ಕಾರುಗಳ ನಡುವೆ ಡಿಕ್ಕಿ ಮೂರು ಮಂದಿಗೆ ಗಾಯ

ದಾವಣಗೆರೆ:

ಎರಡು ಕಾರುಗಳ ನಡುವೆ ಪರಸ್ಪರ ಡಿಕ್ಕಿ ಸಂಭವಿಸಿದ ಘಟನೆ ದಾವಣಗೆರೆ ತಾಲೂಕಿನ ಆನಗೋಡು ಬಳಿಯ ರಾ. ಹೆದ್ದಾರಿಯ 4 ರಲ್ಲಿನ ಸೇತುವೆ ಮೇಲೆ ಸಂಭವಿಸಿದೆ. ಘಟನೆಯಲ್ಲಿ ಮೂವರರು ಗಾಯಗೊಂಡಿದ್ದು, ಅವರನ್ನು ದಾವಣಗೆರೆಯ ಖಾಸಗಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ.ಎರಡು ಕಾರುಗಳು ಆನಗೋಡು ಕಡೆಯಿಂದ ದಾವಣಗೆರೆ ಕಡೆಗೆ ಬರುತ್ತಿದ್ದವು. ಈ ವೇಳೆ ರಸ್ತೆಯ ಮೇಲೆ ನೀರು ನಿಂತುಕೊಂಡಿದ್ದು, ನೀರಿನ ಮೇಲೆ ಕಾರು ಹಾದು ಹೋಗಿವೆ. ನೀರು ಹಿಂದಿನ ಕಾರಿಗೆ ಚಿಮ್ಮಿದ ಪರಿಣಾಮ ಚಾಲಕನಿಗೆ ರಸ್ತೆ ಕಾಣದಂತಾಗಿದ್ದು, ಆತ ಮುಂದೆ ತೆರಳುತ್ತಿದ್ದ ಮಾರುತಿ ಕಾರಿಗೆ ಡಿಕ್ಕಿ ಹೊಡೆದಿದ್ದಾನೆ. ಎರಡು ಕಾರಿನಲ್ಲಿದ್ದ ಮೂವರಿಗೆ ಗಾಯಗಳಾಗಿವೆ.

 

ಗಾಯಾಳುಗಳನ್ನ ಜಿಪಂ ಸದಸ್ಯ ಬಸವಂತಪ್ಪ ಹಾಗೂ ಸ್ಥಳೀಯರು ರಕ್ಷಣೆ ಮಾಡಿ ದಾವಣಗೆರೆಯ ಖಾಸಗಿ ಆಸ್ಪತ್ರೆಗೆ ರವಾನೆ ಮಾಡಿದ್ದಾರೆ ಮತ್ತು ಕ್ರೀಟಾ ಕಾರ್ ನ ಮುಂಭಾಗದ ಜಖಂಗೊಂಡಿದೆ. ದಾವಣಗೆರೆ ಗ್ರಾಮಾಂತರ ಪೆÇಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು, ಪೆÇಲೀಸರು ಭೇಟಿ ನೀಡಿ ಪರಿಶೀಲನೆಯನ್ನ ನಡೆಸುತ್ತಿದ್ದಾರೆ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

 

Recent Articles

spot_img

Related Stories

Share via
Copy link