ಗುಬ್ಬಿ:
ಮಕ್ಕಳ ಪ್ರಾಥಮಿಕ ಶಿಕ್ಷಣ ವ್ಯವಸ್ಥೆಯಲ್ಲಿ ಆಮೂಲಾಗ್ರ ಬದಲಾವಣೆ ತರುವ ಅವಶ್ಯಕತೆ ಇದೆ ಎಂದ ಮಾಜಿ ಕಾನೂನು ಸಚಿವ ಜೆ ಸಿ ಮಾದುಸ್ವಾಮಿ,
ಒಂದನೇ ತರಗತಿಯಿಂದ ಒಂಬತ್ತನೇ ತರಗತಿಯವರೆಗೆ ಮಕ್ಕಳನ್ನು
ಪರೀಕ್ಷೆಗಳಲ್ಲಿ ಅನುತ್ತೀರ್ಣ ಮಾಡಬಾರದು ಎನ್ನುವುದಾದರೆ ಅವರಿಗೆ ಪರೀಕ್ಷೆಗಳಲ್ಲಿ ಮಾರ್ಕ್ಸ್ ಕೊಡಬಾರದು ಬದಲಿಗೆ ಅವರು ಮಾಡಿರುವ ತಪ್ಪುಗಳನ್ನ ತಿದ್ದಬೇಕು ಅವುಗಳಿಗೆ ನಂಬರ್ ಕೊಡಬಾರದು ಎಂದರು
ಗುರುವಾರ ಸಂಜೆ ಗುಬ್ಬಿ ತಾಲ್ಲೂಕು ಕಾಡಶೆಟ್ಟಿ ಹಳ್ಳಿಯ ಸರ್ಕಾರಿ ಹಿರಿಯ ಪ್ರಾಥಮಿಕ ಪಾಠ ಶಾಲೆಯ ಅಮೃತ ಮಹೋತ್ಸವದ ಅಭಿನಂದನಾ ಕಾರ್ಯಕ್ರಮ ವನ್ನು ಉದ್ಘಾಟಿಸಿ ಮಾತನಾಡಿದರು, ಈ ಸಂದರ್ಭದಲ್ಲಿ ಹಿರಿಯ ಕಲಾವಿದೆ ರಾಜ್ಯಸಭೆಯ ಮಾಜಿ ಸದಸ್ಯೆ ಡಾ ಬಿ ಜಯಶ್ರೀ ದಂಪತಿಗಳನ್ನು ಗೌರವಿಸಲಾಯಿತು,
