ಹುಬ್ಬಳ್ಳಿ ಗಲಭೆ : ಪತ್ರ ಬರೆದರೆ ತಪ್ಪೇನು : ಡಾ.ಜಿ.ಪರಮೇಶ್ವರ್‌

ಬೆಂಗಳೂರು: 

    ಹಳೆ ಹುಬ್ಬಳ್ಳಿ ಗಲಭೆ ಪ್ರಕರಣ ವಾಪಸ್​ಗೆ ಡಿಸಿಎಂ ಡಿಕೆ ಶಿವಕುಮಾರ್ ಪತ್ರ ಬರೆದಿದ್ದರೆ ಅದರಲ್ಲಿ ತಪ್ಪೇನು ಇಲ್ಲ, ಒಳ್ಳೆಯದೆ ಎಂದು ಗೃಹ ಸಚಿವ ಡಾ ಜಿ ಪರಮೇಶ್ವರ್ ಇಂದು ಬುಧವಾರ ಬೆಂಗಳೂರಿನಲ್ಲಿ ಮಾಧ್ಯಮ ಪ್ರತಿನಿಧಿಗಳ ಮುಂದೆ ಹೇಳಿದ್ದಾರೆ.

    ಸಚಿವರು, ಶಾಸಕರಿಗೆ ಮನವಿ ಸಲ್ಲಿಸಿದರೆ ನಮಗೆ ಕಳುಹಿಸಿಕೊಡುತ್ತಾರೆ. ಆ ಮನವಿ ನನಗೆ ಬರುತ್ತದೆ, ಇಲ್ಲದಿದ್ದರೆ ಇಲಾಖೆ ಡಿಜಿಗೆ ಕಳುಹಿಸುತ್ತಾರೆ. ಆಗ ನಾವು ಸಂಪುಟ ಉಪ ಸಮಿತಿ ಮುಂದೆ ಚರ್ಚೆ ಮಾಡುತ್ತೇವೆ. ಏನೇನು ಸೆಕ್ಷನ್ ಹಾಕಿರುತ್ತಾರೆ ಎಲ್ಲವನ್ನೂ ಪರಿಶೀಲನೆ ಮಾಡುತ್ತೇವೆ. ಅಂತಿಮವಾಗಿ ಕೇಸ್ ಹಿಂಪಡೆಯುವ ಬಗ್ಗೆ ಸಂಪುಟದಲ್ಲಿಯೇ ತೀರ್ಮಾನ ಮಾಡಲಾಗುತ್ತದೆ. ಪತ್ರ ಬರೆದರು ಎಂದು ಬೊಬ್ಬೆ ಹೊಡೆದರೆ ನಾವು ಏನು‌ ಮಾಡಬೇಕು. ನಾನು ಇನ್ನೂ ಪತ್ರ ನೋಡಿಲ್ಲ, ಒಂದು ವೇಳೆ ಪತ್ರ ಬರೆದರೂ ತಪ್ಪಿಲ್ಲ ಎಂದರು.

    ಬಿಹಾರ ಸರ್ಕಾರ ಬಿಹಾರದಲ್ಲಿ ಜಾತಿ ಗಣತಿ ವರದಿ ಪ್ರಕಟಿಸಿದ ಬೆನ್ನಲ್ಲೇ ಕರ್ನಾಟಕ ರಾಜ್ಯದಲ್ಲೂ ಜಾತಿಗಣತಿ ವರದಿ ಬಿಡುಗಡೆಗೆ ಒತ್ತಾಯ ಕೇಳಿ ಬಂದಿದೆ. ಈ ಕುರಿತು ಕೇಳಿದಾಗ, ಸರ್ಕಾರಕ್ಕೆ ಜಾತಿ ಗಣತಿ ವರದಿ ಸಲ್ಲಿಸಿದ ಬಳಿಕ ಚರ್ಚೆ ಮಾಡೋಣ ಶೀಘ್ರವೇ ಸರ್ಕಾರಕ್ಕೆ ವರದಿ ಸಲ್ಲಿಸುವುದಾಗಿ ಜಯಪ್ರಕಾಶ್ ಹೆಗ್ಡೆ ಹೇಳಿದ್ದಾರೆ.  ಜಾತಿ ಗಣತಿ ನಡೆಸಲು ಅಂದಾಜು 100 ಕೋಟಿ ರೂಪಾಯಿಗೂ ಹೆಚ್ಚು ಖರ್ಚಾಗಿದೆ. ಇಷ್ಟು ಹಣ ಖರ್ಚು ಮಾಡಿ  ವರದಿ ಬಿಡುಗಡೆ ಮಾಡದಿದ್ದರೇ ವ್ಯರ್ಥ ಆಗುವುದಿಲ್ಲವೇ, ಜಾತಿಗಣತಿ ಬಿಡುಗಡೆಯಾದರೆ ಒಳ್ಳೆಯದು  ರಾಜ್ಯದಲ್ಲಿ ಮೀಸಲಾತಿ ಕೂಗು ಕೇಳಿಬಂದಿದೆ. ಸರ್ಕಾರ ದುಂದುವೆಚ್ಚಕ್ಕಾಗಿ ಜಾತಿ ಗಣತಿ ಮಾಡಿಲ್ಲ ಎಂದು ಹೇಳಿದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap