ಮಧುಗಿರಿ : ಬೋನಿಗೆ ಬಿದ್ದ ಕರಡಿ….!

ಮಧುಗಿರಿ :

    ತಾಲ್ಲೂಕು ಕಸಬಾ ವ್ಯಾಪ್ತಿಯ ಗ್ರಾಮಗಳಲ್ಲಿ ಆಗಾಗ್ಗೆ ಕರಡಿಗಳು ಕಾಣಿಸಿಕೊಂಡು ಜನರಲ್ಲಿ ಭಯ ಮೂಡಿಸಿದ್ದ 8 ವರ್ಷದ ಗಂಡು ಕರಡಿಯೊಂದು ಮಂಗಳವಾರ ರಾತ್ರಿ ಹಾಗೂ ಕಳೆದ ವಾರ ಒಂದು ಕರಡಿ ಅರಣ್ಯ ಇಲಾಖೆಯ ಅಧಿಕಾರಿಗಳು ಇಟ್ಟಿದ್ದ ಬೋನಿಗೆ ಬಿದ್ದಿವೆ.

    ಪುರಸಭೆ ಮಾಜಿ ಅಧ್ಯಕ್ಷ ಎಂ.ಕೆ.ನಂಜುಂಡಯ್ಯ ಅವರ ಜಮೀನಿನಲ್ಲಿ ಅರಣ್ಯ ಇಲಾಖೆಯವರು ಇಟ್ಟಿದ್ದ ಬೋನಿಗೆ ಬಿದ್ದಿದೆ. ಆಗಾಗ್ಗೆ ಕರಡಿ ಕಾಣಿಸಿಕೊಳ್ಳುತ್ತಿರುವುದರಿಂದ ಭಯ ಬೀತರಾಗಿದ್ದ ರೈತರು ಅರಣ್ಯ ಇಲಾಖೆ ಅಧಿಕಾರಿಗಳಿಗೆ ಕರಡಿಯನ್ನು ನಿಯಂತ್ರಣ ಮಾಡುವಂತೆ ಮನವಿ ಮಾಡಿದ್ದರು. ಕರಡಿ ಹಿಡಿಯಲು ಬೋನ್ ಇಟ್ಟಿದ್ದರು. ಮಂಗಳವಾರ ರಾತ್ರಿ ಕರಡಿ ಬೋನಿಗೆ ಬಿದ್ದಿದೆ. ಜನರು ಸರದಿ ಸಾಲಿನಲ್ಲಿ ನಿಂತು ಕುತೂಹಲದಿಂದ ಕರಡಿಯನ್ನು ವೀಕ್ಷಿಸಿದರು.

    ಉಪ ವಲಯರಣ್ಯಾಧಿಕಾರಿ ಮುತ್ತುರಾಜು , ಪ್ರದೀಪ್ , ಶ್ರೀಧರ್ , ಶಿವರಾಜು , ಕೃಷ್ಣಮೂರ್ತಿ , ರಘು ಹಾಜರಿದ್ದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page SUBSCRIBE ಮಾಡಿ

Recent Articles

spot_img

Related Stories

Share via
Copy link
Powered by Social Snap