ಇಂದು ಮಂಡನೆಯಾದ ಬಜೆಟ್‌ ಟೇಕಾಫ್‌ ಆಗಲ್ಲ : ಕಾಂಗ್ರೆಸ್

ಬೆಂಗಳೂರು:

ಬಣ್ಣ ಬಣ್ಣದ ಘೋಷಣೆ ಮಾಡಿ ರಾಜ್ಯದ ಜನರ ಕಿವಿ ಮೇಲೆ ಹೂವಿಡುವ ಪ್ರಯತ್ನ

      ವಿಧಾನಸಭಾ ಚುನಾವಣೆ  ಸನ್ನಿಹಿತವಾಗಿರುವ ಹಿನ್ನೆಲೆ ಬಿಜೆಪಿ ಸರ್ಕಾರದ  ಬಜೆಟ್ ಹೇಗಿರಬಹುದು ಎಂದು ಇಡೀ ರಾಜ್ಯದ ಜನತೆ ಕಾಯುತ್ತಿದ್ದರು, ಆ ಕುತೂಹಲಕ್ಕೆ ಈಗ ತೆರೆ ಬಿದ್ದಿದ್ದು. ಸಿಎಂ ಬಸವರಾಜ್ ಬೊಮ್ಮಾಯಿ ಮಂಡನೆ ಮಾಡಿದ ಬಜೆಟ್  ಟೀಕಾಫ್ ಆಗುವುದೇ ಇಲ್ಲ. ಚುನಾವಣೆಗಾಗಿ ಬಣ್ಣ ಬಣ್ಣದ ಘೋಷಣೆ ಮಾಡಿ ರಾಜ್ಯದ ಜನರ ಕಿವಿ ಮೇಲೆ ಹೂವಿಡುವ ಪ್ರಯತ್ನದಲ್ಲಿದ್ದಾರೆ ಅಷ್ಟೇ ಎಂದು ವಾಗ್ದಾಳಿ ನಡೆಸಿದೆ.

    ಯಾವುದೇ ಯೋಜನೆ ಬಗ್ಗೆ ಕೇಳಿದರೂ ಅನುದಾನವಿಲ್ಲ, ಹಣವಿಲ್ಲ ಎನ್ನುವವರ ಬಜೆಟ್‌ನಿಂದ ನಿರೀಕ್ಷೆ ಇಟ್ಟುಕೊಳ್ಳುವುದು ಮೂರ್ಖತನ. 50% ರಷ್ಟೂ ಸಹ ಹಿಂದಿನ ಬಜೆಟ್‌ನ ಘೋಷಣೆಗಳು ಪ್ರಗತಿಯಾಗಿಲ್ಲ. 90%ರಷ್ಟು ಬಿಜೆಪಿಯ ಪ್ರಣಾಳಿಕೆಯ ಭರವಸೆಗಳು ಈಡೇರಿಲ್ಲ. 40% ಕಮಿಷನ್ ಲೂಟಿಗೆ ಯಾವುದೇ ಅಡೆತಡೆ ಇಲ್ಲ ಎಂದು ಕಾಂಗ್ರೆಸ್ ಆರೋಪ ಮಾಡಿದೆ.

   ಹೀಗಿರುವಾಗ ಬಸವರಾಜ್ ಬೊಮ್ಮಾಯಿ ಅವರು ಓದುತ್ತಿರುವ ಬಜೆಟ್‌ನಲ್ಲಿ ಬದ್ಧತೆ ಇಲ್ಲ. ರಾಜ್ಯದ ಜನರ ಕಿವಿ ಮೇಲೆ ಹೂವಿಡುವ ಪ್ರಯತ್ನವಷ್ಟೇ ಎಂದು ಕಿವಿ ಮೇಲೆ ಹೂವಷ್ಟೇ ಎಂದು ಹ್ಯಾಶ್ ಟ್ಯಾಗ್ ಬಳಸಿ ವ್ಯಂಗ್ಯ ಮಾಡಿದೆ.

    ಸಿಎಂ ಭಾಷಣದಲ್ಲಿ ಉತ್ಸಾಹ ಇರಲಿಲ್ಲ. ಇದು ಕನ್ನಡಿಗರ ಕಿವೆ ಮೇಲೆ ಹೂವ ಇಡುವ ಬಜೆಟ್. ಯಾವ ಸಮುದಾಯದವರಿಗೂ ನ್ಯಾಯ ಸಿಕ್ಕಿಲ್ಲ. ಉದ್ಯೋಗ ಸೃಷ್ಟಿ, ಹೂಡಿಕೆ ಬಗ್ಗೆ ನೀಲಿ ನಕ್ಷೆ ಇಲ್ಲ. ಕಳೆದ ಸಿಎಂ ಬಜೆಟ್‌ನಲ್ಲಿ 56% ಖರ್ಚಾಗಿದೆ ಅನ್ನೋ ಮಾಹಿತಿ ಇದೆ. ಇಲ್ಲಿ ಯಾವ ಸರ್ಕಾರಕ್ಕೂ ನ್ಯಾಯ ಸಿಕ್ಕಿಲ್ಲ ಎಂದು ಮಾಜಿ ಸಚಿವ ಪ್ರಿಯಾಂಕ್ ಖರ್ಗೆ  ಬಜೆಟ್ ಕುರಿತು ತಮ್ಮ ಪ್ರತಿಕ್ರಿಯೆ ನೀಡಿದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap