ನೀರು ಇಲ್ಲ, ರೂಲರ್ ಕಾಣಲಿಲ್ಲ, ಮುಖ್ಯರಸ್ತೆ ಗುಂಡಿಗೆ ಬಿತ್ತು ಚಟ್ಟು ಮಣ್ಣು…!

ಹೊಸದುರ್ಗ :

ಹೊಸದುರ್ಗ ಪಿಡಬ್ಲ್ಯೂಡಿ ಇಲಾಖೆ ಘಾನಂದಾರಿ ಕೆಲ್ಸಕ್ಕೆ ಹೊಸದುರ್ಗ ಜನ ಬೇಸರ

ಹೊಸದುರ್ಗ ಪಟ್ಟಣದ ಮುಖ್ಯರಸ್ತೆಯಲ್ಲಿ ಬೃಹತ್ ಗುಂಡಿಗಳು ಬಿದ್ದು ವಾಹನ ಸವಾರರಿಗೆ ಸವಾಲೊಡ್ಡಿದ್ದ ಬಗ್ಗೆ ಪ್ರಜಾಪ್ರಗತಿ ಪತ್ರಿಕೆಯಲ್ಲಿ ಪ್ರಕಟಗೊಂಡ ವರದಿಯಿಂದ ತಾಲ್ಲೂಕಿನ ಲೋಕೋಪಯೋಗಿ ಇಲಾಖೆ ಗುಂಡಿಗಳಿಗೆ ಚಟ್ಟು ಮಣ್ಣು ಸುರಿಯುವ ಮೂಲಕ ಕೈ ತೊಳೆದುಕೊಳ್ಳುವ ಕೆಲಸಕ್ಕೆ ಮುಂದಾಗಿರುವುದು ಚರ್ಚೆಗೆ ಗ್ರಾಸವಾಗಿದೆ.

ಹೌದು, ಪಟ್ಟಣದ ರಸ್ತೆ ನೋಡಲು ಉತ್ತಮ ರಸ್ತೆಯಂತೆ ಕಂಡರೂ ಅಲ್ಲಲ್ಲಿ ಬೃಹತ್ ಗುಂಡಿಗಳು ನಿರ್ಮಾಣವಾಗಿ ಸುಗಮ ಸಂಚಾರಕ್ಕೆ ತೊಂದರೆಯಾಗಿ ರಸ್ತೆಯಲ್ಲಿನ ಗುಂಡಿಗಳನ್ನು ತಪ್ಪಿಸಲು ಹೋಗುವ ಚಾಲಕರು ಎದುರಿಗೆ ಬರುವ ವಾಹನಗಳಿಗೆ ಡಿಕ್ಕಿ ಹೊಡೆದು ಅನಾಹುತಗಳು ಘಟಿಸುತ್ತಿದ್ದವು. ಅಂಥ ಗುಂಡಿಗಳಿಗೆ ಶಾಶ್ವತವಾದ ಪರಿಹಾರ ಕಲ್ಪಿಸುವ ಬದಲು ಒಂದು ಟ್ರ್ಯಾಕ್ಟರ್‍ನಲ್ಲಿ ಚಟ್ಟು ಮಣ್ಣು ತುಂಬಿಕೊಂಡು ನಾಲ್ಕಾರು ಜನ ಕಾರ್ಮಿಕರಿಂದ ಮಣ್ಣು ಸುರಿಯುತ್ತಿರುವುದು ಇಲಾಖೆಯ ಕಾರ್ಯ ವೈಖರಿಗೆ ಹಿಡಿದ ಕೈಗನ್ನಡಿಯಾಗಿದೆ.

ಗುಂಡಿಗೆ ಚಟ್ಟು ಮಣ್ಣು :

ಪಟ್ಟಣದ ಹಿರಿಯೂರು ರಸ್ತೆಯಲ್ಲಿ ಮೊಣಕಾಲುದ್ದ ಬೃಹತ್ ಗುಂಡಿಗಳಿವೆ. ಅವುಗಳನ್ನು ಮುಚ್ಚಲು ಅಲ್ಲಲ್ಲಿ ಚಟ್ಟು ಮಣ್ಣು ಹಾಕಿದ್ದಾರೆ. ಆದರೆ ಇನ್ನುಳಿದ ಹೆಚ್.ಪಿ ಪೆಟ್ರೋಲ್ ಬಂಕ್ ಬಳಿ ಯಾವುದೇ ಗುಂಡಿ ಮುಚ್ಚದೇ ಹಾಗೆ ಬಿಟ್ಟಿದ್ದಾರೆ. ಮಣ್ಣು ಸುರಿದ ತಕ್ಷ ಣವೇ ಎರ್ರಾ ಬಿರ್ರೀ ಓಡಾಡುವ ವಾಹನಗಳಿಂದ ಗುಂಡಿಯಲ್ಲಿನ ಮಣ್ಣು ಕಿತ್ತು ಹೊರ ಬರುತ್ತಿದೆ. ಇದರಿಂದ ಗುಂಡಿಗಳಿಗೆ ಆಗುವ ಪ್ರಯೋಜನವಾದರೂ ಏನು ಎಂಬ ಪ್ರಶ್ನೆ ಪ್ರಜ್ಞಾವಂತರನ್ನು ಕಾಡಲಾರಂಭಿಸಿದೆ.

ನೀರು ಇಲ್ಲ, ರೂಲರ್ ಕಾಣಲಿಲ್ಲ :

ಈಗಾಗಲೇ ಗುಂಡಿಗಳಿಗೆ ಚಟ್ಟು ಮಣ್ಣು ಸುರಿಯುವ ಕೆಲಸ ಮಾಡಿದ್ದು, ಮಣ್ಣಿಗೆ ಹನಿ ನೀರು ಸುರಿದಿಲ್ಲ. ಹಾಕಿದ ಮಣ್ಣು ಬಿಗಿಯಾಗಲು ರೂಲರ್ ಮಾಡಿಲ್ಲ. ಕೇವಲ ನಾಮಕಾವಸ್ತೆ ಮಣ್ಣು ಹಾಕುತ್ತಾ ಸಾಗಿದರೆ, ಇದೆಷ್ಟು ದಿನ ಗುಂಡಿ ಮುಚ್ಚಿತು. ಮಣ್ಣು ಸುರಿದ ಪರಿಣಾಮ ರಸ್ತೆ ಧೂಳುಮಯವಾಗಿದೆ. ದ್ವ್ವಿಚಕ್ರ ವಾಹನ ಸವಾರರು, ದೊಡ್ಡ ವಾಹನಗಳ ಧೂಳಿನಿಂದಾಗಿ ಸಂಕಷ್ಟ ಎದುರಿಸುವಂತಾಗಿದೆ. ಹಾಳಾದ ರಸ್ತೆಯ ದುರಸ್ತಿಗಾಗಿ ಲೋಕೋಪಯೋಗಿ ಇಲಾಖೆ ಚಟ್ಟು ಮಣ್ಣು ಹಾಕಿ ತಗ್ಗುಗಳನ್ನು ಮುಚ್ಚುವ ಪ್ರಯತ್ನಕ್ಕೆ ಮುಂದಾಗಿದೆ.

ಒಟ್ಟಾರೆ ಸಾರ್ವಜನಿಕರು ಬೀದಿಗಿಳಿಯುವ ಮುನ್ನ ಸಂಬಂಧಪಟ್ಟ ಅಧಿಕಾರಿಗಳು, ಜನಪ್ರತಿನಿಧಿಗಳು ಗಮನಹರಿಸಿ ರಸ್ತೆಯ ಗುಂಡಿಗೆ ಹಾಕುತ್ತಿರುವ ಮಣ್ಣಿನ ಬದಲಾಗಿ ಜಲ್ಲಿಕಲ್ಲು, ಡಾಂಬರ್ ಬಳಸುವ ಮೂಲಕ ನಾಲ್ಕಾರು ತಿಂಗಳಾದರೂ ಬರುವಂತಹ ವೈಜ್ಞಾನಿಕವಾಗಿ ರಸ್ತೆ ದುರಸ್ತಿ ಮಾಡಿಸಬೇಕು ಎಂಬುದು ನಾಗರೀಕರ ಒತ್ತಾಯವಾಗಿದೆ.

 

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

 

 

Recent Articles

spot_img

Related Stories

Share via
Copy link