿದರು.
ತಾಲೂಕಿನ ಮಿಡಿಗೇಶಿ ಹೋಬಳಿಯ ರಂಟವಾಳ ಗ್ರಾಮದ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯ ಶಿಕ್ಷಕ ಪ್ರತಿದಿನ ಮಧ್ಯೆ ಸೇವಿಸಿ ಶಾಲೆಗೆ ಹಾಜರಾಗುತ್ತಿದ್ದ ಎನ್ನಲಾಗಿದೆ.
ಶಿಕ್ಷಕ ಲಕ್ಷ್ಮೀ ಕಾಂತ್ ಕಳೆದ ಆರು ತಿಂಗಳಿನಿಂದ ಶಾಲೆಯ ಕೆಲ ವಿದ್ಯಾರ್ಥಿನಿಯರೊಂದಿಗೆ ಅಸಭ್ಯವಾಗಿ ವರ್ತಿಸುತ್ತಿದ್ದು , ಹಣದ ಆಮಿಷ ಒಡ್ಡುವುದು , ನಾನು ನಿಮ್ಮ ತಂದೆ ಸ್ನೇಹಿತರೆಂದು ಹೇಳಿ ಮಕ್ಕಳ ದೇಹವನ್ನು ಶಿಕ್ಷಕ ಸ್ವರ್ಶಿಸುತ್ತಿದ್ದರೆಂದು ವಿದ್ಯಾರ್ಥಿ ನಿಯರ ಪೋಷಕರು ಆರೋಪಿಸಿದ್ದಾರೆ.
ಸ್ಥಳಕ್ಕೆ ಬಿ ಇ ಓ ರವರು ಆಗಮಿಸುವಂತೆ ಪ್ರತಿಭಟನಾಕಾರರು ಪಟ್ಟು ಹಿಡಿದಿದ್ದು ಶಿಕ್ಷಕನ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದ್ದಾರೆ
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page SUBSCRIBE ಮಾಡಿ