ನಾವು ಎಲ್ಲಿದ್ದೇವೆ …..: ಒಮ್ಮೆ ಯೋಚಿಸಿ….!?

    ಸದ್ಯ ಜೀವನದಲ್ಲಿ ಪ್ರತಿಯೊಬ್ಬರಿಗೂ ಅವಶ್ಯಕತೆ ಹಾಗೂ ಅತ್ಯವಸರಗಳು ಎರಡಕ್ಕೆ ಇರುವ ಸಣ್ಣ ಒಂದು ವ್ಯತ್ಯಾಸ ಅಷ್ಟಾಗಿ ಕಾಣುತ್ತಿಲ್ಲ ಈ ಹಿಂದೆ ಅಂದರೆ ನಮ್ಮ ತಂದೆ ಅಥವಾ ತಾತನ ಕಾಲದಲ್ಲಿ ಪರಿಸ್ಥಿತಿಗಳು ಬೇರೆ ಅವರ ಕಾಲದಲ್ಲಿ 10ನೇ ತರಗತಿ ಮುಗಿಸುವುದೇ ಒಂದು ದೊಡ್ಡ ಸವಾಲಾಗಿತ್ತು ಏಕೆಂದರೆ ಆಗಿನ ಶಿಕ್ಷಣ ಹಾಗೂ ಪರೀಕ್ಷಾ ವ್ಯವಸ್ಥೆ ಇವೆರಡು ಕಠಿಣ ಅಥವಾ ಆ ದಿನಮಾನಕ್ಕೆ ಹೊಂದಿಕೊಳ್ಳಲು ಸ್ವಲ್ಪ ಸಮಯ ತೆಗೆದುಕೊಳ್ಳುವಂತಹ ದಿನಗಳು ಹಾಗೆ ನೋಡಿದರೆ ಅಂದಿನ ಹತ್ತನೇ ತರಗತಿಯ ಹಿಂದಿನ ಡಿಗ್ರಿ ಓದಿಗೆ ಸಮಾನ ಮರ್ಯಾದೆಯನ್ನು ತಂದುಕೊಡುತ್ತಿತ್ತು ಮತ್ತು ಊರಿನಲ್ಲಿ ಯಾರಾದರೂ ಹತ್ತನೇ ತರಗತಿ ಅಥವಾ ಅದರ ಮೇಲ್ಪಟ್ಟು ಓದಿದ್ದರೆ ಆತನಿಗೆ ಸಿಗುತ್ತಿದ್ದ ಮರ್ಯಾದೆ ಮತ್ತು ಕೆಲಸ ಅದರಲ್ಲೂ ಸರ್ಕಾರಿ ಕೆಲಸ ಸಿಗುವುದು ದುಸ್ತರವೇನಲ್ಲ.

     ಇನ್ನು ಕೆಲಸದ ವಿಷಯದಲ್ಲಿ ಈಗಿನ ಯುವಜನತೆ ಹಾಗೂ ನಮ್ಮ ಹಿರಿಯರ ಹೋಲಿಕೆ ನೋಡಿದರೆ ಅವರು ಮಾಡುತ್ತಿದ್ದ ಕೆಲಸದ ಅರ್ಧದಷ್ಟು ಮಾಡಲು ತಿಣುಕಾಡುವಂತಹ ಪರಿಸ್ಥಿತಿ ಎದುರಾಗಿದೆ ಏಕೆಂದರೆ ಜೀವನ ಶೈಲಿ ಹಾಗೂ ಅತಿ ಬೇಗ ಹಣ ಸಂಪಾದನೆಯ ಮಾರ್ಗಗಳು ಹಾಗೂ ಒಂದು ಕಡೆ ಇದ್ದು ಅಲ್ಲೇ ಪೂರ್ಣಾವಧಿ ಕೆಲಸ ಮಾಡಲಾಗ ಮಾಡಲಾಗದ ಪರಿಸ್ಥಿತಿ ಇವೆಲ್ಲವೂ ಈಗಿನ ಉಪಯುಕ್ತತೆ ಅಥವಾ ಪ್ರೊಡಕ್ಟಿವಿಟಿ ಯ ಮೇಲೆ ಅತಿ ಬಲವಾಗಿ ಪರಿಣಾಮ ಬೀರು ಇನ್ನು ಇದಕ್ಕೆ ಅಪಮಾನ ಎಂಬಂತೆ ಒಂದು ದೇಶದಲ್ಲಿ ಒಬ್ಬ ವ್ಯಕ್ತಿ ಒಂದು ಕಂಪನಿ ಸೇರಿದ್ದಲ್ಲಿ ಆತ ಅದೇ ಕಂಪನಿಯಲ್ಲಿ ಆತನ ಇಡೀ ಕೆಲಸದ ಅವಧಿ ಅಂದರೆ 60 ರಿಂದ 62 ವರ್ಷ ಈ ಅವಧಿಯನ್ನು ಒಂದೇ ಕಂಪನಿಯಲ್ಲಿ ಕಳೆಯುತ್ತಾನೆ ಮತ್ತು ಆ ದೇಶದಲ್ಲಿ ಅವರ ಸೇವಾವಧಿ ಮತ್ತು ಅವರ ಪ್ರಾಮಾಣಿಕತೆ ಅನುಗುಣವಾಗಿ ಬಡ್ತಿ ಹಾಗೂ ವೇತನ ಎರಡು ಹೆಚ್ಚಾಗುತ್ತದೆ ಈ ಮೇಲೆ ಹೇಳಿರುವ ದೇಶ ಯಾವುದೆಂದು ನಾವು ಊಹಿಸಿ ನೋಡಿದಾಗ ಅದು ಪರಮಾಣು ಬಾಂಬ್ ನಿಂದ ಹಾನಿಗೊಳಗಾಗಿ ಮತ್ತೆ ಫೀನಿಕ್ಸ್ನಂತೆ ಎದ್ದು ನಿಂತ ಚಿಕ್ಕದಾದರೂ ಬುದ್ಧಿಮತ್ತೆಯಲ್ಲಿ ಅತ್ಯಂತ ಗಣನೀಯ ಸಾಧನೆ ಮಾಡಿರುವ ಜಪಾನ್ ಹೆಸರು ಕೇಳಿದೊಡನೆ ಎಲ್ಲರೂ ಹೇಳು ಒಂದೇ ಮಾತು, ಜಪಾನ್ ನಿಜಕ್ಕೂ ಅತ್ಯಂತ ಪ್ರಾಮಾಣಿಕ ಹಾಗೂ ಗಟ್ಟಿ ಮನಃಸ್ ತತ್ವ ಉಳ್ಳ ಜನ ಅಲ್ಲಿಯವರು ಎನ್ನುತ್ತಾರೆ ಅವರ ಜೀವನಶೈಲಿ ಹಾಗೂ ಉದ್ಯೋಗದಲ್ಲಿ ಅವರು ಉಪಯೋಗಿಸುವ ಜಾಣ್ಮೆ ಅವರ ಪ್ರಾಮಾಣಿಕತೆ ಎಲ್ಲವೂ ಇಂದಿಗೂ ಆದರ್ಶಪ್ರಾಯ

   ನಾವು ಭಾರತೀಯರು ಗಡಿಯಾರ ನೋಡಿ ಆಫೀಸಿಗೆ ಹೋಗುತ್ತೇವೆ ಮತ್ತು ಸಮಯ ಆಗುತ್ತಿದ್ದಂತೆ ಆಫೀಸಿನಿಂದ ಜಾಗ ಖಾಲಿ ಮಾಡುತ್ತೇವೆ. ಯಾವಾಗ ಮನೆಗೆ ಹೊರಡುವ ಸಮಯ ಬರುತ್ತದೆ ಎಂಬುದನ್ನು ಒಂದು ಗಂಟೆಯಿಂದಲೇ ಎದುರು ನೋಡುತ್ತೇವೆ. ಆದರೆ ಜಪಾನಿಯರು ಹಾಗಲ್ಲ. ಅವರು ಮನೆಗೇ ಹೋಗುವುದಿಲ್ಲ. ಕೆಲವೊಮ್ಮೆ ಅವರಿಗೆ ಮನೆಗೆ ಹೋಗಿ ಎಂದು ಹೇಳಬೇಕಾಗುತ್ತದೆ. ಜಪಾನಿಯರಿಗೆ ಕೆಲಸ ಅಂದ್ರೆ ನಿಷ್ಠೆಯ ಸಂಕೇತ. ಅಲ್ಲಿ ಉದ್ಯೋಗಿಗಳು ತಮ್ಮ ಕಂಪನಿಗೆ ಶ್ರದ್ಧೆ ಯಿಂದ ಕೆಲಸ ಮಾಡುವ ಮೂಲಕ ತಮ್ಮ ಬದ್ಧತೆಯನ್ನು ತೋರಿಸುತ್ತಾರೆ. ಈ ನಿಷ್ಠೆ ಮತ್ತು ಬದ್ಧತೆ ಕೆಲಸದ ಸಮಯವನ್ನು ವಿಸ್ತರಿಸಲು ಕಾರಣ. ಕೆಲವರಿಗೆ, ‘ನಿಮ್ಮ ಉದ್ಯೋಗ ಮುಖ್ಯವೋ, ಕುಟುಂಬ ಮುಖ್ಯವೋ’ ಅಂತ ಕೇಳಿದರೆ, ‘ನನ್ನ ಕಂಪನಿಯೇ ಸರ್ವಸ್ವ’ ಎಂದು ಹೇಳುವುದುಂಟು.

      ಐವತ್ತು ವರ್ಷಕ್ಕಿಂತ ಹೆಚ್ಚು ಕಾಲ ಒಂದೇ ಕಂಪನಿಯಲ್ಲಿ ಉದ್ಯೋಗದಲ್ಲಿರುವುದು ಅಲ್ಲಿ ಸಾಮಾನ್ಯ. ಜಪಾನಿನಲ್ಲಿ ಉದ್ಯೋಗಿಗಳ ವೇತನವು ಅವರ ಹಿರಿತನ, ಅನುಭವಕ್ಕೆ ಅನುಗುಣವಾಗಿ ಹೆಚ್ಚಾಗುತ್ತದೆ. ಈ ಪದ್ಧತಿಯು ಉದ್ಯೋಗಿಗಳನ್ನು ತಮ್ಮ ಕಂಪನಿಯಲ್ಲಿ ದೀರ್ಘಕಾಲ ಉಳಿಸಿ ಕೊಳ್ಳಲು ಸಹಾಯಕ.

   ಅವರು ಹೆಚ್ಚು ಸಮಯ ಕೆಲಸ ಮಾಡುವ ಮೂಲಕ ತಮ್ಮ ಪ್ರಗತಿಯನ್ನು ಸಾಧಿಸಲು ಪ್ರಯತ್ನಿಸು ತ್ತಾರೆ. ದ್ವಿತೀಯ ಮಹಾಯುದ್ಧದ ನಂತರ, ಜಪಾನ್ ತನ್ನ ಆರ್ಥಿಕತೆಯನ್ನು ಪುನರ್ನಿರ್ಮಿಸಲು ಹೆಚ್ಚಿನ ಶ್ರಮ ಹಾಕಿತು. ಈ ಸಮಯದಲ್ಲಿ, ಉದ್ಯೋಗಿಗಳು ಹೆಚ್ಚು ಸಮಯ ಕೆಲಸ ಮಾಡುವ ಮೂಲಕ ದೇಶದ ಆರ್ಥಿಕ ಪುನರ್ನಿರ್ಮಾಣದಲ್ಲಿ ಪಾಲ್ಗೊಂಡರು. ಈ ಶ್ರಮ ಸಂಸ್ಕೃತಿಯು ಆ ಕಾಲದಿಂದಲೇ ಆಚರಣೆಗೆ ಬಂದಿತು.

   ಹೆಚ್ಚು ಕೆಲಸ ಮಾಡಿ, ಆಫೀಸಿನಲ್ಲಿ ಮರಣ ಹೊಂದಿದ ಪ್ರಕರಣಗಳು ಅಲ್ಲಿನ ಕೆಲಸದ ಸಂಸ್ಕೃತಿಯ ತೀವ್ರತೆಯನ್ನು ತೋರಿಸುತ್ತವೆ. ಜಪಾನ್ ಸರಕಾರ ಹೆಚ್ಚು ಕೆಲಸ ಮಾಡುವ ಸಂಸ್ಕೃತಿಯನ್ನು ತಗ್ಗಿ ಸಲು ಹಲವಾರು ಕ್ರಮಗಳನ್ನು ಕೈಗೊಂಡಿದೆ. 2018ರಲ್ಲಿ, ‘ಹಟಾರಕಿಕತಾ ಕೈಕಾಕು’ ಎಂಬ ಕೆಲಸದ ಶೈಲಿಯ ಸುಧಾರಣಾ ಕಾನೂನು ಜಾರಿಗೆ ಬಂತು, ಇದು ಉದ್ಯೋಗಿಗಳ ಕೆಲಸದ ಸಮಯ ವನ್ನು ನಿಯಂತ್ರಿಸಲು ಮತ್ತು ಅವರ ಜೀವನ ಗುಣಮಟ್ಟವನ್ನು ಸುಧಾರಿಸುವ ಆಶಯವನ್ನು ಹೊಂದಿದೆ.

    ಈ ಕಾನೂನಿನ ಅಡಿಯಲ್ಲಿ, ತಿಂಗಳಿಗೆ 100 ಗಂಟೆಗಳ ಹೆಚ್ಚುವರಿ ಕೆಲಸಕ್ಕೆ ಮಿತಿ ವಿಧಿಸಲಾಗಿದೆ. ಜತೆಗೆ, ‘ಸಮಾನ ಕೆಲಸಕ್ಕೆ ಸಮಾನ ವೇತನ’ ಎಂಬ ತತ್ವವನ್ನು ಜಾರಿಗೆ ತರಲಾಗಿದೆ, ಇದು ನಿಯ ಮಿತ ಮತ್ತು ಅನಿಯಮಿತ ಉದ್ಯೋಗಿಗಳ ನಡುವಿನ ವೇತನ ವ್ಯತ್ಯಾಸವನ್ನು ಕಡಿಮೆ ಮಾಡುವ ಉದ್ದೇಶ ಹೊಂದಿದೆ. ಜಪಾನಿನಲ್ಲಿ ಉದ್ಯೋಗಿಗಳು ಹೆಚ್ಚು ಸಮಯ ಕೆಲಸ ಮಾಡಲು ಹಲವು ಕಾರಣಗಳಿವೆ, ಇದರಲ್ಲಿ ಸಾಂಸ್ಕೃತಿಕ ನಿರೀಕ್ಷೆಗಳು, ಆರ್ಥಿಕ ಪದ್ಧತಿಗಳು, ಸಾಂಸಾರಿಕ ತಾಪತ್ರಯ, ಆಧುನಿಕ ಜೀವನ ನಡೆಸುವ ಹಂಬಲ ಮತ್ತು ಇತಿಹಾಸಿಕ ಹಿನ್ನೆಲೆಗಳು ಪ್ರಮುಖವಾಗಿವೆ.

    ಇಷ್ಟಾಗಿಯೂ ಒಂದು ಸಂಗತಿ ಜನಜನಿತ. ಜಪಾನಿಯರು ಸೋಮಾರಿಗಳಲ್ಲ, ಮೈಗಳ್ಳರಲ್ಲ. ಅವರು ಮೂಲತಃ ಶ್ರಮಜೀವಿಗಳು. ದಿನದಲ್ಲಿ ಹದಿನೆಂಟು ಗಂಟೆ ದುಡಿಯಬೇಕು ಎಂದರೂ ತುಟಿ ಪಿಟಿಕ್ಕೆ ನ್ನದೇ ದುಡಿಯುತ್ತಾರೆ. ತಾನು ಸಂಬಳಕ್ಕೆ ಅಥವಾ ತನಗಾಗಿ ಮಾತ್ರ ದುಡಿಯುತ್ತೇನೆ ಎಂದು ಅವರು ಭಾವಿಸುವುದಿಲ್ಲ. ನಾನು ನನ್ನ ದೇಶದ ಅಭಿವೃದ್ಧಿಗೆ ದುಡಿಯಬೇಕು, ನನ್ನ ಸಂಸ್ಥೆಯ ಉನ್ನತಿಗಾಗಿ ದುಡಿಯಬೇಕು ಎಂಬ ಆದರ್ಶ ಭಾವವೂ ಅವರಲ್ಲಿ ಮನೆ ಮಾಡಿರುವುದು ಗಮನಾರ್ಹ.

   ಸಮಯದ ಪರಿವಿಲ್ಲದೇ ಪರಿಶ್ರಮದಿಂದ ದುಡಿಯಬೇಕು, ಅದರಲ್ಲಿಯೇ ತೃಪ್ತಿ ಕಾಣಬೇಕು ಎನ್ನುವುದು ರಕ್ತದಲ್ಲಿಯೇ ಅವರಿಗೆ ಹರಿದು ಬಂದಿರುತ್ತದೆ . ಅದಕ್ಕಾಗಿಯೇ ಅತಿಯಾಗಿ ಕೆಲಸಕ್ಕಾಗಿ ಸಾಯುವವರು ಅಲ್ಲಿ ಸಿಗುತ್ತಾರೆ, ಆದರೆ ದುಡಿಯದ ಕೆಲಸಗಳ್ಳರು ಸಿಗಲಾರರು.

Recent Articles

spot_img

Related Stories

Share via
Copy link