ಬೆಂಗಳೂರು-ಕಲಬುರಗಿ ನಡುವಿನ ವಂದೇ ಭಾರತ್ ರೈಲಿನ ವೇಳಾಪಟ್ಟಿ…!

ಬೆಂಗಳೂರು

 ಬೆಂಗಳೂರು-ಕಲಬುರಗಿ ನಡುವಿನ ನೂತನ ವಂದೇ ಭಾರತ್ ರೈಲಿಗೆ ಪ್ರಧಾನಿ ನರೇಂದ್ರ ಮೋದಿ ಚಾಲನೆ ನೀಡಿದ್ದಾರೆ. ರೈಲುಗಳ ಸಂಚಾರ ಮಾರ್ಚ್‌ 15ರಿಂದ ಬೆಂಗಳೂರು, ಮಾರ್ಚ್‌ 16ರಿಂದ ಕಲಬುರಗಿಯಿಂದ ಆರಂಭವಾಗಲಿದೆ.ಬೆಂಗಳೂರಿನ ಬೈಯಪ್ಪನಹಳ್ಳಿಯಲ್ಲಿರುವ ಸರ್. ಎಂ. ವಿಶ್ವೇಶ್ವರಯ್ಯ ಟರ್ಮಿನಲ್ ಮತ್ತು ಕಲಬುರಗಿ ನಡುವೆ ನೂತನ ವಂದೇ ಭಾರತ್ ರೈಲು ಸಂಚಾರ ನಡೆಸಲಿದೆ. ರೈಲು ನಂಬರ್ 22232 ಸರ್. ಎಂ. ವಿಶ್ವೇಶ್ವರಯ್ಯ ಟರ್ಮಿನಲ್ ಮತ್ತು ಕಲಬುರಗಿ ನಡುವೆ ಮಾರ್ಚ್ 15ರಿಂದ ಸಂಚಾರ ನಡೆಸಲಿದೆ.ರೈಲು ನಂಬರ್ 22231 ಕಲಬುರಗಿ-ಸರ್. ಎಂ. ವಿಶ್ವೇಶ್ವರಯ್ಯ ಟರ್ಮಿನಲ್ ನಡುವೆ ಮಾರ್ಚ್ 16ರಿಂದ ಸಂಚಾರ ನಡೆಸಲಿದೆ ಎಂದು ಭಾರತೀಯ ರೈಲ್ವೆ ಹೇಳಿದೆ. 8 ಬೋಗಿಗಳ ರೈಲು ವಾರದಲ್ಲಿ 6 ದಿನಗಳ ಕಾಲ ಸಂಚಾರ ನಡೆಸಲಿದೆ.

ವೇಳಾಪಟ್ಟಿ: 

    ಈಗಾಗಲೇ ಭಾರತೀಯ ರೈಲ್ವೆ ಸರ್. ಎಂ. ವಿಶ್ವೇಶ್ವರಯ್ಯ ಟರ್ಮಿನಲ್ ಮತ್ತು ಕಲಬುರಗಿ ನಡುವಿನ ರೈಲಿನ ವೇಳಾಪಟ್ಟಿ ಬಿಡುಗಡೆ ಮಾಡಿದೆ. ಪ್ರತಿನಿತ್ಯ ಬೆಳಗ್ಗೆ 5.15ಕ್ಕೆ ಕಲಬುರಗಿಯಿಂದ ಹೊರಟು ಮಧ್ಯಾಹ್ನ 12.45ಕ್ಕೆ ರೈಲು ಬೆಂಗಳೂರು ತಲುಪಲಿದೆ. ಮಧ್ಯಾಹ್ನ ಬೆಂಗಳೂರಿನಿಂದ ಹೊರಟು ರಾತ್ರಿ 11.30ಕ್ಕೆ ಕಲಬುರಗಿಗೆ ತಲುಪಲಿದೆ.

    ಈ ರೈಲು ಕಲಬುರಗಿ, ವಾಡಿ, ರಾಯಚೂರು, ಮಂತ್ರಾಲಯ ರೋಡ್, ಗುಂತಕಲ್, ಅನಂತಪುರ, ಧರ್ಮಾವರಂ, ಯಲಹಂಕ ನಿಲ್ದಾಣದಲ್ಲಿ ನಿಲುಗಡೆಗೊಂಡು ಸರ್. ಎಂ. ವಿಶ್ವೇಶ್ವರಯ್ಯ ಟರ್ಮಿನಲ್ ತಲುಪಲಿದೆ. ಕಲಬುರಿಯಿಂದ 5.15ಕ್ಕೆ ಹೊರಡುವ ರೈಲು 5.40ಕ್ಕೆ ವಾಡಿ, 6.53ಕ್ಕೆ ರಾಯಚೂರು, 7.08 ಮಂತ್ರಾಲಯ ರೋಡ್, ಗುಂತಕಲ್‌ಗೆ 8.25ಕ್ಕೆ, 9.28ಕ್ಕೆ ಅನಂತಪುರ, 10.50ಕ್ಕೆ ಧರ್ಮವರಂ, 12.45ಕ್ಕೆ ಯಲಹಂಕಕ್ಕೆ ಬಂದು ಸೇರುತ್ತದೆ. ಯಲಹಂಕದಿಂದ 12.47ಕ್ಕೆ ಹೊರಟು ಸರ್. ಎಂ. ವಿಶ್ವೇಶ್ವರಯ್ಯ ನಿಲ್ದಾಣಕ್ಕೆ 2 ಗಂಟೆಗೆ ಬರುತ್ತದೆ.

     ಬೆಂಗಳೂರು-ಕಲಬುರಗಿ ರೈಲು ಮಧ್ಯಾಹ್ನ 2.40ಕ್ಕೆ ಸರ್‌. ಎಂ. ವಿಶ್ವೇಶ್ವರಯ್ಯ ನಿಲ್ದಾಣದಿಂದ ಹೊರಡುತ್ತದೆ. ಯಲಹಂಕ 3.08, 5.45ಕ್ಕೆ ಧರ್ಮವರಂ, 5.48ಕ್ಕೆ ಅನಂತಪುರ, ಗುಂತಕಲ್‌ಗೆ 7 ಗಂಟೆ, ಮಂತ್ರಾಲಯ ರೋಡ್ 8.15ಕ್ಕೆ, ರಾಯಚೂರಿಗೆ 8. 45ಕ್ಕೆ, 11.05ಕ್ಕೆ ವಾಡಿ, ಕಲಬುರಗಿಗೆ 11.30ಕ್ಕೆ ಬಂದು ಸೇರಲಿದೆ. ಲೋಕಸಭೆ ಚುನಾವಣೆ ಹತ್ತಿರವಿರುವಾಗಲೇ ಕರ್ನಾಟಕ ರಾಜ್ಯಕ್ಕೆ ವಂದೇ ಭಾರತ್ ರೈಲು ಕೊಡುಗೆಯಾಗಿ ಕೇಂದ್ರ ಸರ್ಕಾರ ನೀಡಿದೆ. ಬೆಂಗಳೂರು-ಕಲಬುರಗಿ ನಡುವೆ ಹೊಸ ರೈಲು ಬೇಕು ಎಂಬ ಬೇಡಿಕೆ ಇತ್ತು.

    ಈಗ ವಂದೇ ಭಾರತ್ ರೈಲನ್ನು ನೀಡಲಾಗಿದೆ. ನೂತನ ರೈಲಿಗೆ ಮಾರ್ಚ್ 12ರಂದು ನರೇಂದ್ರ ಮೋದಿ ಹಸಿರು ನಿಶಾನೆಯನ್ನು ತೋರಿಸಿದ್ದಾರೆ. ಈ ವಂದೇ ಭಾರತ್ ರೈಲು ಬೆಂಗಳೂರಿನ ಬೈಯಪ್ಪನಹಳ್ಳಿಯಲ್ಲಿರುವ ಸರ್. ಎಂ. ವಿಶ್ವೇಶ್ವರಯ್ಯ ಟರ್ಮಿನಲ್‌ಗೆ ಬರುತ್ತದೆ. ಮೆಜೆಸ್ಟಿಕ್ ನಿಲ್ದಾಣಕ್ಕೆ ಬರುತ್ತದೆ. ಮೆಜೆಸ್ಟಿಕ್‌ಕ್‌ಗೆ ನಮ್ಮ ಮೆಟ್ರೋ, ಬಿಎಂಟಿಸಿ ಬಸ್ ಮೂಲಕ ಬೈಯಪ್ಪನಹಳ್ಳಿಯಿಂದ ಬರಬಹುದು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page SUBSCRIBE ಮಾಡಿ