ಐಟಿ ರಿಟರ್ನ್ಸ್‌ ಸಲ್ಲಿಕೆ ಗಡುವು ವಿಸ್ತರಣೆ ಆಗಿಲ್ಲ : ಸರ್ಕಾರದ ಸ್ಪಷ್ಟನೆ

ನವದೆಹಲಿ

    ಐಟಿ ರಿಟರ್ನ್ಸ್ ಸಲ್ಲಿಕೆಗೆ ನಿಗದಿ ಮಾಡಲಾಗಿದ್ದ ಜುಲೈ 31ರ ಡೆಡ್​ಲೈನ್ ಅನ್ನು ಆಗಸ್ಟ್ 31ರವರೆಗೆ ಒಂದು ತಿಂಗಳು ವಿಸ್ತರಿಸಲಾಗಿದೆ ಎನ್ನುವಂತಹ ಸುದ್ದಿ ಸೋಷಿಯಲ್ ಮೀಡಿಯಾದಲ್ಲಿ ಮತ್ತು ಕೆಲ ಮಾಧ್ಯಮಗಳಲ್ಲಿ ಹರಿದಾಡುತ್ತಿದೆ. ಆದರೆ, ಐಟಿಆರ್ ಫೈಲ್ ಮಾಡುವ ಡೆಡ್​ಲೈನ್ ಅನ್ನು ವಿಸ್ತರಿಸಲಾಗಿಲ್ಲ ಎಂದು ಸರ್ಕಾರ ಸ್ಪಷ್ಟಪಡಿಸಿದೆ. ಈ ಮೂಲಕ ದಂಡ ಇಲ್ಲದೇ ಐಟಿ ರಿಟರ್ನ್ಸ್ ಸಲ್ಲಿಸುವ ಅವಕಾಶ ಮುಗಿದುಹೋಗಿದೆ. 

     ಮಾಹಿತಿ ಮತ್ತು ಪ್ರಸರಣ ಸಚಿವಾಲಯದ ಅಡಿಗೆ ಬರುವ ಭಾರತೀಯ ಪ್ರೆಸ್ ರಿಜಿಸ್ಟ್ರಾರ್ ಜನರಲ್ ಕಚೇರಿ ಕಳೆದ ವಾರ ಬಿಡುಗಡೆ ಮಾಡಿದ ಅಡ್ವೈಸರಿಯೊಂದನ್ನು ಕೆಲವರು ತಪ್ಪಾಗಿ ಅರ್ಥೈಸಿಕೊಂಡಿದ್ದು ಈ ಗೊಂದಲಕ್ಕೆ ಕಾರಣವಾಗಿದೆ. ಕೇಂದ್ರ ಸರ್ಕಾರದ ಪಿಐಬಿಯ ಫ್ಯಾಕ್ಟ್ ಚೆಕ್ ವಿಭಾಗದಿಂದಲೂ ಈ ಬಗ್ಗೆ ಸ್ಪಷ್ಟನೆ ನೀಡಲಾಗಿದೆ. 

    ಪ್ರೆಸ್ ಮತ್ತು ನಿಯತಕಾಲಿಕೆಗಳ ನೊಂದಣಿ ಕಾಯ್ದೆ ಅಡಿಯಲ್ಲಿ ರಿಜಿಸ್ಟರ್ ಆಗಿರುವ ಪ್ರಕಾಶಕ ಸಂಸ್ಥೆಗಳು ವಾರ್ಷಿಕ ರಿಟರ್ನ್ಸ್ ಅನ್ನು ಸಲ್ಲಿಸಬೇಕು. ನಿರ್ದಿಷ್ಟ ಮುದ್ರಣ ವರ್ಷದಲ್ಲಿ ನ್ಯೂಸ್​ಪೇಪರ್​ಗಳ ಸರ್ಕುಲೇಶನ್ ಎಷ್ಟಿದೆ ಎಂಬುದು ಈ ಆ್ಯನುಯಲ್ ಸ್ಟೇಟ್ಮೆಂಟ್​ನಲ್ಲಿ ದಾಖಲಾಗುತ್ತದೆ. ಇದರ ಫೈಲಿಂಗ್​ಗೆ ಇದ್ದ ಡೆಡ್​ಲೈನ್ ಅನ್ನು ವಿಸ್ತರಿಸಲಾಗಿರುವ ಮಾಹಿತಿಯನ್ನು ಜುಲೈ 25ರಂದು ಹೊರಡಿಸಲಾದ ಅಡ್ವೈಸರಿಯಲ್ಲಿ ತಿಳಿಸಲಾಗಿತ್ತು.
   ಇದರೊಂದಿಗೆ, ಆದಾಯ ತೆರಿಗೆ ಪಾವತಿದಾರರು ಸಲ್ಲಿಸಬೇಕಾದ ಐಟಿಆರ್ ಫೈಲಿಂಗ್​ನ ಗಡುವು ವಿಸ್ತರಣೆ ಆಗಿಲ್ಲ ಎಂಬುದು ಸ್ಪಷ್ಟವಾಗಿದೆ. ಜುಲೈ 31ರೊಳಗೆ ಐಟಿಆರ್ ಸಲ್ಲಿಸದವರು, ಈಗ 5,000 ರುವರೆಗೆ ದಂಡ ಪಾವತಿಸಿ ಐಟಿಆರ್ ಫೈಲ್ ಮಾಡಬಹುದು. ಅದಕ್ಕೆ ಡಿಸೆಂಬರ್ 31ರವರೆಗೂ ಕಾಲಾವಕಾಶ ಇದೆ.

Recent Articles

spot_img

Related Stories

Share via
Copy link