ಸಿಎಂ ಹೆಸರು ಘೋಷಿಸುವ ತಾಕತ್ತು ಕಾಂಗ್ರೆಸ್- ಬಿಜೆಪಿಗಿಲ್ಲ :ಸಿ.ಎಂ ಇಬ್ರಾಹಿಂ

ತುಮಕೂರು:

     ಕಾಂಗ್ರೆಸ್-ಬಿಜೆಪಿ ಎರಡೂ ಪಕ್ಷಗಳಿಗೂ ತಮ್ಮ ಸಿಎಂ ಅಭ್ಯರ್ಥಿ ಯಾರೆಂದು ಘೋಷಿಸುವ ತಾಕತ್ತಿಲ್ಲ. ಜೆಡಿಎಸ್ ಪಕ್ಷವೊಂದೇ ಎಚ್.ಡಿ.ಕುಮಾರಸ್ವಾಮಿ ಅವರನ್ನು ಮುಖ್ಯಮಂತ್ರಿ ಅಭ್ಯರ್ಥಿಯಾಗಿ ಘೋಷಿಸಿದ್ದು, ಅವರು ಮತ್ತೆ ಸಿಎಂ ಆಗುವುದರಲ್ಲಿ ಸಂಶಯವೇ ಬೇಡ ಎಂದು ಜೆಡಿಎಸ್ ರಾಜ್ಯಾಧ್ಯಕ್ಷ ಕೇಂದ್ರ ಮಾಜಿ ಸಚಿವ ಸಿ.ಎಂ. ಇಬ್ರಾಹಿಂ ಘಂಟಾಘೋಷವಾಗಿ ನುಡಿದರು.

    ನಗರ ಜೆಡಿಎಸ್ ಅಭ್ಯರ್ಥಿ ಗೋವಿಂದರಾಜು ಪರ ಪ್ರಚಾರ ಸಭೆಗಾಗಿ ತುಮಕೂರು ನಗರಕ್ಕೆ ಆಗಮಿಸಿದ ಮಾರ್ಗಮಧ್ಯೆ

    ಬಡ್ಡಿಹಳ್ಳಿ ಎಸ್‌ಆರ್‌ಎಸ್ ಶಾಲೆಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಕಾಂಗ್ರೆಸ್ ಸಿಎಂ ಅಭ್ಯರ್ಥಿ ಹೆಸರು ಘೋಷಿಸದರೆ ಚುನಾವಣೆಗೆ ಮುನ್ನವೇ ಒಡೆಯಲಿದೆ. ಬಿಜೆಪಿಯಲ್ಲಿ ಯಾರಾಗುತ್ತಾರೆಂದು ಹೇಳಲು ಧೈರ್ಯ್ಯವಿಲ್ಲ. ಪಕ್ಷ ಕಟ್ಟಿದ ಯಡಿಯೂರಪ್ಪ ಅವರ ಸ್ಥಿತಿ ತಬ್ಬಲಿ ನೀನಾದೆ ಎಂಬ ಹಾಡಿನಂತಾಗಿದ್ದು, ಪ್ರಚಾರ ಸಮಿತಿ ಅಧ್ಯಕ್ಷ ಸ್ಥಾನವನ್ನು ಸಿಎಂಗೆ ನೀಡುವ ಮೂಲಕ ಅವರ ಕೈ ಕೆಳಗೆ ಹಿರಿಯ ನಾಯಕ ಬಿಎಸ್‌ವೈ ಕಾರ್ಯನಿರ್ವಹಿಸುವಂತೆ ಮಾಡಿ ಸ್ವಾಭಿಮಾನಕ್ಕೆ ಧಕ್ಕೆ ತರಲಾಗಿದೆ.

    ಇದನ್ನು ಅವರ ಮಗ ವಿಜಯೇಂದ್ರ ಅರ್ಥಮಾಡಿಕೊಳ್ಳಬೇಕು. ನನಗೆ ಕಾಂಗ್ರೆಸ್‌ನಲ್ಲಿ ಸ್ವಾಭಿಮಾನಕ್ಕೆ ಧಕ್ಕೆಯಾದ ಕಾರಣದಿಂದಲೇ ಇನ್ನೂ ನಾಲ್ಕು ವರ್ಷ ಎಂಎಲ್ಸಿ ಅವಧಿ ಇದ್ದರೂ ರಾಜೀನಾಮೆ ಬಿಸಾಕಿ ಬಂದೆ. ಯಡಿಯೂರಪ್ಪ ಅವರು ಹೇಗೆ ಇದೆಲ್ಲ ಸಹಿಸಿಕೊಂಡಿದ್ದಾರೋ ತಿಳಿಯದು ಎಂದರು.

    ಬೆಂಗಳೂರು ಮೈಸೂರು ಹೆದ್ದಾರಿ ಲೋಕಾರ್ಪಣೆ ವಿಷಯದಲ್ಲಿ ಕ್ರೆಡಿಟ್ ಪಡೆಯಲು ರಾಷ್ಟ್ರೀಯ ಪಕ್ಷಗಳು ಪೈಪೋಟಿ ನಡೆಸಿವೆ. ಆದರೆ ಹೆದ್ದಾರಿ ನಿರ್ಮಾಣಕ್ಕೆ ಆರಂಭಿಕ ಅನುಮೋದನೆ ಚಾಲನೆ ಕೊಟ್ಟಿದೆೆ್ದ ಎಚ್.ಡಿ.ರೇವಣ್ಣ, ದೇವೇಗೌಡರು ಕುಮಾರಸ್ವಾಮಿ. ನಾನು ಎರಡು ರಾಷ್ಟ್ರೀಯ ಪಕ್ಷಗಳಿಗೆ ಸವಾಲು ಹಾಕುತ್ತೇನೆ. ಬರಲಿರುವ ಚುನಾವಣೆಯಲ್ಲಿ ಮೂರು ಪಕ್ಷಗಳು ಎಲ್ಲಿಯೂ ಮತ ಪ್ರಚಾರ ಮಾಡುವುದು ಬೇಡ. ಪ್ರತೀ ಜಿಲ್ಲಾ ಮಟ್ಟದಲ್ಲಿ ಒಂದು ವೇದಿಕೆ ನಿರ್ಮಿಸಿ ನಾವೇನು ಮಾಡಿದ್ದೇವೆ. ಅವರೇನು ಕೊಡುಗೆ ಕೊಟ್ಟಿದ್ದಾರೆಂಬುದನ್ನು ಬಹಿರಂಗವಾಗಿ ಹೇಳಲಿ ಎಂದು ಸವಾಲು ಹಾಕಿದರು.

ಬಸವ ಸಂಸ್ಕೃತಿಗೆ ಅಪಮಾನ:

     ಬಿಜೆಪಿ ಸಮಾಜದ ಶಾಂತಿ ಸಾಮರಸ್ಯ ಹಾಳು ಮಾಡಿ ದ್ವೇಷ ಭಾವನೆ ಹೆಚ್ಚಿಸಿದ್ದು, ಬಸವ ಸಂಸ್ಕೃತಿ, ಅಂಬೇಡ್ಕರ್ ಸಂವಿಧಾನಕ್ಕೆ ಅಪಮಾನಿಸಲಾಗುತ್ತಿದೆ. ಕಾಂಗ್ರೆಸ್ ಪ್ರತೀ ಮನೆ ಯಜಮಾನಿಗೆ 2000 ರೂ. ಗ್ಯಾರಂಟಿ ಹಣ ಕೊಡುತ್ತೇನೆನ್ನುವ ಮೂಲಕ ಮನೆಯಲ್ಲಿ ಅತ್ತೆ ಸೊಸೆ, ಅತ್ತಿಗೆ ನಾದಿನಿ ಮಧ್ಯೆ ಕಲಹಕ್ಕೆ ನಾಂದಿ ಹಾಡಲು ಮುಂದಾಗಿದೆ ಎಂದು ಲೇವಡಿ ಮಾಡಿದ ಸಿಎಂ ಇಬ್ರಾಹಿಂ ಅವರು ಜೆಡಿಎಸ್ ಪಂಚರತ್ನ ಕಾರ್ಯಕ್ರಮಗಳು ರೈತರು, ವಿದವೆಯರು, ಹಿರಿಯ ನಾಗರಿಕರು, ಕಾರ್ಮಿಕರು ಹೀಗೆ ಬಡವರು ಜನಸಾಮಾನ್ಯರಿಗೆ ಸಹಾಯ ಮಾಡುವ ಕಾರ್ಯಕ್ರಮಗಳಾಗಿವೆ. 25 ಸಾವಿರ ಕೋಟಿ ರೈತರ ಸಾಲ ಮನ್ನಾ ಮಾಡಿದ್ದು ಕುಮಾರಸ್ವಾಮಿಯವರು. ಅಲ್ಪಸಂಖ್ಯಾತರು, ಹಿಂದುಳಿದವರು, ದಲಿತರಿಗೆ ರಾಜಕೀಯ ಮೀಸಲು ಕೊಟ್ಟಿದ್ದು, ದೇವೇಗೌಡರು ಎಂದು ದೂರಿದರು.

ರೂಪ್ಸಾದಿಂದ ಗೌರವ:

      ಖಾಸಗಿ ಶಾಲೆಗಳ ಆಡಳಿತ ಮಂಡಳಿ ಒಕ್ಕೂಟದ ರಾಜ್ಯಾಧ್ಯಕ್ಷ ಹಾಗೂ ಜೆಡಿಎಸ್ ರಾಜ್ಯ ವಕ್ತಾರ ಡಾ. ಹಾಲನೂರು ಲೇಪಾಕ್ಷ್ ಅವರ ನೇತೃತ್ವದಲ್ಲಿ ಪಾಯಸ್, ನಯಾಜ್ ಅಹಮದ್ ಶಿವಕುಮಾರ್ ಮತ್ತಿತರರು ಜೆಡಿಎಸ್ ರಾಜ್ಯಾಧ್ಯಕ್ಷ ಸಿ.ಎಂ.ಇಬ್ರಾಹಿಂ ಅವರನ್ನು ಅಭಿನಂದಿಸಿ ಪಂಚರತ್ನ ಕಾರ್ಯಕ್ರಮಗಳಿಗೆ ಮೆಚ್ಚುಗೆ ವ್ಯಕ್ತಪಡಿಸಿದರು. ಸುದ್ದಿಗೋಷ್ಠಿಯಲ್ಲಿ ಜೆಡಿಎಸ್ ಜಿಲ್ಲಾಧ್ಯಕ್ಷ ಆರ್.ಸಿ.ಆಂಜಿನಪ್ಪ, ಉಪಮೇಯರ್ ಟಿ.ಕೆ.ನರಸಿಂಹಮೂರ್ತಿ, ಕೃಷ್ಣಮೂರ್ತಿ, ಆದಿಲ್ ಖಾನ್, ನವೀದ್, ವಕ್ತಾರ ಮಧು ಮತ್ತಿತರರು ಹಾಜರಿದ್ದರು.

ಮಾಧುಸ್ವಾಮಿ ಆತ್ಮಸಾಕ್ಷಿ ಮುಟ್ಟಿ ಸತ್ಯಹೇಳಲಿ:

     ಮಾಧುಸ್ವಾಮಿ ಅವರು ಹಿಂದೆ ಹೇಗಿದ್ದರೂ ಈಗ ಆ ರೀತಿಯಿಲ್ಲ. ಬೇನಾಮಿ ಆಸ್ತಿ ಕುರಿತಂತೆ ಸಿ.ಬಿ.ಸುರೇಶ್‌ಬಾಬು ಅವರ ಆರೋಪದ ಬಗ್ಗೆ ಜೆಸಿಎಂ ಅವರೇ ಆತ್ಮಸಾಕ್ಷಿಮಟ್ಟಿ ಸತ್ಯ ಹೇಳಲಿ ಎಂದು ಸಲಾವೆಲೆಸೆದ ಇಬ್ರಾಹಿಂ ಅವರು, ಗುಬ್ಬಿ ಶಾಸಕ ಎಸ್.ಆರ್.ಶ್ರೀನಿವಾಸ್ ಅವರು ಕೆಟ್ಟ ಕಾಲದಲ್ಲಿ ಪಕ್ಷದಿಂದ ದೂರ ಉಳಿದಿದ್ದಾರೆ. ಆಗಿದೆಲ್ಲ ಮರೆತು ಮತ್ತೆ ಒಳ್ಳೆಯ ಕಾಲ ಅಪೇಕ್ಷಿಸಿ ಪಕ್ಷಕ್ಕೆ ಬಂದರೆ ಅವರಿಗೆ ಪಕ್ಷದ ಬಾಗಿಲು ಸದಾ ತೆರೆದಿರುತ್ತದೆ ಎಂದು ಆಹ್ವಾನಿಸಿದರು.

ನಗರದಲ್ಲಿ ಗೊಂದಲವಿಲ್ಲ, ಎಲ್ಲಾ ಸಮುದಾಯ ಬೆಂಬಲ

      ತುಮಕೂರು ನಗರದಲ್ಲಿ ಜೆಡಿಎಸ್ ಟಿಕೆಟ್‌ನಲ್ಲಿ ಯಾವುದೇ ಗೊಂದಲವಿಲ್ಲ. ಅಟ್ಟಿಕಾ ಬಾಬು ಮೊದಲು ಜೆಡಿಎಸ್ ಅಭ್ಯರ್ಥಿಯೆಂದು ಹೇಳಿಕೊಂಡು ಈಗ ಕಾಂಗ್ರೆಸ್ ಟಿಕೆಟ್ ಪಡೆಯಲು ಓಡಾಡುತ್ತಿದ್ದಾರೆ. ಅವರು ಹಣವಂತರು. ನಮ್ಮ ಪಕ್ಷದ ಕೆಲವರನ್ನು ಸೆಳೆದಿರಬಹುದು. ಅಂತಹವರ ಬಗ್ಗೆ ಜಿಲ್ಲಾ ನಾಯಕರು ಕ್ರಮವಹಿಸುತ್ತಾರೆ. ನಮ್ಮ ಅಭ್ಯರ್ಥಿ ಗೋವಿಂದರಾಜು ಅವರಿಗೆ ಅಲ್ಪಸಂಖ್ಯಾತರು ಸೇರಿ ಎಲ್ಲಾ ಜಾತಿಯವರು ಈ ಬಾರಿ ಮತ ಹಾಕಿ ಗೆಲ್ಲಿಸಲಿದ್ದಾರೆ. ಹಿಂದೆ ಕೋಲಾರದಲ್ಲಿ ಮುಸ್ಲಿಂರು ಅಧಿಕವಾಗಿದ್ದರೂ ಶ್ರೀನಿವಾಸಗೌಡ ಅವರಿಗೂ ಮುಸ್ಲೀಂರು ಮತ ಕೊಟ್ಟು ಗೆಲ್ಲಿಸಿಲ್ಲವೆ ಎಂದು ಇಬ್ರಾಹಿಂ ಪ್ರಶ್ನಿಸಿದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap