ಕೋಲ್ಕತ್ತಾ:
ನಾವೆಲ್ಲರೂ ಸಿನಿಮಾ ಮಾಡುವುದು ಮನೋರಂಜನರಗಾಗಿ ಬಾಯ್ಕಾಟ್ ಮಾಡಲು ಅಲ್ಲ ಎಂದು ನಟ ರಣಬೀರ್ ಕಪೂರ್ ಅವರ ಮುಂಬರುವ ಚಿತ್ರ ‘ತು ಜೂಥಿ ಮೈನ್ ಮಕ್ಕರ್’ ಪತ್ರಿಕಾಘೋಷ್ಠಿಯಲ್ಲಿ ತಿಳಿಸಿದ್ದಾರೆ.
ಸಾಮಾಜಿಕ ಮಾಧ್ಯಮದಲ್ಲಿನ ಬಾಲಿವುಡ್ ಬಾಯ್ಕಾಟ್ ಮಾಡುವುದರಲ್ಲಿ ಅರ್ಥವಿಲ್ಲ ಎಂದು ರಣಬೀರ್ ತಳ್ಳಿಹಾಕಿದ್ದಾರೆ.
”ಬಾಲಿವುಡ್ ಬಹಿಷ್ಕರಿಸುವ ಯಾವುದೇ ರೀತಿಯ ಕರೆಗಳಿಗೆ ನೀವು ಕಿವಿಗೊಡಬೇಡಿ , ಅದು ಆಧಾರರಹಿತ ಮತ್ತು ಪ್ರಚಾರಗಿಟ್ಟಿಸುವ ಒಂದು ಕೆಟ್ಟ ಕಲೆಯಷ್ಟೆ ಎಂದು ನಾನು ಭಾವಿಸುತ್ತೇನೆ. ಸಾಂಕ್ರಾಮಿಕ ರೋಗದ ನಂತರ ಅನೇಕ ನಕಾರಾತ್ಮಕ ವಿಷಯಗಳು ಬರುತ್ತಿವೆ.
ಚಲನಚಿತ್ರಗಳನ್ನು ಮನರಂಜನಾ ಉದ್ದೇಶಕ್ಕಾಗಿ ನಿರ್ಮಿಸಲಾಗಿದೆ, ನಾವು ಜಗತ್ತನ್ನು ಉಳಿಸುತ್ತಿಲ್ಲ. ಹೀಗಾಗಿ ಪ್ರೇಕ್ಷಕರು ಚಿಂತೆ ಮರೆಯಲು ಚಿತ್ರಮಂದಿರಗಳಿಗೆ ಬರುತ್ತಾರೆ. ಅವರು ದೊಡ್ಡ ಪರದೆಯ ಮೇಲೆ ಚಲನಚಿತ್ರಗಳನ್ನು ವೀಕ್ಷಿಸಲು, ಒಳ್ಳೆಯ ಸಮಯವನ್ನು ಕಳೆಯಲು ಬರುತ್ತಾರೆ. ಬಾಯ್ಕಾಟ್ ವಿಷಯ ನನಗೆ ತಿಳಿದಿಲ್ಲ’ ಎಂದು ಅವರು ಇಲ್ಲಿ ಸುದ್ದಿಗಾರರಿಗೆ ತಿಳಿಸಿದರು.ತೀರಾ ಇತ್ತೀಚೆಗೆ, ಶಾರುಖ್ ಖಾನ್ ಅವರ ‘ಪಠಾಣ್’ ಸಿನಿಮಾದಲ್ಲಿ ದೀಪಿಕಾ ಪಡುಕೋಣೆ ಧರಿಸಿರುವ ವೇಷಭೂಷಣಗಳ ಮೇಲೆ ಬಾಲಿವುಡ್ ಬಹಿಷ್ಕಾರದ ಕರೆಗಳನ್ನು ಎದುರಿಸಿತು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ