ಪಾನ್‌- ಆಧಾರ್‌ ಲಿಂಕಿಂಗ್‌ : ಅವಧಿ ವಿಸ್ತರಣೆ

ವದೆಹಲಿ: 

  ತೆರಿಗೆದಾರರಿಗೆ ಇನ್ನೂ ಸ್ವಲ್ಪ ಸಮಯಾವಕಾಶ ನೀಡುವ ಸಲುವಾಗಿ, ಪ್ಯಾನ್ ಸಂಖ್ಯೆ ಮತ್ತು ಆಧಾರ್ ನ್ನು ಲಿಂಕ್ ಮಾಡುವ ದಿನಾಂಕವನ್ನು 2023ರ ಜೂನ್ 30 ರವರೆಗೆ ವಿಸ್ತರಣೆ ಮಾಡಲಾಗಿದೆ, ಆ ಮೂಲಕ ವ್ಯಕ್ತಿಗಳು ಯಾವುದೇ ಪರಿಣಾಮಗಳನ್ನು ಎದುರಿಸದೆ  ತಮ್ಮ ಆಧಾರ್ ಅನ್ನು ಪ್ಯಾನ್-ಆಧಾರ್ ಲಿಂಕ್ ಮಾಡಲು ನಿಗದಿತ ಪ್ರಾಧಿಕಾರಕ್ಕೆ ತಿಳಿಸಬಹುದು.

    ಹಾಗಾಗಿ ವದಂತಿಗಳಿಗೆ ಯಾವುದೇ ಆಧಾರವಿಲ್ಲ ಎಂದು ಖಚಿತವಾಗಿದೆ. ಪ್ರಸ್ತುತ ಇದನ್ನು ಲಿಂಕ್‌ ಮಾಡಲು 1000 ರೂ.ಗಳನ್ನು ಪಾವತಿಸಬೇಕು. ಈ ಪ್ರಕ್ರಿಯೆಯಿಂದ 80 ವರ್ಷ ದಾಟಿದವರು, ಅನಿವಾಸಿ ಭಾರತೀಯರು ಸೇರಿ ಇನ್ನೂ ಹಲ ವಿಭಾಗಗಳಲ್ಲಿ ಬರುವ ಜನರಿಗೆ ವಿನಾಯ್ತಿ ನೀಡಲಾಗಿದೆ.

ತಂತ್ರಾಂಶದ ತೊಂದರೆ :

    ಕೆಲದಿನಗಳಿಂದ ಈ ಪ್ರಕ್ರಿಯೆ ಪೂರೈಸಲು ಅಥವಾ ತಮ್ಮ ಲಿಂಕೇಜ್‌ ನ ಸ್ಥಿತಿಯನ್ನು ತಿಳಿಯಲು ಆದಾಯ ತೆರಿಗೆ ಇಲಾಖೆ ವೆಬ್‌ ಸೈಟ್‌ ನಲ್ಲಿ ನೀಡಲಾಗಿರುವ ಲಿಂಕ್‌ (STATUS CHECK ಮಾಡಲು ಇದರ ಮೇಲೆ ಕ್ಲಿಕ್‌ ಮಾಡಿ “INCOME TAX” )ಮೇಲೆ ಒತ್ತಿದರೆ ನಿಮ್ಮ ಪ್ಯಾನ್‌ ನಂಬರ್‌ ಮತ್ತು ಆಧಾರ್‌ ನಂಬರ್‌ ಕೇಳುತ್ತಿದ್ದು ಸ್ಟೇಟಸ್‌ ಎಂಬ ಗುಂಡಿ ಒತ್ತಿದರೆ Service Unavailable ಎಂಬ ಸಂದೇಶ ಬರುತ್ತಿದೆ ಆದ್ದರಿಂದ ಇದು ದಂಡ ಸಂಗ್ರಹಿಸಲೆಂದೇ ಮಾಡುತ್ತಿರುವ ಗಿಮಿಕ್‌ ಎಂಬುದು ಸಾರ್ವಜನಿಕರ ಅಳಲಾಗಿದೆ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap