ಮಧುಗಿರಿ: ವಿವಿಧ ಕಾರಣಗಳಿಂದ ಮೂರು ಶಿಕ್ಷಕರ ಅಮಾನತ್ತು

ಮಧುಗಿರಿ :

   ಶೈಕ್ಷಣಿಕ ಜಿಲ್ಲೆಯ ಕ್ಷೇತ್ರಶಿಕ್ಷಣಾಧಿಕಾರಿ ಕೆ ಎನ್ ಹನುಮಂತರಾಯಪ್ಪ ಮೂವರು ಶಿಕ್ಷಕರನ್ನು ವಿವಿಧ ಕಾರಣಗಳಿಂದಾಗಿ ಅಮಾನತ್ತು ಮಾಡಿ ಆದೇಶಿಸಿದ್ದಾರೆ.

   ತಾಲ್ಲೂಕಿನ ಐ ಡಿ ಹಳ್ಳಿ ಹೋಬಳಿಯ ಹಳೇ ಇಟಕಲೋಟಿ ಗ್ರಾಮದ ಸರ್ವೇ ನಂಬರ್ 48 ರಲ್ಲಿ 3 ಎಕರೆ 33 ಗುಂಟೆ ಜಮೀನಿನ ಭೂ ಮಂಜೂರಾತಿ ಸಂಬಂದದಲ್ಲಿ ದಾಖಲಾತಿಗಳನ್ನು ತಿದ್ದಿ ನಕಲಿ ಸಾಗುವಳಿ ಪಡೆದ ಪ್ರಕರಣಕ್ಕೆ ಸಂಬಂದಿಸಿದಂತೆ ಕಾರಣರಾಗಿರುವ ಹಿನ್ನೆಲೆಯಲ್ಲಿ ಶಿಕ್ಷಕನ ಮೇಲೆ ಶಿಸ್ತು ಕ್ರಮ ಕೈಗೊಳ್ಳುವಂತೆ ಉಪವಿಭಾಗಾಧಿಕಾರಿಗಳು ಸೂಚಿಸಿದ್ದರು ಈ ಹಿನ್ನೆಲೆಯಲ್ಲಿ ಶಾಲಾ ಸಹ ಶಿಕ್ಷಕ ವೆಂಕಟಪ್ಪ ಆರ್ ರವರನ್ನು ಅಮಾನತ್ತು ಮಾಡಲಾಗಿದೆ.

   ತಾಲೂಕಿನ ಕೊಡಿಗೇನಹಳ್ಳಿ ಹೋಬಳಿಯ ದೊಡ್ಡದಾಳವಟ್ಟ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಸಹ ಶಿಕ್ಷಕರಾದ ಸಂಜೀವಮೂರ್ತಿ ಎ.ಆ‌ರ್, ರವರು

   ಸರ್ಕಾರಿ ಶಾಲೆಯ ಮಕ್ಕಳಿಗೆ ಅಸುರಕ್ಷತೆಯ ಸ್ಪರ್ಷ ಮಾಡುತ್ತಾರೆ ಎಂದು ಮಕ್ಕಳ ಸಹಾಯವಾಣಿ-1098 ಕ್ಕೆ ಕರೆ ಮಾಡಲಾಗಿತ್ತು. ಮಕ್ಕಳ ಸಹಾಯವಾಣಿ ಕಛೇರಿಯ ಸಿಬ್ಬಂದಿ ಸಂಬಂಧಪಟ್ಟ ಶಾಲೆಗೆ ಭೇಟಿ ನೀಡಿ ಮಕ್ಕಳಿಗೆ ಸಮಾಲೋಚನೆ ನಡೆಸಿದಾಗ ಶಿಕ್ಷಕ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದು, ಹೆಣ್ಣು ಮಕ್ಕಳನ್ನು ಶೌಚಾಲಯಕ್ಕೆ ಬಿಡುವುದಿಲ್ಲ,

   ಮಕ್ಕಳ ಕೈಯಲ್ಲಿ ಯಾವಾಗಲೂ ನೃತ್ಯ ಮಾಡಿಸುವುದು ಹಾಗೂ ಪಠ್ಯಕ್ರಮವನ್ನು ಸಕಾಲಕ್ಕೆ ಮುಗಿಸಿದೆ ಸರಿಯಾಗಿ ಪಾಠವನ್ನು ಮಾಡದೆ ಇದ್ದೂ ಶಾಲೆಯ ಮಕ್ಕಳಿಗೆ ಅಸುರಕ್ಷತೆಯ ಸ್ಪರ್ಷ ಮಾಡುತ್ತಾರೆ ಎಂದು ಸಮಾಲೋಚನೆಯಲ್ಲಿ ಮಕ್ಕಳು ಆರೋಪಿಸಿದ್ದರಿಂದ ಶಿಕ್ಷಕನನ್ನು ಅಮಾನತ್ತು ಪಡಿಸಲಾಗಿದೆ.

 

ಪಟ್ಟಣದ ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಪಾಠ ಶಾಲೆಯ ಮುಖ್ಯ ಶಿಕ್ಷಕಿ ಅನುಪಮಾ ಹೆಚ್ ಎಸ್

ರವರು ಪಿ.ಎಂ.ಶ್ರೀ ಅನುದಾನ ಸರಿಯಾಗಿ ನಿರ್ವಹಿಸಿರುವುದಿಲ್ಲವೆಂದು ಹಾಗೂ ಅನುದಾನ ದುರ್ಬಳಕೆಯಾಗಿದ್ದು ತಪಾಸಣೆಯಲ್ಲಿ ಶಾಲಾನುದಾನ ಬಿಡುಗಡೆಯಾಗಿದ್ದು 2023 ರ ಸೆ: 12 ರಂದು ರೂ 25000 ಗಳನ್ನು ಶಾಲೆಯ ಆಯಾ ಗೌರಿಬಾಯಿ ಇವರ ಹೆಸರಿನಲ್ಲಿ ಚೆಕ್ ನೀಡಿ ಒಂದೆ ಬಾರಿ ನಗಧೀಕರಿಸಿದ್ದಾರೆ. 2023-24 ನೇ ಸಾಲಿನಲ್ಲಿ ಪಿ.ಎಂ.ಶ್ರೀ ಅನುದಾನದಲ್ಲಿ ರೂ 6.30 ಲಕ್ಷ ಬಿಡುಗಡೆಯಾಗಿರುತ್ತದೆ ಇದರಲ್ಲಿ ಮಾರ್ಚಿ-2024 ರ ಅಂತ್ಯಕ್ಕೆ ರೂ 76,313 ರೂಗಳು ಖರ್ಚಾಗಿರುತ್ತದೆ ಇದರಲ್ಲಿ ರೂ 18,750 ಗಳ ಸರ್ಮಪಕ ದಾಖಲೆ ಒದಗಿಸಿಲ್ಲ. ಪಿ.ಎಂ.ಶ್ರೀ ಅನುದಾನದಲ್ಲಿ ಡಿಜಿಟಲ್ ಗ್ರಂಥಾಲಯಕ್ಕೆ ರೂ 2,93,877 ಗಳನ್ನು ಖರ್ಚು ಮಾಡಿರುತ್ತಾರೆ ಇದ್ದಕ್ಕ ಪೂರಕವಾಗಿ ಬಿಲ್ ಇರುವುದಿಲ್ಲ ಹಾಗೂ ಅದಕ್ಕೆ ಆದಾಯ ತೆರಿಗೆ ಕಟಾವಣೆ ಮಾಡಿರುವುದಿಲ್ಲ ಹಾಗೂ ಮತ್ತಿತ್ತರ ಕಾರಣಗಳಿಂದಾಗಿ ಮುಖ್ಯಶಿಕ್ಷಕಿಯನ್ನು ಅಮಾನತ್ತು ಪಡಿಸಿದ್ದಾರೆ.

Recent Articles

spot_img

Related Stories

Share via
Copy link