ಬೆಂಗಳೂರು:
ರಾಜ್ಯದಲ್ಲಿ ವಿದ್ಯುತ್ ದರ ಹೆಚ್ಚಳ, ಮಳೆಯ ಅಭಾವದಿಂದ ಭತ್ತದ ಕೊರತೆಯ ಕಾರಣಕ್ಕೆ, ಜನತೆಗೆ ಅಕ್ಕಿ ದರದ ಶಾಕ್ ಅನ್ನು ನೀಡಲು ಕರ್ನಾಟಕ ರೈಸ್ ಮಿಲ್ಲರ್ಸ್ ಫೆಡರೇಶನ್ ಮುಂದಾಗಿವೆ.ಈ ಕುರಿತಂತೆ ಮಾಹಿತಿ ನೀಡಿರುವಂತ ಕರ್ನಾಟಕ ರೈಸ್ ಮಿಲ್ಲರ್ಸ್ ಫೆಡರೇಶನ್, ರಾಜ್ಯದಲ್ಲಿ ವಿದ್ಯುತ್ ದರ ಹೆಚ್ಚಳದಿಂದಾಗಿ, ರೈಸ್ ಮಿಲ್ ಗಳಿಗೆ ಭಾರಿ ಹೊಡೆತ ಬೀಳುತ್ತಿದೆ.
ಜೊತೆಗೆ ಮಳೆಯ ಅಭಾವದಿಂದ ಭತ್ತದ ಕೊರತೆ ಕೂಡ ಉಂಟಾಗಿದೆ ಎಂಬುದಾಗಿ ಹೇಳಿದೆ.ಸದ್ಯ ತೆರಿಗೆ, ಕಾರ್ಮಿಕರ ವೆಚ್ಚ, ವಿದ್ಯುತ್ ಬಿಲ್ ಕಾರಣದಿಂದಾಗಿ ರೂ.45ಕ್ಕೆ ಪ್ರತಿ ಕೆಜಿ ಅಕ್ಕಿ ಮಾರಾಟ ಮಾಡಲಾಗುತ್ತಿದೆ. ಈಗ ವಿದ್ಯುತ್ ಬಿಲ್ ಹೆಚ್ಚಳದ ಕಾರಣದಿಂದಾಗಿ ಅಕ್ಕಿ ಬೆಲೆಯನ್ನು ರೂ.5 ರಿಂದ 10 ಹೆಚ್ಚಳ ಮಾಡುವುದು ಚಿಂತನೆ ನಡೆಸಲಾಗಿದೆ ಎಂಬುದಾಗಿ ತಿಳಿದು ಬಂದಿದೆ.
ಈಗಾಗಲೇ ಅಗತ್ಯ ವಸ್ತುಗಳ ಬೆಲೆ ಹೆಚ್ಚಳದ ಕಾರಣದಿಂದಾಗಿ ರಾಜ್ಯದ ಜನತೆ ತತ್ತರಿಸಿ ಹೋಗಿದ್ದಾರೆ. ವಿದ್ಯುತ್ ದರದ ಬೆನ್ನಲ್ಲೇ ನಂದಿನಿ ಹಾಲಿನ ದರ ಕೂಡ ಹೆಚ್ಚಳ ಸಾಧ್ಯತೆಯನ್ನು ಇಂದು ಕೆಎಂಎಫ್ ನೂತನ ಅಧ್ಯಕ್ಷರು ಸುಳಿವು ನೀಡಿದ್ದಾರೆ. ಈ ನಡುವೆ ಪ್ರತಿ ಕೆಜಿ ಅಕ್ಕಿಗೆ ರೂ.5ರಿದಂ 10 ಹೆಚ್ಚಳವನ್ನು ಮಾಡಲು ರೈಸ್ ಮಿಲ್ಲರ್ಸ್ ಫೆಡರೇಶನ್ ಮುಂದಾಗಿರುವುದು ಮತ್ತೊಂದು ಶಾಕಿಂಗ್ ನ್ಯೂಸ್ ಆಗಿದೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ