ಎತ್ತಿನ ಹೊಳೆ ಪೈಪ್‌ ಲೈನ್‌ ಸೋರಿಕೆ ….!

ಸಕಲೇಶಪುರ:

    ರಾಜ್ಯ ಸರ್ಕಾರದ ಮಹತ್ವಾಕಾಂಕ್ಷೆಯ ಎತ್ತಿನಹೊಳೆ ಸಮಗ್ರ ಕುಡಿಯುವ ನೀರು ಯೋಜನೆಯ ಪೈಪ್ ಲೈನ್ ಸೋರಿಕೆಯಾಗಿದ್ದು, ಬೆಳೆ, ರಸ್ತೆ ಹಾಗೂ ಕಟ್ಟಡಗಳಿಗೆ ನೀರು ನುಗ್ಗಿ ಹಾನಿಯುಂಟಾಗಿದೆ.15 ದಿನಗಳ ಹಿಂದೆಯೂ ಇದೇ ಸ್ಥಳದಲ್ಲಿ ಸೋರಿಕೆಯಾಗಿತ್ತು. ಮತ್ತೆ ಸೋರಿಕೆಯಿಂದ ಅಪಾರ ನಷ್ಟ ಉಂಟಾಗಿದೆ.

   ಸೆ. 6ರಂದು ಮೊದಲ ಹಂತದ ನೀರೆತ್ತುವ ಏತ ಯೋಜನೆಯನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಉದ್ಘಾಟಿಸಿದ್ದರು. ನಂತರ 5 ಚೆಕ್‌ಡ್ಯಾಂಗಳಿಂದ ನಿರಂತರವಾಗಿ ನೀರನ್ನು ಹೆಬ್ಬನಹಳ್ಳಿ ಚೆಕ್‌ಡ್ಯಾಂಗೆ ಹರಿಸಲಾಗುತ್ತಿದೆ. ಸತತವಾಗಿ ಹರಿಯುತ್ತಿರುವ ನೀರಿನ ಒತ್ತಡದಿಂದ ಪೈಪ್‌ಲೈನ್‌ ಒಡೆದಿದ್ದು, ತಗ್ಗು ಪ್ರದೇಶದ ಮನೆ, ಜಮೀನು ಹಾಗೂ ಎಸ್ಟೇಟ್‌ಗೆ ನೀರು ನುಗ್ಗಿದೆ. ಇದರಿಂದಾಗಿ ಅಪಾರ ಪ್ರಮಾಣದ ಹಾನಿಯುಂಟಾಗಿದೆ.

   ಈ ನಡುವೆ ಕಳಪೆ ಕಾಮಗಾರಿಯಿಂದ ಪೈಪ್‌ಲೈನ್ ಒಡೆದಿದೆ’ ಎಂದು ಸ್ಥಳೀಯರು ಆರೋಪಿಸಿದ್ದು, ನಷ್ಟಕ್ಕೆ ಪರಿಹಾರ ನೀಡಬೇಕು ಎಂದು ಒತ್ತಾಯಿಸಿದ್ದಾರೆ.

   ಈ ಹಿಂದೆ ಯೋಜನೆ ಉದ್ಘಾಟನೆಗೂ ಮುನ್ನವೇ ಪೈಪ್‌ಲೈನ್‌ ಹಾಳಾಗಿತ್ತು. ಕಳಪೆ ಕಾಮಗಾರಿಯಿಂದ ಪೈಪ್‌ಲೈನ್‌ ಪದೇ ಪದೇ ಹಾಳಾಗುತ್ತಿದೆ. ನಿರಂತರವಾಗಿ ನೀರು ಪಂಪ್‌ ಮಾಡಿದ್ದರಿಂದ ಪೈಪ್‌ಲೈನ್‌ ಹಾಳಾಗಿದೆ ಎಂದು ಮೂಲಗಳು ತಿಳಿಸಿವೆ.