ಗುಬ್ಬಿ:
ಕೇಂದ್ರ ಸರ್ಕಾರ ಅಡಿಕೆ ಬೆಳೆಗಾರರಿಗೆ ಅನುಕೂಲವಾಗುವಂತೆ ದರ ನಿಗದಿ ಮಾಡುವ ಪ್ರಯತ್ನ ಮಾಡುತ್ತದೆ ಈ ಭಾಗದ ರೈತರ ಬಹಳ ದಿನಗಳ ಬೇಡಿಕೆ ಈಡೇರಿಸುತ್ತೇವೆ ಎಂದು ಕೇಂದ್ರ ಗೃಹ ಸಚಿವ ಅಮಿತ್ ಷಾ ತಿಳಿಸಿದರು ಅವರು ಇಂದು ಗುಬ್ಬಿಯಲ್ಲಿ ಬೃಹತ್ ರೋಡ್ ಷೋ ನೆಡೆಸಿ ಗುಬ್ಬಿ ವಿಧಾನಸಭಾ ಕ್ಷೇತ್ರದ ಬಿ ಜೆಪಿ ಅಭ್ಯರ್ಥಿ ಎಸ್ ಡಿ ದಿಲೀಪ್‌ಕುಮಾರ್ ಪರವಾಗಿ ಮತ ಯಾಚಿಸಿ ಈ ಬಾರಿ ಗುಬ್ಬಿಯಲ್ಲಿ ದಿಲೀಪ್ ಕುಮಾರ್ ರನ್ನು ಆಯ್ಕೆ ಮಾಡಿ ನಿಮ್ಮ ಕ್ಷೇತ್ರದ ಅಭಿವೃದ್ಧಿಗೆ ಸಹಕರಿಸಿ ಎಂದರು.
ಪಟ್ಟಣದ ಚನ್ನಬಸವೇಶ್ವರ ಸ್ವಾಮಿ ದೇವಾಲಯದ ಆವರಣದಿಂದ ಬಸ್ ನಿಲ್ದಾಣದವರೆಗೆ ಬಿಜೆಪಿ ಅಭ್ಯರ್ಥಿ ಎಸ್ ಬಿ ದಿ ದಿಲೀಪ್ ಕುಮಾರ್ ಪರವಾಗಿ ರೋಡ್ ಶೋ ಮಾಡಿ ಮತಯಾಚನೆ ಮಾಡಿ ಮಾತನಾಡಿದರು. ಮುಸ್ಲಿಮರಿಗಿದಂತಹ ಶೇ4 ಮೀಸಲಾತಿಯನ್ನು ಒಕ್ಕಲಿಗ ಲಿಂಗಾಯುತ ಸೇರಿದಂತೆ ಇನ್ನಿತರರಿಗೆ ಮೀಸಲಾತಿಯನ್ನು ಹೆಚ್ಚಿಸಿದೆ ಇದನ್ನು ಕಾಂಗ್ರೆಸ್ ವಿರೋದಿಸುತ್ತಿದೆ ಇದನ್ನು ನೀವು ಅರ್ಥ ಮಾಡಿಕೊಳ್ಳಿ ಎಂದು ಮತದಾರರಲ್ಲಿ ಮನವಿ ಮಾಡಿದರು.
ನರೇಂದ್ರ ಮೋದಿ ಅವರ ಆಡಳಿತದಿಂದಾಗಿ ದೇಶ ಸುರಕ್ಷಿತವಾಗಿದೆ ರಾಜ್ಯದಲ್ಲಿ ಯಡಿಯೂರಪ್ಪ ಹಾಗೂ ಬೊಮ್ಮಾಯಿ ಅವರ ಸರ್ಕಾರ ಸಾಕಷ್ಟು ಅಭಿವೃದ್ಧಿ ಕೆಲಸಗಳನ್ನು ಮಾಡುತ್ತಿದ್ದು ಈ ಬಾರಿಯೂ ಬಿಜೆಪಿಯ ಕಮಲ ಅರಳುವುದು ಸತ್ಯ ಮತ್ತೊಮ್ಮೆ ಡಬಲ್ ಇಂಜಿನ್ ಸರ್ಕಾರ ಅಧಿಕಾರಕ್ಕೆ ಬರುವುದು ನಿಶ್ಚಿತ. ಎಂದು ತಿಳಿಸಿದರು.
ಬಿಜೆಪಿ ಅಭ್ಯರ್ಥಿ ಎಸ್ ಡಿ ದಿಲೀಪ್ ಕುಮಾರ್ ಮಾತನಾಡಿ ತಾಲೂಕಿನಲ್ಲಿ ಬದಲಾವಣೆಯನ್ನು ಗುಬ್ಬಿ ತಾಲೂಕಿನ ಜನರು ಕೇಳುತ್ತಿದ್ದಾರೆ ಖಂಡಿತವಾಗಿಯೂ ಈ ಬಾರಿ ಬಿಜೆಪಿ ತಾಲೂಕಿನಲ್ಲಿ ಹಾಗೂ ರಾಜ್ಯದಲ್ಲಿ ಆಡಳಿತಕ್ಕೆ ಬರುವುದು ಸತ್ಯ ಸುಸಜ್ಜಿತ ಆಸ್ಪತ್ರೆಗಳು,ಸರಕಾರಿ ಶಾಲೆಗಳು ಪ್ರತಿಯೊಂದು ಕೊಳವೆ ಬಾವಿಗೆ ಟಿ.ಸಿ ಸೇರಿದಂತೆ ರೈತರ ಪರವಾಗಿ ತಾಲೂಕಿನ ಸಮಗ್ರ ಅಭಿವೃದ್ಧಿಗೆ ಶ್ರಮಿಸಲು ಪಣತೊಟ್ಟಿದ್ದೇವೆ ನಾನು ಗೆದ್ದಲ್ಲಿ ಕೇವಲ ನಾನು ಮಾತ್ರ ಶಾಸಕನಾಗದೆ ನಿಮ್ಮ ಸೇವಕನಾಗಿ ನೀವೇ ಶಾಸಕರಂತೆ ತಾಲೂಕಿನಲ್ಲಿ ಇರುತ್ತೀರ ಹಾಗಾಗಿ ಮೇ 10 ರ ಚುನಾವಣೆಯವರೆಗೂ ಸಹ ಕಾರ್ಯಕರ್ತರು ಅಮ್ಮ ಬೂತ್ ಮಟ್ಟದಲ್ಲಿ ಕೆಲಸ ಮಾಡುವ ಮೂಲಕ ಬಿಜೆಪಿಯ ಅಭ್ಯರ್ಥಿ ಗೆಲುವು ಸಾದಿಸುವಂತೆ ಸಹಕರಿಸಬೇಕು ಎಂದು ಮನವಿ ಮಾಡಿದರು.
ಈ ಮೆರವಣಿಗೆಯಲ್ಲಿ ಹತ್ತು ಸಾವಿರಕ್ಕೂ ಹೆಚ್ಚು ಸಂಖ್ಯೆಯಲ್ಲಿ ಕಾರ್ಯಕರ್ತರು ಅಭಿಮಾನಿಗಳು ಮತದಾರರು ಹಾಜರಿದ್ದರು.ಇದೇ ಸಂದರ್ಭದಲ್ಲಿ ರಾಜ್ಯ ಬಿಜೆಪಿ ಪ್ರಧಾನ ಕಾರ್ಯದರ್ಶಿ ವಿನಯ್ ಬಿದರೆ, ಸಂಸದ ಜಿಎಸ್ ಬಸವರಾಜು, ಚುನಾವಣಾ ಉಸ್ತುವಾರಿ ಸಂಜಯ್ ಬಾಟ್ಯ, ಜಿಲ್ಲಾಧ್ಯಕ್ಷ ರವಿಶಂಕರ್, ಜಿಲ್ಲಾ ಕಾರ್ಯದರ್ಶಿ ಹೆಚ್.ಟಿ.ಭೈರಪ್ಪ, ತಾಲೂಕು ಅಧ್ಯಕ್ಷ ಬಿ ಎಸ್ ಪಂಚಾಕ್ಷರಿ, ಪ್ರಧಾನ ಕಾರ್ಯದರ್ಶಿ ಯತೀಶ್. ವಿಸ್ತಾರಕ್ ಭರತ್, ಪಟ್ಟಣ ಪಂಚಾಯ್ತಿ ಅಧ್ಯಕ್ಷ ಜಿ ಎನ್ ಅಣ್ಣಪ್ಪ ಸ್ವಾಮಿ, ಹಾಗೂ ಬಿ ಜೆ ಪಿ ಯ ಪಟ್ಟಣ ಪಂಚಾಯ್ತಿ ಸದಸ್ಯರು ಮತ್ತು ಜಿಲ್ಲಾಪಂಚಾಯ್ತಿ ಮಾಜಿ ಸದಸ್ಯ ಪಿ.ಬಿ.ಚಂದ್ರಶೇಖರ್ ಬಾಬು, ತುಮಕೂರು ಹಾಲು ಉತ್ಪಾದಕರ ಒಕ್ಕೂಟದ ನಿರ್ದೇಶಕರಾದ ಚಂದ್ರಶೇಖರ್ ಹಾಗೂ ಸಾಗರನಹಳ್ಳಿ ವಿಜಯ್ ಕುಮಾರ್ ಮುಖಂಡರಾದ ಸಾಗರನಹಳ್ಳಿ ನಂಜೇಗೌಡ, ಎನ್‌ಸಿ ಪ್ರಕಾಶ್, ಹಿತೇಶ್ ಹೆಚ್ ಸಿ ಪ್ರಭಾಕರ್, ಸೇರಿದಂತೆ ಸಾವಿರಾರು ಕಾರ್ಯಕರ್ತರು ಮುಖಂಡರು. ಇನ್ನಿತರರು ಹಾಜರಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ