631 ಕಿ.ಮಿ ಮೈಲೇಜ್‌ ನೀಡುತ್ತೆ ಈ ಹ್ಯುಂಡೈ ಕಾರು…!

ನಿರೀಕ್ಷೆಗೂ ಮೀರಿ ಬುಕ್ಕಿಂಗ್‌ ಪಡೆದಿದೆ ಈ ಎಲೆಕ್ಟ್ರಿಕ್  ಕಾರು…!

ತುಮಕೂರು:

     ಇತ್ತೀಚೆಗೆ ಭಾರತಾದ್ಯಂತ ಎಲೆಕ್ಟ್ರಿಕ್ ವಾಹನ ಕ್ರಾಂತಿ ಶುರುವಾಗಿದ್ದು ಈ ಕ್ರಾಂತಿಯ ಭಾಗವಾಗಿ ಸ್ವದೇಶಿ ನಿರ್ಮಿತ ಗಾಡಿಗಳೊಂದಿಗೆ ಈ ವಿದೇಶಿ ಕಾರು ತಯಾರಿಕಾ ಕಂಪನಿಯಾದ  ಹ್ಯುಂಡೈ ತನ್ನ ಐಯೊನಿಕ್ 5 ಎಲೆಕ್ಟ್ರಿಕ್ ಕಾರನ್ನು ಇತ್ತೀಚೆಗೆ ನಡೆದ ಆಟೋ ಎಕ್ಸ್‌ಪೋದಲ್ಲಿ ಬಿಡುಗಡೆಗೊಳಿಸಿತು.

   

ಇನ್ನು ಜನರಿಗೆ ಕಾಡುವ ಒಂದು ಪ್ರಶ್ನೆ ಎಂದರೆ ಈ ಕಾರಿನ ಬೆಲೆ ಎಷ್ಟಿರಬಹುದು,ಇದಕ್ಕೆ ಉತ್ತರ ಬರೊಬ್ಬರಿ 44.95 ಲಕ್ಷ ರೂಪಾಯಿಗಳು ಎಂದು ಕಂಪನಿ ಹೇಳಿದೆ. 

      ಐಯೊನಿಕ್ 5 ಎಲೆಕ್ಟ್ರಿಕ್ ಕಾರಿನ ಪರಿಚಯಾತ್ಮಕ ಬೆಲೆಯು ಮೊದಲ 500 ಬುಕಿಂಗ್‌ಗಳಿಗೆ ಮಾತ್ರ ಮೀಸಲಾಗಿತ್ತು. ಇದರ ಅಸಲಿ ಬೆಲೆ ಸರಿಸುಮಾರು ರೂ. 60.95 ಲಕ್ಷದಿಂದ ರೂ. 65.95 ಲಕ್ಷದವರೆಗೆ ಇರಬಹುದು ಎನ್ನಲಾಗಿದೆ . Kia EV6 ಮಾದರಿಗೆ ಹೋಲಿಸಿದರೆ, Ioniq 5 ಸುಮಾರು ರೂ 16 ಲಕ್ಷ ಹೆಚ್ಚು ಕಡಿಮೆ ಬೆಲೆಗೆ ಸಿಗಲಿದೆ .
      ಈ ಹೊಸ ಹ್ಯುಂಡೈ ಎಲೆಕ್ಟ್ರಿಕ್ ಕಾರನ್ನು ಖರೀದಿಸಲು ಬಯಸುವ ಗ್ರಾಹಕರು ಆನ್‌ಲೈನ್‌ನಲ್ಲಿ ಅಥವಾ ಆಯ್ದ ಅಧಿಕೃತ ಡೀಲರ್‌ಶಿಪ್‌ಗಳಲ್ಲಿ ತೆರಳಿ ಬುಕ್ಕಿಂಗ್ ಮಾಡಿಕೊಳ್ಳಬಹುದಾಗಿದೆ. ಬುಕ್ಕಿಂಗ್ ಟೋಕನ್ ಮೊತ್ತ ರೂ.1 ಲಕ್ಷವಾಗಿದೆ. ಹ್ಯುಂಡೈ ಕಂಪನಿಯು ರಂಭದಲ್ಲಿ ವಾರ್ಷಿಕ ಆಧಾರದ ಮೇಲೆ 250-300 ಯುನಿಟ್‌ಗಳನ್ನು ವಿತರಿಸಲು ಯೋಜಿಸಿದ್ದರೂ, ಅದರ ಈ ಮಾದರಿಗೆ ನಿರೀಕ್ಷೆಗೂ ಮೀರಿ ಬುಕ್ಕಿಂಗ್ ಆಗುತ್ತಿದೆ.
      ಈ ಐಯೊನಿಕ್ 5 ಎಲೆಕ್ಟ್ರಿಕ್ ಕಾರಿಗೆ ಇದುವರೆಗೆ 650 ಬುಕಿಂಗ್‌ಗಳನ್ನು ಪಡೆದುಕೊಂಡಿದೆ.
ಈ ಐಷಾರಾಮಿ ಐಯೊನಿಕ್ 5 ಎಲೆಕ್ಟ್ರಿಕ್ ಕಾರಿನ ವಿತರಣೆಗಳು 2023ರ ಮಾರ್ಚ್ ಅಂತ್ಯದ ವೇಳೆಗೆ ಪ್ರಾರಂಭವಾಗುತ್ತದೆ. ಈ ಬಹುನಿರೀಕ್ಷಿತ ಹೊಸ ಹ್ಯುಂಡೈ ಐಯಾನಿಕ್ 5 ಎಲೆಕ್ಟ್ರಿಕ್ ಕ್ರಾಸ್ಒವರ್ ದಕ್ಷಿಣ ಕೊರಿಯಾದ ವಾಹನ ತಯಾರಕರ ಪ್ರಸಿದ್ಧ ಮತ್ತು ಸುಧಾರಿತ ಎಲೆಕ್ಟ್ರಿಕ್-ಗ್ಲೋಬಲ್ ಮಾಡ್ಯುಲರ್ ಪ್ಲಾಟ್‌ಫಾರ್ಮ್ (ಇ-ಜಿಎಂಪಿ) ಅನ್ನು ಒಳಗೊಂಡಿದೆ. ಈ ಹ್ಯುಂಡೈ ಎಲೆಕ್ಟ್ರಿಕ್ ಕ್ರಾಸ್ಒವರ್ ಇತ್ತೀಚೆಗೆ ಬಿಡುಗಡೆಯಾದ ಕಿಯಾ ಇವಿ6 ಎಲೆಕ್ಟ್ರಿಕ್ ಕ್ರಾಸ್ಒವರ್ ವಾಹನಕ್ಕೆ ಬಹುತೇಕ ಹೋಲುತ್ತದೆ.
     ಈ ಹೊಸ ಹ್ಯುಂಡೈ ಐಯಾನಿಕ್ 5 ಎಲೆಕ್ಟ್ರಿಕ್ ಕಾರು 5 4,635 ಎಂಎಂ ಉದ್ದ, 1,890 ಅಗಲ ಮತ್ತು 1,625 ಎತ್ತರ ಮತ್ತು 3,000 ಎಂಎಂ ವ್ಹೀಲ್‌ಬೇಸ್ ಹೊಂದಿದೆ. ಈ ಹೊಸ ಹ್ಯುಂಡೈ ಎಲೆಕ್ಟ್ರಿಕ್ ಮಾದರಿಯು ಆಗಿದ್ದು, ಹೊರಭಾಗದಲ್ಲಿ ಭವಿಷ್ಯದ ವಿನ್ಯಾಸವನ್ನು ಹೊಂದಿದೆ. ಇದು ಪಿಕ್ಸಲೇಟೆಡ್ LED ಟೈಲ್-ಲೈಟ್‌ಗಳು, ಫ್ಲಶ್-ಫಿಟ್ಟಿಂಗ್ ಡೋರ್ ಹ್ಯಾಂಡಲ್‌ಗಳು ಮತ್ತು ಡ್ಯುಯಲ್-ಟೋನ್ ಅಲಾಯ್ ವ್ಹೀಲ್ ಗಳೊಂದಿಗೆ ಡ್ಯುಯಲ್ LED ಹೆಡ್‌ಲ್ಯಾಂಪ್‌ಗಳನ್ನು ಒಳಗೊಂಡಿದೆ.
      ಈ ಹೊಸ ಎಲೆಕ್ಟ್ರಿಕ್ ಕಾರಿನಲ್ಲಿ ಡ್ಯುಯಲ್ ಫ್ಲೋಟಿಂಗ್ ಸ್ಕ್ರೀನ್ ಮತ್ತು 2-ಸ್ಪೋಕ್ ಸ್ಟೀರಿಂಗ್ ವೀಲ್‌ನೊಂದಿಗೆ ಆಕರ್ಷಕ ಒಳಾಂಗಣದೊಂದಿಗೆ ಬರುತ್ತದೆ. ಈ ಕಾರಿನಲ್ಲಿ 12.3-ಇಂಚಿನ ಇನ್ಫೋಟೈನ್‌ಮೆಂಟ್ ಸಿಸ್ಟಂ ಅನ್ನು ನೀಡಲಾಗಿದೆ, ಈ ಹ್ಯುಂಡೈ ಕಾರಿನಲ್ಲಿ ಡ್ರೈವರ್ ಡಿಸ್‌ಪ್ಲೇಗಳು, 360 ಡಿಗ್ರಿ ಕ್ಯಾಮೆರಾ, ಪನೋರಮಿಕ್ ಸನ್‌ರೂಫ್, V2L (ವಾಹನ 2 ಲೋಡ್) ವೈಶಿಷ್ಟ್ಯಗಳು ಮತ್ತು ಇತರವುಗಳೊಂದಿಗೆ ಸುಸಜ್ಜಿತವಾಗಿರುತ್ತದೆ.
     ಈ ಹೊಸ ಐಯಾನಿಕ್ 5 ಎಲೆಕ್ಟ್ರಿಕ್ ಕಾರಿನಲ್ಲಿ ಅಡಾಪ್ಟಿವ್ ಕ್ರೂಸ್ ಕಂಟ್ರೋಲ್, ಆಟೋ ಮ್ಯಾಟಿಕ್ ಎಮರ್ಜನ್ಸಿ ಬ್ರೇಕಿಂಗ ಅನ್ನು ಹೊಂದಿದೆ. ಇದರೊಂದಿಗೆ ಲೇನ್ ಕೀಪ್ ಮತ್ತು ಡಿಪಾರ್ಚರ್ ಏಡ್ ಮತ್ತು ಬ್ಲೈಂಡ್ ಸ್ಪಾಟ್ ಮಾನಿಟರಿಂಗ್ ಸಿಸ್ಟಮ್‌ನಂತಹ ಫೀಚರ್ಸ್ ಗಳೊಂದಿಗೆ ADAS (ಅಡ್ವಾನ್ಸ್ಡ್ ಡ್ರೈವರ ಅಸಿಸ್ಟ್ ಸಿಸ್ಟಂ) ನೊಂದಿಗೆ ಬರುತ್ತದೆ. ಈ ಹೊಸ ಹ್ಯುಂಡೈ ಐಯಾನಿಕ್ 5 ಎಲೆಕ್ಟ್ರಿಕ್ ಕಾರಿನ ಪವರ್‌ಟ್ರೇನ್ ಸೆಟಪ್ ಬಗ್ಗೆ ಹೇಳುವುದಾದರೆ, ಇದರಲ್ಲಿ 72.6kWh ಬ್ಯಾಟರಿ ಪ್ಯಾಕ್ ಅನ್ನು ಒಳಗೊಂಡಿದೆ, ಇದು ಸಿಂಗಲ್ ಚಾರ್ಜ್‌ನಲ್ಲಿ ARAI- ಪ್ರಕಾರ, 631 ಕಿ.ಮೀ ರೇಂಜ್ ಅನ್ನು ನೀಡುತ್ತದೆ.
 ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link