ದೈಹಿಕ, ಮಾನಸಿಕ, ಭಾವನಾತ್ಮಕ ಖಾಯಿಲೆಗಳಿಂದ ಮುಕ್ತರಾಗಲು ಬೆಂಗಳೂರಿನಲ್ಲಿ ಮೊದಲ ಬಾರಿಗೆ ಏ. 23 ರಿಂದ 30 ರ ವರೆಗೆ “ಪ್ರೇಕ್ಷಾ ಧ‍್ಯಾನ ಶಿಬಿರ”

ಬೆಂಗಳೂರು:

ಬೆಂಗಳೂರು, ಏ, 18; ಆಧುನಿಕ ಜೀವನ ಶೈಲಿಯ ಒತ್ತಡ, ಮಾನಸಿಕ, ದೈಹಿಕ, ಭಾವನಾತ್ಮಕ ಖಾಯಿಲೆಗಳಿಂದ ಬಳಲುತ್ತಿರುವ ಹಾಗೂ ಆರೋಗ್ಯಪೂರ್ಣ ಜೀವನಕ್ಕಾಗಿ ಪ್ರೇಕ್ಷಾ ಫೌಂಡೇಷನ್ ಈ ತಿಂಗಳ 23 ರಿಂದ 30 ರ ವರೆಗೆ “ ಪ್ರೇಕ್ಷಾಧ್ಯಾನ ಶಿಬಿರ”ಆಯೋಜಿಸಿದೆ.ಮೈಸೂರು ರಸ್ತೆಯ ಕುಂಬಳಗೋಡು, ಆಚಾರ್ಯ ತುಳಸಿ ಮಹಾ ಪ್ರಜ್ಞಾ ಚೇತನ ಸೇವಾ ಕೇಂದ್ರದಲ್ಲಿ ಶಿಬಿರ ನಡೆಯಲಿದೆ ಎಂದು ಪ್ರೇಕ್ಷಾ ಫೌಂಡೇಷನ್ ನ ಅಧ್ಯಕ್ಷ ಅಶೋಕ್ ಚಿಂದಾಲಿಯಾ, ದಕ್ಷಿಣ ವಲಯ ಸಮನ್ವಯಕಾರರಾದ ವೀಣಾ ಬೈಡ್ ತಿಳಿಸಿದ್ದಾರೆ.

 ಪ್ರೇಕ್ಷಾಧ್ಯಾನ ಕೇವಲ ಆಸನಗಳ ಕಸರತ್ತಲ್ಲ. ಇದು ನಮ್ಮ ಆಲೋಚನೆಗಳು ಮತ್ತು ಪ್ರಜ್ಞೆಯನ್ನು ಶುದ್ದೀಕರಿಸುವ ಅಭ್ಯಾಸ. ಇದರಿಂದ ನಾವು ನಮ್ಮ ಸ್ವಭಾವ, ನಡವಳಿಕೆಯನ್ನು ರೂಪಿಸಿಕೊಳ್ಳಬಹುದು. ಈ ಪ್ರಕ್ರಿಯೆ ನಮ್ಮ ಪ್ರಾಚೀನ ಗ್ರಂಥಗಳು, ಆಧುನಿಕ ವಿಜ್ಞಾನ ಅನುಭವಗಳ ಸಮ್ಮಿಲನವಾಗಿದೆ. ವ್ಯಕ್ತಿ ತನ್ನನ್ನು ತಾನು ಅರಿತುಕೊಳ್ಳುವ ಮತ್ತು ಗುರುತಿಸಿಕೊಳ್ಳಲು ಆತ್ಮಬಲ ಹೆಚ್ಚಿಸಿಕೊಳ್ಳುವ ಅಭ್ಯಾಸವಾಗಿದೆ ಎಂದು ಅವರು ತಿಳಿಸಿದ್ದಾರೆ.

ಅಸ್ಪೃಶ್ಯತೆ ಆಚರಣೆ ಮಾಜಿ ಡಿಸಿಎಂ ಹೇಳಿಕೆಯಡಿ ಪ್ರಕರಣ ದಾಖಲಿಸಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಿಗೆ ಮಾಜಿ ಶಾಸಕ ಕೆ.ಎನ್.ರಾಜಣ್ಣ ಆಗ್ರಹ

       ಜೈನಾಚಾರ್ಯ ಮಹಾಪ್ರಜ್ಞಾಜಿ ಅವರು ಈ ಪ್ರಕ್ರಿಯೆಗೆ ಮಾರ್ಗದರ್ಶನ ಮಾಡಿ ಲಕ್ಷಾಂತರ ದೇಶೀಯ ಮತ್ತು ವಿದೇಶೀಯರನ್ನು ಪರಿವರ್ತನೆ ಮಾಡಿದ್ದಾರೆ. ಉತ್ತಮ ಜೀವನಶೈಲಿ ಮೂಲಕ ಬದುಕು ಕಟ್ಟಿಕೊಳ್ಳುವಂತೆ ಮಾಡಿದ್ದಾರೆ. ಇದೇ ಪ್ರಥಮ ಬಾರಿಗೆ ಬೆಂಗಳೂರು ನಗರದ ನಿವಾಸಿಗಳಿಗೆ ಮಾನಸಿಕ ಉದ್ವೇಗದಿಂದ ಮುಕ್ತಿ, ದೈಹಿಕ ಶಕ್ತಿಯ ಪರಿವರ್ತನೆ ಮತ್ತು ಭಾವನೆಗಳನ್ನು ಉನ್ನತೀಕರಣ ಮಾಡಿಕೊಳ್ಳಲು ಶಿಬಿರ ಸಹಕಾರಿಯಾಗಿದೆ. ಅನುಭವಿ ಬೋಧಕರ ಮಾರ್ಗದರ್ಶನದಲ್ಲಿ ಸಾತ್ವಿಕ ಶಕ್ತಿಯ ಹೊಸ ಚೈತನ್ಯ ಪಡೆಯಬಹುದು. ಆಸಕ್ತ ಶಿಬಿರಾರ್ಥಿಗಳಿಗೆ ಸೂಕ್ತ ವಸತಿ ಮತ್ತು ಸಾತ್ವಿಕ ಆಹಾರದ ವ್ಯವಸ್ಥೆ ಕಲ್ಪಿಸಲಾಗುವುದು ಎಂದು ಅವರು ತಿಳಿಸಿದ್ದಾರೆ.

        ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap