ಕ್ಷೇತ್ರದಲ್ಲಿ ಅಘೋಷಿತ ತುರ್ತು ಪರಿಸ್ಥಿತಿ ಇದೆ :ಕೆ.ಪಿ.ಬಚ್ಚೇಗೌಡ

ನಮ್ಮ ಕ್ಷೇತ್ರದಲ್ಲಿಂದು ಅಘೋಷಿತ ತುರ್ತು ಪರಿಸ್ಥಿತಿ ಇದೆ

ಚಿಕ್ಕಬಳ್ಳಾಪುರ

    ನಮ್ಮ ಕ್ಷೇತ್ರದಲ್ಲಿಂದು ಅಘೋಷಿತ ತುರ್ತು ಪರಿಸ್ಥಿತಿ ಇದೆ.  ಹೀಗೆ ನಿರ್ಭೀತಿಯಿಂದ ಚುನಾವಣಾ ಪ್ರಕ್ರಿಯೆಯಲ್ಲಿ ತೊಡಗಿಸಿಕೊಳ್ಳಲು ಅಡ್ಡಿಪಡಿಸುತ್ತಿದ್ದಾರೆ ಎಂದು ಜೆಡಿಎಸ್ ಅಭ್ಯರ್ಥಿ ಹಾಗೂ ಮಾಜಿ ಶಾಸಕ ಕೆ.ಪಿ.ಬಚ್ಚೇಗೌಡ ಆರೋಪಿಸಿದರು. ಹಾಗೆಯೇ ಅದು ಭಾರತಿಯ ಜನತಾ ಪಾರ್ಟಿಯಲ್ಲ, ಭ್ರಷ್ಟಾಚಾರದ ಜನತಾ ಪಾರ್ಟಿಯಾಗಿದೆ ಎಂದು ಆಕ್ರೋಶ ಹೊರಹಾಕಿದರು.

    ಚಿಕ್ಕಬಳ್ಳಾಪುರ ತಾಲೂಕಿನ ಮಂಡಿಕಲ್ ಹೋಬಳಿ ಮಂಡಿಕಲ್ ಗ್ರಾಮ ಪಂಚಾಯಿತಿಯಲ್ಲಿ ಹಮ್ಮಿಕೊಂಡಿದ್ದ ಮನೆ ಮನೆ ಭೇಟಿ ಕಾರ್ಯಕ್ರಮದ ಪ್ರಯುಕ್ತ ನಡೆದ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿದರು. ಮತದಾರರನ್ನು ಭಯಪಡಿಸಲು ನೀವು ಏನೇ ಮಾಡಿದರೂ ಮತ ಕೇಂದ್ರದಲ್ಲಿ ಈ ಬಾರಿ ಜನರು ತಕ್ಕ ಶಾಸ್ತಿ ಮಾಡಲಿದ್ದಾರೆ ಎಂದು ಎಚ್ಚರಿಸಿದರು.

    ಜಿಲ್ಲಾಡಳಿತ ಸೇರಿದಂತೆ, ಇತರೆ ಸರ್ಕಾರಿ ಇಲಾಖೆಗಳ ಅಧಿಕಾರಿಗಳು ಸಚಿವರ ಕೈ ಗೊಂಬೆಯಾಗಿ ಕೆಲಸ ಮಾಡುತ್ತಿದ್ದಾರೆ. ಡಾ. ಕೆ.ಸುಧಾಕರ್ ಮಾಡುವ ಕಾರ್ಯಕ್ರಮಗಳಿಗೆ ಜನರನ್ನು ಸೇರಿಸಿಲ್ಲವೆಂದು, ನಂದಿ ಗ್ರಾ.ಪಂಚಾಯತಿಯಲ್ಲಿ‌ ಬೇರೆ ಪಕ್ಷದವರು ಪ್ಲೇಕ್ಸ್ ಹಾಕಿದ್ದರು. ಅದಕ್ಕೆ ಪಿಡಿಒಗಳನ್ನು ಅಮಾನತ್ತು ಮಾಡಿ ಹಿಟ್ಲರ್‌ನಂತೆ ಕೌರ್ಯ ಮೆರೆಯುವ ಮೂಲಕ ದರ್ಪ ತೋರುತ್ತಿದ್ದಾರೆ. ಹಾಗೆಯೇ ಸರ್ಕಾರಿ ಇಲಾಖೆಗಳ ಅಧಿಕಾರಿಗಳು ಜೀತದಾಳುಗಳಾಗಿ ಕೆಲಸ ಮಾಡುತ್ತಿದ್ದಾರೆ ಎಂದರು.

     ಮಂಡಿಕಲ್ ವ್ಯಾಪ್ತಿಯ ಅನೇಕ ಗ್ರಾಮಗಳಿಗೆ ಭೇಟಿ ನೀಡಿದರೆ ಸಚಿವರ ಅಭಿವೃದ್ಧಿ ಬಟಾ ಬಯಲಾಗುತ್ತದೆ. ಇದಕ್ಕೆ ತಾಜಾ ಉದಾಹರಣೆ ಅಡ್ಡಗಲ್, ಬೋಗಪರ್ತಿ, ಬಚ್ಚೇನಹಳ್ಳಿ, ರಾಮಗಾನಪರ್ತಿಗೆ ಸೂಕ್ತ ರಸ್ತೆಯಿಲ್ಲ. ಕುಡಿಯಲು ಕೆರೆ ನೀರನ್ನು ಸರಬರಾಜು ಮಾಡಲಾಗುತ್ತದೆ. ಇದೇನಾ ಸಿಂಗಾಪುರ ಮಾದರಿಯ ಅಭಿವೃದ್ಧಿ ಎಂದು ಪ್ರಶ್ನಿಸಿದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link