2 ವಾರ ಬಂದ್‌ ಆಗಲಿದೆ ಬೆಂಗಳೂರಿನ ಈ ಮಾಲ್‌ …..!

ಬೆಂಗಳೂರು

     ಬೆಂಗಳೂರಿನ ಅತ್ಯಧಿಕ ಬೃಹತ್ ಮಾಲ್‌ನಲ್ಲಿ ಅಗ್ರಸ್ಥಾನ ಕಾಯ್ದುಕೊಂಡಿರುವ ನೂತನ ‘ಮಾಲ್ ಆಫ್ ಏಶಿಯಾ’  ಎರಡು ವಾರಗಳ ಕಾಲ ಬಂದ್ ಆಗಿರಲಿದೆ.

     ಬೆಂಗಳೂರು ಹೊಸ ವರ್ಷಾಚರಣೆ ಹಾಗೂ ಮುಂಬರುವ ಸಂಕ್ರಾಂತಿ ನಿಮಿತ್ತ ಹೆಚ್ಚಿನ ಜನರು ಜಮಾಯಿಸುವ ಹಿನ್ನೆಲೆಯಲ್ಲಿ ನಗರದ ಬ್ಯಾಟರಾಯನಪುರದ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ (ಕೆಐಎ) ರಸ್ತೆಯ ಫಿನಿಕ್ಸ್ ಮಾಲ್ ಆಫ್ ಏಶಿಯಾಗೆ ಹದಿನಾರು ದಿನ ನಿಷೇಧಾಜ್ಞೆ ಜಾರಿಗೊಳಿಸಿ ಜನ ಸಂಚಾರಕ್ಕೆ (ಸಂಪೂರ್ಣ ಬಂದ್) ಪೊಲೀಸರು ನಿರ್ಬಂಧ ವಿಧಿಸಿದ್ದಾರೆ.

   ಕಳೆದ ಅಕ್ಟೋಬರ್‌ ನಲ್ಲಿ ಈ ಮಾಲ್ ಆಫ್ ಏಶಿಯಾ ಆರಂಭವಾಗಿತ್ತು. ಅಂದಿನಿಂದ ಈ ಮಾಲ್‌ಗೆ ಆಗಮಿಸುವ ಸಾರ್ವಜನಿಕರು ರಸ್ತೆ ಬದಿ ಎಲ್ಲೆಂದರಲ್ಲಿ ವಾಹನಗಳನ್ನು ನಿಲ್ಲಿಸುತ್ತಿರುವುದು ಕಂಡು ಬಂದಿದೆ. ಇದರಿಂದ ಸಂಚಾರಕ್ಕೆ ಮಾತ್ರವಲ್ಲದೆ ಕಾನೂನು ಮತ್ತು ಸುವ್ಯವಸ್ಥೆ ಮೇಲೂ ಪರಿಣಾಮ ಉಂಟಾಗುತ್ತಿದೆ.

    ಟ್ರಾಫಿಕ್ ಸಮಸ್ಯೆ ಗಂಭೀರವಾಗಿ ಪರಿಗಣಿಸಿದ ಬಿಟಿಪಿ ಈ ವಿಷಯವನ್ನು ಪೊಲೀಸ್ ಇಲಾಖೆ ಗಂಭೀರವಾಗಿ ಪರಿಗಣಿಸಿದೆ. ಪೊಲೀಸ್ ಆಯುಕ್ತರಿಗೆ ಜಂಟಿ ಆಯುಕ್ತ (ಟ್ರಾಫಿಕ್), ಈಶಾನ್ಯ ವಿಭಾಗದ ಡಿಸಿಪಿ ಹಾಗೂ ಸ್ಥಳೀಯ ಪೊಲೀಸ್ ಇನ್ಸ್ಪೆಕ್ಟರ್ ವರದಿ ನೀಡಿದ್ದಾರೆ. ಈ ವರದಿ ಆಧರಿಸಿ ಆಯುಕ್ತ ಬಿ.ದಯಾನಂದ್ ಅವರು, ಮಾಲ್ ಆಫ್ ಏಶಿಯಾಗೆ ನಿಷೇಧಾಜ್ಞೆ ಹೇರಿದ್ದಾರೆ.

    ಪೊಲೀಸರ ಈ ನಿಷೇಧಾಜ್ಞೆ ಪ್ರಕಾರ ಇಂದು ಡಿಸೆಂಬರ್ 31ರಿಂದ 2024 ಜನವರಿ 15ರವರೆಗೆ ಮಾಲ್ ಆಫ್ ಏಶಿಯಾವು ಬಂದ್ ಆಗಿರಲಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ. ನೋಟಿಸ್ ನೀಡಿದರೂ ಎಚ್ಚರಿಕೆ ವಹಿಸಿಲ್ಲ ಈ ಮಾಲ್ ಆರಂಭವಾದಾಗಿನಿಂದ ಸಾರ್ವಜನಿಕರಿಗೆ ಸಂಚಾರಕ್ಕೆ ಸಾಕಷ್ಟು ತೊಂದರೆ ಆಗುತ್ತಿತ್ತು. ಈ ಹಿನ್ನೆಲೆಯಲ್ಲಿ ಹಲವು ಬಾರಿ ಸಂಬಂಧ ಪಟ್ಟ ಮಾಲ್ ಮುಖ್ಯಸ್ಥರಿಗೆ ನೋಟಿಸ್ ನೀಡಲಾಯಿತು, ಎಚ್ಚರಿಸಲಾಯಿತು. ಆದರೆ ಯಾವುದೇ ಪ್ರಯೋಜವಾಗಲಿಲ್ಲ.

    ಈ ಹಿನ್ನೆಲೆಯಲ್ಲಿ ನೆನ್ನೆ ಶನಿವಾರ ಖುದ್ದು ಪೊಲೀಸ್ ಆಯುಕ್ತರೇ ಭೇಟಿ ನೀಡಿ ಅಲ್ಲಿನ ಪರಿಸ್ಥಿತಿ, ಸಂಚಾರ ಅಡಚಣೆ ಇನ್ನಿತರ ವಾಸ್ತವಾಂಶಗಳನ್ನು ಪರಿಶೀಲಿಸಿದ್ದಾರೆ. ಹೊಸ ವರ್ಷಾಚರಣೆ ಎದುರಾಗಿದ್ದು, ಈ ವೇಳೆ ಹೆಚ್ಚು ಜನ ಜಂಗುಳಿ ಕಂಡು ಬರಲಿದೆ. ಅಲ್ಲದೇ ಸಂಕ್ರಾಂತಿ ವೇಳೆಯು ಅಧಿಕ ಜನರು ಓಡಾಡುವ ಕಾರಣ ಈ ರಸ್ತೆಗಳಲ್ಲಿ ಮತ್ತಷ್ಟು ಸಂಚಾರ ದಟ್ಟಣೆ (ಟ್ರಾಫಿಕ್) ಉಂಟಾಗುವ ನಿರೀಕ್ಷೆ ಇದೆ.

    ಇದೇಲ್ಲ ಪರಿಸ್ಥಿತಿ ಅವಲೋಕಿಸಿರುವ ನಗರ ಸಂಚಾರ ವಿಭಾಗದ ಪೊಲೀಸರು ಚರ್ಚೆ ನಡೆಸಿ ಮುಂದಿನ ಹದಿನೈದು ದಿನಗಳ ವರೆಗೆ ಈ ಮಾಲ್ ಆಫ್ ಏಶಿಯಾಗೆ ನಿಷೇಧಾಜ್ಞೆ ಹೊರಡಿಸಿದ್ದಾರೆ. ಜನ ಸಂಚಾರಕ್ಕೆ ಇಲ್ಲಿ ನಿಷೇಧಾಜ್ಞೆ ಹೇರಿದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page SUBSCRIBE ಮಾಡಿ

Recent Articles

spot_img

Related Stories

Share via
Copy link
Powered by Social Snap