ಹಾಸನ
ಇಡೀ ಜೆಡಿಎಸ್ ಪಕ್ಷಕ್ಕೆ ತಲೆನೋವು ಎಂಬಂತೆ ಪ್ರತಿಬಿಂಬಿತವಾಗಿದ್ದ ಹಾಸನ ಟಿಕೆಟ್ ಗಲಾಟೆಗೆ ತಾರ್ಕಿಕ ಸಿಗುವ ಎಲ್ಲಾ ಲಕ್ಷಣ ಕಾಣುತ್ತಿವೆ . ರಾಜ್ಯ ವಿಧಾನಸಭಾ ಚುನಾವಣೆಗೆ ಭರ್ಜರಿ ತಯಾರಿ ನಡೆಸಿರುವ ದಳಪತಿಗಳು ಈಗಾಗಲೇ 93 ಅಭ್ಯರ್ಥಿಗಳನ್ನ ಅಂತಿಮಗೊಳಿಸಿದ್ದು, ಹಾಸನ ವಿಧಾನಸಭಾ ಕ್ಷೇತ್ರವೇ ದೊಡ್ಡ ಕಗ್ಗಂಟಾಗಿದೆ.
ಹಾಸನ ಅಭ್ಯರ್ಥಿ ಘೋಷಣೆಗೂ ಮುನ್ನ ಭವಾನಿ ರೇವಣ್ಣ ಹಾಗೂ ಸ್ವರೂಪ್ ಪ್ರಕಾಶ್ ಅವರು ಬಿರುಸಿನ ಪ್ರಚಾರ ಶುರು ಮಾಡಿದ್ದು, ಈ ವಿಚಾರವಾಗಿ ರಾಜಕೀಯವಾಗಿ ಸಾಕಷ್ಟು ಚರ್ಚೆಗೆ ಕಾರಣವಾಗಿತ್ತು. ಹೀಗಾಗಿ ಈ ಎಲ್ಲಾ ಗೊಂದಲಗಳಿಗೆ ತೆರೆ ಎಳೆಯಲು ದೊಡ್ಡ ಗೌಡು ಹಾಸನ ವಿಚಾರವಾಗಿ ಅಖಾಡಕ್ಕಿಳಿದಿದ್ದಾರೆ.
ಹಾಸನ ಕ್ಷೇತ್ರದ ಟಿಕೆಟ್ ಇಬ್ಬರು ಪಟ್ಟು ಹಿಡಿದಿದ್ದು, ಈ ಬಾರಿ ಟಿಕೆಟ್ ಯಾರಿಗೆ ಕೊಡ್ತಾರೆ ಎನ್ನುವುದೇ ಸಾಕಷ್ಟು ಕುತೂಹಲಕ್ಕೆ ಕಾರಣವಾಗಿತ್ತು. ಆದರೆ, ಹಾಸನ ವಿಧಾನಸಭಾ ಕ್ಷೇತ್ರದ ಜೆಡಿಎಸ್ ಟಿಕೆಟ್ ವಿಚಾರದಲ್ಲಿ ಗೊಂದಲಕ್ಕೆ ತೆರೆ ಎಳೆಯಲು ದೇವೇಗೌಡು ಹೊಸ ಸೂತ್ರವನ್ನ ಪ್ರಯೋಗ ಮಾಡಿದ್ದಾರೆ. ಭವಾನಿ ರೇವಣ್ಣ ಹಾಗೂ ಸ್ವರೂಪ್ ಪ್ರಕಾಶ್ ಹೆಸರುಗಳನ್ನ ಕೈ ಬಿಟ್ಟು ಇದೀಗ ಕ್ಷೇತ್ರದಲ್ಲಿ ಹೊಸ ಹೆಸರು ಭಾರಿ ಸದ್ದು ಮಾಡುತ್ತಿದೆ.
ಹೌದು, ಇಬ್ಬರ ಜಗಳದಲ್ಲಿ ಮೂರನೆಯವರಿಗೆ ಲಾಭ ಎಂಬಂತೆ ಹಾಸನ ಟಿಕೆಟ್ ವಿಚಾರದಲ್ಲಿ ದಳಪತಿಗಳು ಹೊಸ ಸೂತ್ರ ಪ್ರಯೋಗ ಮಾಡಲು ಪ್ಲಾನ್ ಹಾಕಿಕೊಂಡಿದ್ದಾರೆ. ಪದೇ ಪದೇ ಮಾಜಿ ಮುಖ್ಯಮಂತ್ರಿ ಸಾಮಾನ್ಯ ಕಾರ್ಯಕರ್ತರಿಗೆ ಹಾಸಕ ಟಿಕೆಟ್ ಅಂತ ಹೇಳಿದ್ರು, ಅದೇ ಅಲ್ಲದೇ ಹಾಸನ ಟಿಕೆಟ್ ಕುರಿತು ನಾನು ಪಕ್ಷವನ್ನ ಕಳೆದುಕೊಳ್ಳಲ್ಲ ಎಂದು ಹೇಳಿದ್ದು, ಭವಾನಿ ರೇವಣ್ಣ ಹಾಗೂ ಸ್ವರೂಪ್ ನಡುವಿನ ಟಿಕೆಟ್ ಗದ್ದಲ ಬಗೆಹರಿಸಲು ಹೊಸ ಸೂತ್ರಕ್ಕೆ ದೇವೇಗೌಡರು ಮುಂದಾಗಿದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ