ಶಾಸಕರನ್ನ ಖರೀದಿ ವಸ್ತುಗಳನ್ನಾಗಿ ಮಾಡ್ತಾ ಇದ್ದಾರೆ- ಎಚ್ ಕೆ ಪಿ

ಹುಬ್ಬಳ್ಳಿ:

   ಕರ್ನಾಟಕದಲ್ಲಿ ಸರ್ಕಾರವನ್ನು ಅಭದ್ರಗೊಳಿಸಿ, ಅಭಿವೃದ್ಧಿ ಕೆಲಸಗಳಿಗೆ ಕೊಡಲಿ ಪೆಟ್ಟು ಹಾಕಬೇಕು ಅನ್ನೋದಾ ಕುಮಾರಸ್ವಾಮಿ ಅವರ ಉದ್ದೇಶ ಎಂದು ಕಾನೂನು ಹಾಗೂ ಪ್ರವಾಸೋದ್ಯಮ ಸಚಿವ ಎಚ್ .ಕೆ. ಪಾಟೀಲ್ ಕಿಡಿ ಕಾರಿದರು.

    ನಗರದಲ್ಲಿ ಸೋಮವಾರ ಸುದ್ದಿಗಾರರ ಜೊತೆಗೆ ಅವರು ಮಾತನಾಡಿದರು, ಶಾಸಕರನ್ನ ಖರೀದಿ ವಸ್ತುಗಳನ್ನಾಗಿ ಮಾಡುವ ವಾತಾವರಣ ಸೃಷ್ಟಿ ಮಾಡ್ತಾ ಇದ್ದಾರೆ ಲೋಕಸಭಾ ಚುನಾವಣೆ ಚುನಾವಣೆ ನಂತರ ಕಾದು ನೋಡಿ ಎಂದು ‌ಮಾಜಿ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ಅವರ ಹೇಳಿಕೆಗೆ ಪ್ರತಿಕ್ರಿಯೆ ನೀಡಿದ ಅವರು ಸರ್ಕಾರವನ್ನು ಅಭದ್ರಗೊಳಿಸುವಂತ ಮಾತುಗಳು ಯಾವ ಪುರುಷಾರ್ಥಕ್ಕೆ, ಉದ್ದೇಶ ಏನು? ಕರ್ನಾಟಕದಲ್ಲಿ ಸರ್ಕಾರವನ್ನು ಅಭದ್ರಗೊಳಿಸಿ, ಅಭಿವೃದ್ಧಿ ಕೆಲಸಗಳಿಗೆ ಕೊಡಲಿ ಪೆಟ್ಟು ಹಾಕಬೇಕು ಅನ್ನೋದಾ ಇದಿಯಾ ಸರ್ಕಾರಗಳನ್ನ ಅಭದ್ರಗೊ ಳಿಸುವುದು ಒಂದು ರೀತಿ ಷಡ್ಯಂತ್ರ ಜನರಿಗೆ ಕೆಲಸ ಆಗಬೇಕು, ಅಭಿವೃದ್ಧಿ ಕಡೆ ಗಮನ ಹರಿಸಬೇಕು ಅದನ್ನು ಬಿಟ್ಟು ಮಾಧ್ಯಮಗಳ ಮೂಲಕ ಜನರ ಮನಸ್ಸನ್ನು ಅಭದ್ರಗೊಳಿಸುವ ಪ್ರಯತ್ನ ಯಶಸ್ವಿ ಆಗೋದಿಲ್ಲ ಇದು ಸರಿಯಲ್ಲ ಜನರಿಗೆ ಎಲ್ಲವೂ ತಿಳಿಯೋಕೆ ಪ್ರಾರಂಭವಾಗಿದ್ದು ಎಂಎಲ್ಎ ಗಳನ್ನು ಖರೀದಿ ವಸ್ತುಗಳನ್ನಾಗಿ ಮಾಡುವ ವಾತಾವರಣ ಸೃಷ್ಟಿ ಮಾಡ್ತಾ ಇದ್ದಾರೆ

    ಆ ವಾತಾವರಣಕ್ಕೆ ಯಾರು ಬಲಿ ಆಗೋದಿಲ್ಲ ಎಂದ ಅವರು ಈ ಹಿಂದೆ 17 ಜನರನ್ನು ಮುಂಬೈ, ಗೋವಾಕ್ಕೆ ಕರೆದೋಯ್ದು ಖರೀದಿ ಮಾಡಿದ್ರು ಭಾರತೀಯ ಜನತಾ ಪಕ್ಷದವರುನಂತರ ಜನ ಅವರಿಗೆ ಯಾವ ರೀತಿ ಉತ್ತರಿಸಿದರು ಎಂಬುದನ್ನು ನೋಡಿದ್ದೀವಲ್ಲ

   ಇಷ್ಟಾದ ಮೇಲೇನು ಮತ್ತೆ ಹಾಗೇ ಆಗುತ್ತೆ ಅಂತಾ ಯಾರಾದ್ರೂ ತಿಳಿದಿದ್ರೆ ಅದು ಅವರ ಭ್ರಮೆ ಎಂದರು.
ಭ್ರಷ್ಟಾಚಾರ ಸರ್ಕಾರ ಎಂದು ಜೋಶಿ ಹೇಳಿಕೆ ವಿಚಾರ ರಾಜ್ಯ ಸರ್ಕಾರ ಭ್ರಷ್ಟಾಚಾರ ಸರ್ಕಾರ ಎಂಬ ಹೇಳಿಕೆಗೆ ತಿರುಗೇಟು ನೀಡಿದ ಅವರು ಕೇಂದ್ರ ಸರ್ಕಾರದಲ್ಲೇ ಇದ್ದಾರಲ್ಲ ಸರ್ಕಾರದಲ್ಲಿರುವವರು ಹೇಳುವಾಗ ಜವಾಬ್ದಾರಿಯಿಂದ ಮಾತನಾಡಬೇಕುತಾವು ಏನಿದ್ದಾರೆ ಏನು ಹೇಳ್ತಾ ಇದ್ದಾರೆ ಎಂಬುದರ ಬಗ್ಗೆ ಅರಿವಿರಬೇಕುಭ್ರಷ್ಟಾಚಾರ ಸರ್ಕಾರ ಅಂದ್ರೆ ನಿಮ್ಮ ಸೆಂಟ್ರಲ್ ವಿಜಿಲೆನ್ಸ್ ಏನು ಮಾಡ್ತಾ ಇದೆ
ಇಡಿ, ಸಿಬಿಐ, ಇನ್ಕಮ್ ಟ್ಯಾಕ್ಸ್ ಎಲ್ಲಾ ಮಾಡಿದ್ದೀರಲ್ಲ ಈಗ 10 ವರ್ಷ ಆಯ್ತು ಯಾರು ನಿಮಗೆ ತಡೆದಿದ್ದು?ಮಹಾರಾಷ್ಟ್ರದಲ್ಲಿ ನೀವು ಭ್ರಷ್ಟಾಚಾರದ ಮೂಲಕ ಸರ್ಕಾರ ಬದಲಾಯಿಸಿ ಯಶಸ್ವಿ ಆದ್ರಿ
ಅದು ನಿಮ್ಮ ಪ್ರಾಮಾಣಿಕತನ ಅಲ್ವೇ ಎಂದು ಲೇವಡಿ ಮಾಡಿದ ಪಾಟೀಲ್ .

   ಕಾಂಗ್ರೆಸ್ ನವರ ಮೇಲೆಯೇ ಐಟಿ ರೇಡ್ ವಿಚಾರ ಇನ್ನು ಕಾಂಗ್ರೆಸ್ ನವರ ಮೇಲೆ ಐಟಿ ದಾಳಿಯನ್ನು ಕೇಂದ್ರ ಸರ್ಕಾರ ಅದು ಭಾರತೀಯ ಜನತಾ ಪಕ್ಷದವರು ಮಾಡಿಸುವ ಹುನ್ನಾರದ ಬಗ್ಗೆ ಹೆಚ್ಚು ಮಾತನಾಡಲು ಹೋಗದ ಅವರು ಈಗ ಸದ್ಯಕ್ಕಂತು ಇಲ್ವಲ್ಲ ಎಂದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page SUBSCRIBE ಮಾಡಿ

Recent Articles

spot_img

Related Stories

Share via
Copy link
Powered by Social Snap