ಬೆಂಗಳೂರು:
ಟಿಕೆಟ್ ಹಂಚಿಕೆ ವಿಚಾರದಲ್ಲಿ ಪಕ್ಷದಲ್ಲಿ ಯಾವುದೇ ಅಶಿಸ್ತು ಇಲ್ಲ ಎಂದ ಕಟೀಲ್, ಪಕ್ಷದಲ್ಲಿ ಎಲ್ಲವೂ ಸರಿಯಾಗಿದ್ದು, ಪಕ್ಷದ ನಿರ್ಧಾರಗಳನ್ನು ಯಾರಾದರೂ ವಿರೋಧಿಸಿದರೆ ಪರಿಣಾಮ ಎದುರಿಸಬೇಕಾಗುತ್ತದೆ ಎಂದು ಎಚ್ಚರಿಸಿದರು. ಬದಲಾವಣೆ ತರಲು ಯುವ ಮುಖಗಳಿಗೆ ಟಿಕೆಟ್ ನೀಡುವಂತಹ ಕೆಲವು ಪ್ರಯೋಗಗಳನ್ನು ಮಾಡುತ್ತಿದೆ.
ಸಿ.ಟಿ.ರವಿ ಮುಂದಿನ ಮುಖ್ಯಮಂತ್ರಿಯಾಗುತ್ತಾರೆ ಎಂದು ಹಿರಿಯ ಮುಖಂಡ ಕೆ.ಎಸ್.ಈಶ್ವರಪ್ಪ ಅವರ ಹೇಳಿಕೆಗೆ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಆಕ್ಷೇಪ ವ್ಯಕ್ತ ಪಡಿಸಿದ್ದಾರೆ.
ಕಣಕ್ಕಿಳಿದ ಅಭ್ಯರ್ಥಿಗಳು ಹೊಸ ಮತ್ತು ಅನುಭವಿ ಪಕ್ಷದ ಕಾರ್ಯಕರ್ತರು, ವೃತ್ತಿಪರರು ಮತ್ತು ನಿವೃತ್ತ ಅಧಿಕಾರಶಾಹಿಗಳ ಸರಿಯಾದ ಮಿಶ್ರಣ ಎಂದು ಹೇಳಿದ ರಾಜ್ಯ ಬಿಜೆಪಿ ಮುಖ್ಯಸ್ಥರು, ಪಕ್ಷವು ಎಲ್ಲಾ ಸಮುದಾಯಗಳಿಗೆ ಉತ್ತಮ ಪ್ರಾತಿನಿಧ್ಯವನ್ನು ನೀಡಿದೆ ಎಂದು ಹೇಳಿದರು. ಇದು ಪಕ್ಷದ ಕಾರ್ಯಕರ್ತರಲ್ಲಿ ಹೊಸ ಉತ್ಸಾಹ ಮೂಡಿಸಿದ್ದು, ಪಕ್ಷ ತಂದಿರುವ ಬದಲಾವಣೆಗೆ ಮತದಾರರು ಕೂಡ ಸಕಾರಾತ್ಮಕವಾಗಿ ಸ್ಪಂದಿಸುತ್ತಿದ್ದಾರೆ ಎಂದರು.