ಚುನಾವಣೆಯಿಂದ ಹಿಂದೆ ಸರಿಯುವ ಪ್ರಶ್ನೆ ಇಲ್ಲ: ಗೌರಿಶಂಕರ್

ತುಮಕೂರು:

    ಚುನಾವಣೆಗೆ ನಿಲ್ಲಬಾರದು ಎಂದು ನ್ಯಾಯಾಲಯ ಆದೇಶ ನೀಡಿಲ್ಲ ಮಾಜಿ ಶಾಸಕರ ಕುತಂತ್ರದಿಂದ ಈ ತೀರ್ಪು ಹೊರ ಬಂದಿದ್ದು ನಾನು ಚುನಾವಣೆ ಸ್ಪರ್ಧೆಯಿಂದ ಹಿಂದೆ ಸರಿಯುವ ಮಾತೇ ಇಲ್ಲ ನನ್ನೆಲ್ಲಾ ಕಾರ್ಯಕರ್ತರು ಎದೆಗುಂದದೆ ಚುನಾವಣಾ ಪ್ರಕ್ರಿಯೆಯಲ್ಲಿ ಕ್ಷೇತ್ರದ ಮನೆ ಮನೆಗೆ ಶಾಸಕರಾಗಿ ಮಾಡಿದ ಅಭಿವೃದ್ಧಿ ಕಾರ್ಯಗಳ ಬಗ್ಗೆ ಪ್ರಚಾರ ಮಾಡಬೇಕೆಂದು ಶಾಸಕ ಗೌರಿಶಂಕರ್ ತಿಳಿಸಿದರು.

   ಶನಿವಾರ ತಮ್ಮ ನಿವಾಸದಲ್ಲಿ ಸುದ್ದಿಗೋಷ್ಠಿ ನಡೆಸಿ ನಕಲಿ ಬಾಂಡ್ ವಿತರಣೆ ಆರೋಪದ ಆದೇಶಕ್ಕೆ ಸ್ಪಷ್ಟನೆನೀಡಿ,ತೀರ್ಪಿನಲ್ಲಿ ನಾನು ಚುನಾವಣೆಗೆ ನಿಲ್ಲಬಾರದು ಅಂತ ಹೇಳಿಲ್ಲ. 6 ವರ್ಷ ಚುನಾವಣೆಯಿಂದ ಅನರ್ಹಗೊಳಿಸಿಲ್ಲ,ಡಿ ಸಿ ಗೌರಿಶಂಕರ್ ಭಾಗಿಯಾಗಿದ್ದಾರೆ ಎಂದು ಕೋರ್ಟ್ ಹೇಳಿಲ್ಲ,ಬಾಂಡ್ ವಿತರಣೆಗೂ ಡಿ ಸಿ ಗೌರಿಶಂಕರ್ ಗೂ ಯಾವುದೇ ಸಂಬಂಧವಿಲ್ಲ,5 ಜನ ಅಕ್ರಮ ಮಾಡಿದ್ದಾರೆ ಎಂದು ಆರೋಪ ಮಾಡಲಾಗಿದೆ,ಈ ವಿಚಾರದಲ್ಲಿ ಕಾರ್ಯಕರ್ತರು ಆತಂಕಪಡುವ ಅಗತ್ಯವಿಲ್ಲ ಎಂದರು.

    30 ದಿನಗಳಲ್ಲಿ ಸುಪ್ರಿಂ ಕೋರ್ಟಿನ ಆದೇಶ ತಡೆಗೆ ಮೇಲ್ಮನವಿ ಸಲ್ಲಿಸಲು ಅವಕಾಶವಿದೆ. ನಾನುರಾಜಕಾರಣಿಯಾಗಿ ಕೆಲಸ ಮಾಡಿಲ್ಲ ಮನೆ ಮಗನಾಗಿ ಕೆಲಸ ಮಾಡಿದ್ದೇನೆ,ಮಾಜಿ ಶಾಸಕರಿಗೆ ಪರೋಕ್ಷವಾಗಿ ಧರ್ಮದ ಪಾಠ ಮಾಡಿದರು.

    ಮಾಜಿ ಶಾಸಕ 5 ವರ್ಷಗಳ ಕಾಲ ದೌರ್ಜನ್ಯ ದಬ್ಬಾಳಿಕೆ ಮಾಡಿದ್ದೀರೆಂದು ದೂರಿದ ಅವರುರಾಹುಲ್ ಗಾಂದಿಯನ್ನೆ ಬಿಟ್ಟಿಲ್ಲ ಗೌರಿಶಂಕರ್ ಬಿಡ್ತಾರ..?ಶಾಸಕ ಸ್ಥಾನ ಅಸಿಂದುವಾಗಿದೆ ವಿನಃ ಅನರ್ಹವಾಗಿಲ್ಲ..!ಎಂಬುದು ಗಮನಿಸಬೇಕು, ಮಾಜಿ ಶಾಸಕರು ಮೇಲೆ ಡೆಪೋರ್ಮೇ ಶನ್ ಕೇಸ್ ಕಾಕುತ್ತನೆ, ನನ್ನ ವಿರುದ್ಧ ಇಲ್ಲಸಲ್ಲದ ಆರೋಪ ಮಾಡಿದರೆ ಆದ್ದರಿಂದ ಈ ಕೇಸನ್ನು ಹಾಕುತ್ತೆನೆ ಎಂದರು.

   ಯಾವುದೇ ಕಾರಣಕ್ಕಾಗಿ ಚುನಾವಣಾಯಿಂದ ಹಿಂದೆಸರಿಯುವ ಪ್ರಶ್ನೆನೆ ಇಲ್ಲ,ದೇವೆಗೌಡರ ಕುಟುಂಬದವರು ಯಾರು ಜಿಲ್ಲೆಯ ರಾಜಕೀಯಕ್ಕೆ ಬರುವುದಿಲ್ಲ ಎಂದು ಸ್ಪಷ್ಟ ಪಡಿಸಿದರು, ಗ್ರಾಮಾಂತರದಲ್ಲಿ ಯಾವುದೇ ಅಭಿವೃದ್ಧಿ ಕೆಲಸ ಮಾಡಲು ಬೀಡದೆ, ಮುಖ್ಯ ಮಂತ್ರಿ ಗಳಿಂದ ತಡೆತಂದಿರಿ, ನಾನು ಶಾಸಕನಾದ ಮೇಲೆ ಯಾವತ್ತು ನೆಮ್ಮದಿಯಾಗಿ ಇದಲ್ಲು ಬಿಟ್ಟಿದ್ದರಿ, ನಿಮ್ಮದೆ ಸರಕಾರ ಇದೆಹೇಂದು ನಿಮ್ಮಗೆ ಬೇಕಾದ ಪೋಲಿಸ್ ಮತ್ತು ಅಧಿಕಾರಗಳನ್ನು ಹಾರಿಸಿಕೊಂಡು ಎಲ್ಲಾ ಕೆಲಸಗಳಿಗೆ ಅಡಿಪಡಿಸಿದ್ದರಿ ಎಂದು ಸುರೇಶ್ ಗೌಡ ವಿರುದ್ಧ ಹರಿಹಾಯ್ದರು.

Recent Articles

spot_img

Related Stories

Share via
Copy link
Powered by Social Snap