ನೀತಿ ಸಂಹಿತೆ : ಕಾಮಗಾರಿಗಳಿಗೆ ಯಾವುದೇ ರೀತಿ ತಡೆಯಲ್ಲ : ಬಿಬಿಎಂಪಿ

ಬೆಂಗಳೂರು:

     ಸದ್ಯ ರಾಜ್ಯದಲ್ಲಿ ಜಾರಿಯಾಗಿರುವ ನೀತಿ ಸಂಹಿತೆಯೂ ಬೆಂಗಳೂರಿನಲ್ಲಿ ಈಗಾಗಲೆ ಜಾರಿಯಲ್ಲಿರುವ ಕಾಮಗಾರಿಗಳಿಗೆ ತಡೆಯೊಡ್ಡಲಿದೆ ಎಂಬ ಮಾತುಗಳನ್ನು ಬಿಬಿಎಂಪಿ ಉನ್ನತಾಧಿಕಾರಿಗಳು ನಿರಾಕರಿಸಿದ್ದು, ಪ್ರಾಜೆಕ್ಟ್ ಮ್ಯಾನೇಜ್‌ಮೆಂಟ್ ಕನ್ಸಲ್ಟೆಂಟ್ (ಪಿಎಂಸಿ) ಎಂಬ ವ್ಯವಸ್ಥೆ ಅಡಿಯಲ್ಲಿ ಮಳೆನೀರು ಚರಂಡಿಗಳು, ಮೇಲ್ಸೇತುವೆಗಳು ಸೇರಿದಂತೆ 6,000 ಕೋಟಿ ರೂಪಾಯಿಗಳ ಕಾಮಗಾರಿಗಳನ್ನು ಕಾರ್ಯಗತಗೊಳಿಸಲಾಗುವುದು ಎಂದು ಹೇಳಿದ್ದಾರೆ.

    ನಗರೋತ್ಥಾನ ಅನುದಾನದಲ್ಲಿ 1500 ಕೋಟಿ ರೂ.ಗಳಲ್ಲಿ ಪಾಲಿಕೆ ರಸ್ತೆ ಡಾಂಬರೀಕರಣವನ್ನು ಆರಂಭಿಸಿದ್ದು, 477 ಕಿ.ಮೀ ರಸ್ತೆ ಕಾಮಗಾರಿ ಬಹುತೇಕ ಪೂರ್ಣಗೊಂಡಿದೆ ಎಂದು ತಿಳಿಸಿದ್ದಾರೆ.

ಕಳೆದ ಸೆಪ್ಟೆಂಬರ್‌ನಲ್ಲಿ ಉಂಟಾದ ಪ್ರವಾಹ ಪರಿಸ್ಥಿತಿ ಮರುಕಳಿಸದಂತೆ ತಡೆಯಲು ಮಳೆ ನೀರು ಚರಂಡಿ ದುರಸ್ತಿ ಕಾಮಗಾರಿಯನ್ನೂ ಕೈಗೆತ್ತಿಕೊಳ್ಳಲಾಗಿದೆ. ಅದೇ ರೀತಿ ಯಲಹಂಕದಲ್ಲಿ 170 ಕೋಟಿ ರೂ.ಗಳ ಎಲಿವೇಟೆಡ್ ಕಾರಿಡಾರ್ ಕಾಮಗಾರಿಯೂ ನಡೆಯುತ್ತಿದ್ದು, ಇದರ ಶೇ.40ರಷ್ಟು ಕಾಮಗಾರಿ ಮುಗಿದಿದೆ ಎಂದು ಮಾಹಿತಿ ನೀಡಿದ್ದಾರೆ.

     ಪ್ರಸ್ತುತ ಪ್ರಗತಿಯಲ್ಲಿರುವ ಯಾವುದೇ ಕಾಮಗಾರಿಯನ್ನು ಸ್ಥಗಿತಗೊಳಿಸುವಂತಿಲ್ಲ ಎಂದು ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ಅವರು ಸೂಚನೆ ನೀಡಿದ್ದಾರೆಂದು ಪ್ರಹ್ಲಾದ್ ಅವರು ಹೇಳಿದ್ದಾರೆ.

     ಚುನಾವಣಾ ನೀತಿ ಸಂಹಿತೆ ಜಾರಿಯಲ್ಲಿದೆ. ಆದರೆ, ಪ್ರಗತಿಯಲ್ಲಿರುವ ಕಾಮಾಗಾರಿಗಳಿಗೆ ಇದು ಅಡ್ಡಿಯುಂಟು ಮಾಡುವುದಿಲ್ಲ. ಹಿಂದಿನ ಚುನಾವಣೆಯಂತೆ ಈ ಬಾರಿ ಬಿಬಿಎಂಪಿ ಚುನಾವಣಾ ಕರ್ತವ್ಯಕ್ಕೆ ಇಂಜಿನಿಯರಿಂಗ್ ವಿಭಾಗದ ಹಲವು ಅಧಿಕಾರಿಗಳನ್ನು ಚುನಾವಣಾ ಕರ್ತವ್ಯಕ್ಕೆ ನಿಯೋಜನೆಗೊಳಿಸಿಲ್ಲ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ