ಕೇರಳ :
ಪೋಷಕರೇ, ಇತ್ತೀಚಿನ ಬ್ಯುಸಿ ಶೆಡ್ಯೂಲ್‌ನಲ್ಲಿ ಆಟವಾಡೋದಕ್ಕೆ ಮಕ್ಕಳಿಗೆ ಮೊಬೈಲ್ ಕೊಡುವುದು ಸಖತ್ ಡೇಂಜರ್.
ಅದರಲ್ಲೂ ಬೇಸಿಗೆಯ ಬಿಸಿಲಿನ ತಾಪಕ್ಕೆ ಮೊಬೈಲ್ ಅತಿ ವೇಗವಾಗಿ ಬಿಸಿಯಾಗುತ್ತದೆ. ಅದರಲ್ಲೂ ಚಾರ್ಜ್ ಮಾಡಿದ ತಕ್ಷಣ ಬಳಸುವುದು ಅಪಾಯಕಾರಿ ಅನ್ನೋದಕ್ಕೆ ಸಾಕ್ಷಿಯಾಗಿದ್ದು, ಈ ಘೋರ ದುರಂತ. ಕೇರಳದ ತ್ರಿಶೂರಿನ ತಿರುವಿಲ್ವಾಮಲ ಬಳಿಚಾರ್ಜ್ ಮಾಡಿ ಗೇಮ್ ಆಡುತ್ತಿದ್ದಾಗ ಇದ್ದಕ್ಕಿದ್ದಂತೆ ಸ್ಮಾರ್ಟ್ ಫೋನ್ ಸ್ಫೋಟಗೊಂಡಿದ್ದು, 8 ವರ್ಷದ ಪುಟ್ಟ ಕಂದಮ್ಮ ಮೃತಪಟ್ಟಿದೆ. ಪಟ್ಟಿಪರಂಬುವಿನ ಆದಿತ್ಯಶ್ರೀ ಎಂದು ಗುರುತಿಸಲಾಗಿದೆ. ಬಾಲಕಿಯನ್ನು ಕಳೆದು ಕೊಂಡ ಕುಟುಂಬಸ್ಥರಲ್ಲಿ ಆಕ್ರಂದನ ಮುಗಿಲು ಮುಟ್ಟಿದೆ.
ಪೋಷಕರೇ , ಎಗ್ಗಿಲ್ಲದೇ ಮಕ್ಕಳು ಮೊಬೈಲ್‌ನಲ್ಲಿ ಗೇಮ್ ಆಡೋದಕ್ಕೆ ಬಿಡಬೇಡಿ, ಇದು ಜೀವಕ್ಕೆ ಕುತ್ತು ಎದುರಾಗುವುದು ಗ್ಯಾರಂಟಿ ಹೇಳುವ ಮಾತು ತಪ್ಪೆನಲ್ಲ. ಮಕ್ಕಳು ಮೊಬೈಲ್ ಬಳಕೆ ಮಾಡುವುದು ಅಪ್ಪಿತಪ್ಪಿಯೂ ನಿರ್ಲಕ್ಷ್ಯಿಸಬೇಡಿ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ