ಅಜ್ಜಿ ಹೇಳಿದೊಡನೆಯೇ ದುಬಾರಿ ಕಾರು ಖರೀದಿಸಿದ ಮೊಮ್ಮಗ…!!

ಕೇರಳ :

   ಇದು ಸ್ಮಾರ್ಟ್‌ಫೋನ್‌ಗಳ ಯುಗ. ಇಂದು ಯಾವುದೇ ವಯಸ್ಸಿನ ಭೇದವಿಲ್ಲದೆ ಎಲ್ಲರೂ ಸ್ಮಾರ್ಟ್ ಫೋನ್ ಬಳಸುತ್ತಾರೆ. ಸ್ಮಾರ್ಟ್‌ಫೋನ್‌ಗಳಲ್ಲಿ ವಾಟ್ಸಾಪ್, ಫೇಸ್‌ಬುಕ್, ಟಿಕ್ ಟಾಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್‌ನಂತಹ ಹಲವಾರು ಸೋಶಿಯಲ್ ಮೀಡಿಯಾಗಳ ಆಗಮನವು ಜನರನ್ನು ಬದಲಾಯಿಸಿದೆ ಎಂದು ಹೇಳಬಹುದು.

   ಜನರು ಒಂದು ದಿನದಲ್ಲಿ ವೀಕ್ಷಿಸುವ ವೀಡಿಯೊಗಳ ಸಂಖ್ಯೆಯು ಲೆಕ್ಕವಿಲ್ಲ. ಇಂದು ಶಾರ್ಟ್ ಮತ್ತು ರೀಲ್ಸ್ ವೀಡಿಯೋಗಳು ಟ್ರೆಂಡ್ ಆಗಿದೆ. ಇದರಲ್ಲಿ ಕೆಲವು ವಿಡಿಯೋಗಳು ವೈರಲ್ ಆಗುತ್ತಿವೆ. ಲ್ಯಾಂಬೋರ್ಗಿನಿಯಲ್ಲಿ ತಿರುಗಲು ಅಜ್ಜಿಯರು ಹೋಗುತ್ತಿರುವ ಇಂತಹ ವೀಡಿಯೊಂದು ಇತ್ತೀಚೆಗೆ ಸಿಕ್ಕಾಪಟ್ಟೆ ವೈರಲ್ ಆಗಿದೆ.

   ಇಂಟರ್‌ನೆಟ್‌ನಲ್ಲಿ ಹಲವು ವೀಡಿಯೋ ವೈರಲ್ ಆಗುತ್ತದೆ. ಕೆಲವು ವಿಡಿಯೋವನ್ನು ಹಲವರು ಮರೆತಿರಬಹುದು. ಇದೇ ರೀತಿ ವೈರಲ್ ಆದ ಅಜ್ಜಿಯರು ಮತ್ತೆ ಟ್ರೆಂಡ್ ಆಗಿದ್ದಾರೆ. ಹೊಸ ಕಾರು ಖರೀದಿಸಲಿರುವ ತಮ್ಮ ಮೊಮ್ಮಗನಿಗೆ ಯಾವ ಸೂಪರ್ ಕಾರ್ ಖರೀದಿಸಬೇಕು ಎಂದು ಅಜ್ಜಿಯರು ಸೂಚಿಸುವ ಮೂಲಕ ಮತ್ತೆ ವೈರಲ್ ಆಗಿದ್ದಾರೆ. ಅದೂ ಕೂಡ ಅವರ ತಲೆಮಾರಿನ ಅನೇಕರಿಗೆ ತಿಳಿದಿಲ್ಲದ ಬ್ರಾಂಡ್ ಮೆಕ್ಲಾರೆನ್ ಅನ್ನು ಮೊಮ್ಮಗನಿಗೆ ಸೂಚಿಸಿದ್ದಾರೆ.

   ಮೊಮ್ಮಗನು ನಂತರ ಮೆಕ್ಲಾರೆನ್ 765 LT   ಸೂಪರ್ ಕಾರನ್ನು ಖರೀದಿಸಿದ್ದಾರೆ. ಈ ಸ್ಪೋರ್ಟ್ಸ್ ಕಾರನ್ನು ಖರೀದಿಸಿದ ಮೂರನೇ ಭಾರತೀಯರಾಗಿದ್ದಾರೆ. ಆದರೆ ಇದಕ್ಕಿಂತ ಹೆಚ್ಚಾಗಿ ಮೆಕ್‌ಲಾರೆನ್‌ನ ಈ ಮಾದರಿಯನ್ನು ಹೊಂದಿರುವ ಅತ್ಯಂತ ಕಿರಿಯ ಭಾರತೀಯ ಎಂಬ ಖ್ಯಾತಿ ಈಗ ಅಜ್ಜಿಯ ಮೊಮ್ಮಗನಿಗೆ ಸಲ್ಲುತ್ತದೆ. ಆನಂದ್ ಅವರು ತಮ್ಮ ಇನ್‌ಸ್ಟಾಗ್ರಾಮ್ ಪೇಜ್ ಮೂಲಕ ವಾಹನ ಖರೀದಿಯ ಮಾಹಿತಿ ವೈರಲ್ ವೀಡಿಯೊವನ್ನು ಈಗ ಹಂಚಿಕೊಂಡಿದ್ದಾರೆ.

   ಮರ್ಸಿಡಿಸ್ ಬೆಂಝ್ ಕಾರಿನಲ್ಲಿ ಕುಳಿತ ಆನಂದ್ ಎಂಬ ಯುವಕ ದುಬೈಗೆ ಹೋಗಿ ಪೋರ್ಷೆ ಅಥವಾ ಫೆರಾರಿ ಖರೀದಿಸಬೇಕೇ ಎಂದು ತನ್ನ ಅಜ್ಜಿಯೊಬ್ಬರನ್ನು ಕೇಳುವುದರೊಂದಿಗೆ ಮೊದಲ ರೀಲ್ ಪ್ರಾರಂಭವಾಗುತ್ತದೆ. ಆದರೆ ಅಜ್ಜಿ ಎರಡೂ ಅಲ್ಲ ಲ್ಯಾಂಬೋರ್ಗಿನಿ ಸಾಕು ಎಂದು ಹೇಳಿದ್ದಾರೆ. ನಂತರ ಇಬ್ಬರು ಅಜ್ಜಿಯರು ದುಬೈನಲ್ಲಿ ಲ್ಯಾಂಬೋರ್ಗಿನಿ ಹುರಾಕನ್ ಮತ್ತು ಉರುಸ್ ಅನ್ನು ಚಾಲನೆ ಮಾಡುತ್ತಿರುವ ಹಳೆಯ ವೀಡಿಯೊ ಕ್ಲಿಪ್ ಅನ್ನು ತೋರಿಸಲಾಗುತ್ತದೆ. 

   ಎರಡನೇ ರೀಲ್‌ನಲ್ಲಿ ಆನಂದ್‌ನ ಎರಡನೇ ಅಜ್ಜಿ ಎಲ್ಲರ ಬಳಿ ಪೋರ್ಷೆ ಇದೆ ಎಂದು ಹೇಳುತ್ತಾರೆ. ನಂತರ ಮೊದಲ ಅಜ್ಜಿಯನ್ನು ಮತ್ತೆ ತೋರಿಸಲಾಗುತ್ತದೆ ಮತ್ತು ಪೋರ್ಷದ ಡೋರುಗಳು ಓಪನ್ ಆಗುವುದಿಲ್ಲ ಎಂದು ಹೇಳುವುದನ್ನು ಕೇಳಬಹುದು. ಆದ್ದರಿಂದ ಅಜ್ಜಿ ಮೊಮ್ಮಗನಿಗೆ ಮೆಕ್ಲಾರೆನ್ ತೆಗೆದುಕೊಳ್ಳುವಂತೆ ಸಲಹೆ ನೀಡುತ್ತಾರೆ. ಅದರ ನಂತರ ಇದೇ ಮೆಕ್ಲಾರೆನ್ 765 LT ಮಾದರಿಯ ವಿತರಣೆಯನ್ನು ಪಡೆದುಕೊಳ್ಳುತ್ತಾರೆ.

   ಮೆಕ್ಲಾರೆನ್ ಇತ್ತೀಚೆಗೆ ಅಧಿಕೃತವಾಗಿ ಭಾರತೀಯ ಮಾರುಕಟ್ಟೆಯನ್ನು ಪ್ರವೇಶಿಸಿರುವುದರಿಂದ, ನಮ್ಮ ದೇಶದಲ್ಲಿ ಕೆಲವೇ ಕೆಲವು ಮೆಕ್ಲಾರೆನ್ ಸೂಪರ್ ಕಾರುಗಳಿವೆ.. ಈ ಕುಟುಂಬವು ಕೇರಳದ ಮೊದಲ ಮೆಕ್ಲಾರೆನ್ ಮಾಲೀಕರಾಗಿದೆ. ಈ ಮಾಲೀಕರು ಈ ಸೂಪರ್ ಕಾರನ್ನು ಹೊಂದಿರುವ ಮೂರನೇ ಭಾರತೀಯರಾಗಿದ್ದಾರೆ. ಮೆಕ್ಲಾರೆನ್ 765LT ಬ್ರಿಟಿಷ್ ವಾಹನ ತಯಾರಕರ ಅತ್ಯಂತ ದುಬಾರಿ ಸೂಪರ್‌ಕಾರ್‌ಗಳಲ್ಲಿ ಒಂದಾಗಿದೆ. ಇತ್ತೀಚೆಗೆ ಮಾರುಕಟ್ಟೆಗೆ ಬಂದಿರುವ ಈ ಮಾಡೆಲ್ ಭಾರತದಲ್ಲಿ 12 ಕೋಟಿಗೂ ಹೆಚ್ಚು ವೆಚ್ಚವಾಗಲಿದೆ.

 

Recent Articles

spot_img

Related Stories

Share via
Copy link